ಬಿಜೆಪಿಯಲ್ಲಿ ಬಂಡಾಯದ ಬೆಂಕಿ : ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕ ರಾಮದಾಸ್ ಗರಂ!

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮೈಸೂರು ಶಾಸಕ ಎಸ್.ಎ.ರಾಮದಾಸ್ ಅಸಮಧಾನಗೊಂಡಿದ್ದು ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಕ್ಕೆ ಗೈರಾಗುವ ಸಾಧ್ಯತೆ ಇದೆ. ಸಚಿವ ಸಂಪುಟ ರಚನೆಯಾದಾಗಿನಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಹೌದು… ಇಂದು ಮೈಸೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕೋವಿಡ್ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಆದರೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಸಭೆಗೆ ಗೈರಾಗುವ ಮೂಲಕ ರಾಮದಾಸ್ ತಮ್ಮ ಅಸಮಧಾನ ಹೊರಹಾಕುತ್ತಿದ್ದಾರೆ. ರಾಮದಾಸ್ ಟ್ವೀಟ್ ನಲ್ಲಿ, “ಯಾರು ಪಕ್ಷಕ್ಕಾಗಿ ದುಡಿದಿದ್ದಾರೋ. ಯಾರು ನಿಜವಾಗಲೂ ಅರ್ಹರೋ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಾಜ್ಯವನ್ನು ದೇಶದಲ್ಲಿ ಗುರುತಿಸುವಂತೆ ಇವರು ಮಾಡಲಿ” ಎಂದು ಬರೆದಿದ್ದರು.

ನಾನು ಮಿಲಿಟರಿ ಅಧಿಕಾರಿ ಮಗ. ಮಿಲಿಟರಿ ಅಧಿಕಾರಿಯ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕೂ ಬೇಸರಪಟ್ಟು ಕೊಳ್ಳುವುದಿಲ್ಲ. ಸಚಿವ ಸ್ಥಾನ ಸಿಗದಿದ್ದರೇ ಏನಾಯಿತು ಶಾಸಕನಾಗಿದ್ದುಕೊಂಡೇ ಕ್ಷೇತ್ರದದ ಅಭಿವೃದ್ಧಿಗಾಗಿ ದುಡಿಯವೆ. ಬಿಜೆಪಿ ಆಡಳಿತದಲ್ಲಿ ಮೈಸೂರು ಭಾಗಕ್ಕೆ ಸಚಿವಸ್ಥಾನ ಸಿಕ್ಕಿಲ್ಲ. ಖುದ್ದು ಯಡಿಯೂರಪ್ಪ ನವರೇ ನನ್ನ ಹೆಸರು ಕಳುಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅದು ಹೇಗೆ ಬದಲಾಯಿತೋ ಗೊತ್ತಿಲ್ಲ ಎಂದ ಅಸಮಧಾನಗೊಂಡಿದ್ದಾರೆ.

ಒಟ್ಟಿನಲ್ಲಿ ಬಿಜೆಡಿಯಲ್ಲಿ ಬಂಡಾಯದ ಬೆಂಕಿ ಹೊತ್ತುಕೊಂಡಿದ್ದು ಇದು ಯಾವ ಹಂತ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights