‘ಆಗ ಶಕ್ತಿ ಇರಲಿಲ್ಲ ಸುಮ್ನಿದ್ದೆವು. ಈಗಲೂ ಯಾಕೆ ಸುಮ್ಮನಿರಬೇಕು?’ ವಿವಾದಾತ್ಮಕ ಹೇಳಿಕೆ ಸಮರ್ಥಿಸಿಕೊಂಡ ಕೆಎಸ್ ಈಶ್ವರಪ್ಪ..!

‘ಆಗ ಶಕ್ತಿ ಇರಲಿಲ್ಲ ಸುಮ್ನಿದ್ದೆವು. ಈಗಲೂ ಯಾಕೆ ಸುಮ್ಮನಿರಬೇಕಾ?’ ಎಂದು ಪ್ರಶ್ನಿಸುವ ಮೂಲಕ ವಿವಾದಾತ್ಮಕ ಹೇಳಿಕೆಯನ್ನು ಕೆಎಸ್ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ನಾವು ಸುಮ್ಮನಿರಬೇಕಾ..? ನಮ್ಮ ಯುವಕರನ್ನು ಹೊಡೆಯುತ್ತಾರೆ ಸುಮ್ನಿರಬೇಕಾ..? ಕೊಲೆ ಮಾಡ್ತಾರೆ ಸುಮ್ನಿರಬೇಕಾ? ಗ್ರಾಮ ಪಂಚಾಯಿತಿ ಯಿಂದ ಪ್ರಧಾನ ವರೆಗೂ ನಮ್ಮ ಪಕ್ಷ ಇದೆ. ಈಗಲೂ ಸುಮ್ಮನಿರಬೇಕಾ? ಆಗ ಶಕ್ತಿ ಇರಲಿಲ್ಲ ಸುಮ್ನಿದ್ದೆವು. ಈಗಲೂ ಯಾಕೆ ಸುಮ್ಮನಿರಬೇಕು? ಎಂದು ಪ್ರಶ್ನಿಸಿದ್ದಾರೆ.

‘ಹೊಡೆದರೂ ಹೊಡಿರಿ ಅನ್ನೋ ಕಾಲ ಹೋಗಿದೆ. ನಿಮ್ಮ ಸುದ್ದಿಗೆ ಬಂದ್ರೆ ಬಿಡಬೇಡಿ. ನೀವು ಹೋಗಬೇಡಿ’ ನಾನು ಹೇಳಿದ್ದು ತಪ್ಪೇನಿದೆ ಎಂದು ತಮ್ಮ ವಿವಾದಾದ್ಮಕ ಹೇಳಿಕೆಯನ್ನು ಸಚಿವ ಕೆಎಸ್ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಈಗ ನಮ್ಮದೇ ಸರ್ಕಾರ ದೇಶಾದ್ಯಂತ ಅಧಿಕಾರದಲ್ಲಿದೆ. ಹಾಗಾಗಿ ನಮ್ಮ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಯನ್ನು ಮುಟ್ಟಿ ನೋಡಲಿ ಅದರ ಪರಿಣಾಮವೇ ಬೇರೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಶಿವಮೊಗ್ಗದಲ್ಲಿ ನಿನ್ನೆ ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಕೇವಲ ಅಧಿಕಾರಕ್ಕೆ ಇರುವ ಪಕ್ಷ ಅಲ್ಲ. ರಾಷ್ಟ್ರೀಯ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಹೊಂದಿರುವ ಪಕ್ಷ. ಈ ವಿಷಯವನ್ನು ಜನರಿಗೆ ಮುಟ್ಟಿಸಿ ಅವರ ಮನ ಗೆಲ್ಲಲು ಅಸಂಖ್ಯಾತ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಒಂದು ಕಾಲಕ್ಕೆ ನಮ್ಮ ಸಂಘಟನೆ ಬಹಳ ದುರ್ಬಲವಾಗಿತ್ತು. ಆಗ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ನಮ್ಮ ಹಿರಿಯರು ಬಿ ಕಾಂ, ಬಿ ಕೂಲ್ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದು ಮಾತನಾಡಿದ್ದರು.

ದೇಶಾದ್ಯಂತ ಎಲ್ಲಾ ಹಂತಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಕೇರಳ ಸೇರಿದಂತೆ ಎಲ್ಲೆಡೆ ಸಂಘಟನೆ ಬಲವಾಗಿದೆ. ಇಂತಹ ಸಂದರ್ಭದಲ್ಲ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಸಂಘಟನೆಯ ಪ್ರಮುಖರು ಬಿ ಕಾಂ ಎಂದು ಹೇಳುವ ಬದಲು ಬಿ ಫೇಸ್ ವಿತ್ ಸೇಮ್ ಸ್ಟಿಕ್ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ನಾವು ಸಂಘಟನಾತ್ಮಕವಾಗಿ ಶಕ್ತಿಯುತವಾಗಿ ಹೊರಹೊಮ್ಮಿದ್ದೇವೆ. ಆದರೆ ಇಷ್ಟಕ್ಕೆ ಮೈ ಮರೆಯಬಾರದು. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಸದಾ ಜಾಗೃತವಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದರು.

ಆರ್​ಎಸ್​ಎಸ್​ನವರಿಗೆ ಪ್ರಚೋದನಕಾರಿ ಹೇಳಿಕೆ ನೀಡುವವರೇ ಬೇಕು. ಇಂತಹ ಸಚಿವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಆಗಲ್ಲ. ಕರ್ನಾಟಕ ರಾಜ್ಯದ ಜನರ ಹಿತಕ್ಕಿಂತ ಗೊಂದಲ ಸೃಷ್ಟಿಸುವುದೇ ಇಂಥವರ ಉದ್ದೇಶ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಲೀಂ ಅಹ್ಮದ್ ಒತ್ತಾಯ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights