‘ಇದೊಂದು ಮಾನಗೆಟ್ಟ ಸರ್ಕಾರ’ ಬಿಜೆಪಿ ವಿರುದ್ಧ ಗುಡುಗಿದ ಸಿದ್ಧರಾಮಯ್ಯ…!

ಇದೊಂದು ಮಾನಗೆಟ್ಟ ಸರ್ಕಾರ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅಷ್ಟಕ್ಕೂ ಸಿದ್ಧರಾಮಯ್ಯ ಹೀಗೆ ಮಾತನಾಡಲು ಕಾರಣ ಏನು ಗೊತ್ತಾ…?

ವಿಧಾನಸಭೆ ಸಭಾತ್ಯಾಗ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯ, ಸರ್ಕಾರಕ್ಕೆ ನಾಲ್ಕು ತಿಂಗಳಿಗೆ ಮುಂಗಡ ಲೇಖಾನುದಾನ ತೆಗೆದುಕೊಂಡು ಮತ್ತೆ ಜೂನ್‌ನಲ್ಲಿ ಅಧಿವೇಶನ ಕರೆದು ಪೂರ್ಣ ಪ್ರಮಾಣದಲ್ಲಿ ಬಜೆಟ್ ಒಪ್ಪಿಗೆ ಪಡೆಯಲು ಸೂಚಿಸಲಾಗಿತ್ತಾದಾರೆ ಸರ್ಕಾರ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಇದೊಂದು ಮಾನಗೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನಸಭಾ ಅಧ್ಯಕ್ಷರು ರಾಜ್ಯ ಮತ್ತು ದೇಶದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವುದರಿಂದ ವಿಧಾನಸಭೆ ಮುಂದೂಡಬೇಕು. ಸಂಸತ್ತು ಕೂಡ ಮುಂದೂಡಲಾಗಿದೆ. ಹೀಗಾಗಿ ಸದನ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ಮಾ ,27,28. ರ ವರೆಗೆ ನಡೆಸುವಂತೆ ಪ್ರಸ್ತಾಪ ಮುಂದಿಟ್ಟಿದ್ದರು. ಬಜೆಟ್ ಹಾಗೂ ಬೇಡಿಕೆ ಮೇಲೆ ಚರ್ಚೆಗೆ ಎರಡೂ ಒಂದೆ ಬಾರಿ ಇಟ್ಟಿದ್ದರು. ಅದಕ್ಕೆ ಸಂಬಂಧ ಪಟ್ಟ ಸಚಿವರು ಉತ್ತರ ಕೊಡಬೇಕು.

“ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಎಲ್ಲಾ ಕ್ರಮಗಳಿಗೆ ನಮ್ಮ ಬೆಂಬಲ ಇದೆ. ಆದರೆ, ಇದು ಯುಗಾದಿ ಸಮಯ ಹೀಗಾಗಿ ಜನ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗಾಗಿ ಬೀದಿಗೆ ಇಳಿಯುವುದು ಅನಿವಾರ್ಯ. ಇದಕ್ಕೆ ಅವಕಾಶ ಮಾಡಿಕೊಡದಿದ್ದರೆ ಹೇಗೆ? ಸರ್ಕಾರ ಈ ಕುರಿತು ಅಗತ್ಯ ಕ್ರಮ ಜರುಗಿಸಬೇಕು. ಅಲ್ಲದೆ, ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ ಮಾತ್ರಕ್ಕೆ ರಸ್ತೆಗೆ ಇಳಿದ ಎಲ್ಲರ ಮೇಲೆ ಲಾಠಿ ಬೀಸಿ ದರ್ಪ ಮೆರೆಯುವುದು ಅಕ್ಷಮ್ಯ” ಎಂದು ಕಿಡಿಕಾರಿದ್ದಾರೆ.

ಕೊರೊನಾ ವೈರಸ್ ಹರಡುವಿಕೆ ಜೋರಾಗಿರುವುದರಿಂದ ಅಧಿವೇಶನವನ್ನು ನಡೆಸುವುದು ಸೂಕ್ತ ಅಲ್ಲ ಎನ್ನುವ ಕಾರಣಕ್ಕೆ ಬಜೆಟ್ ಗೆ ಒಪ್ಪಿಗೆ ಕೊಡುತ್ತೇವೆ ಸದನ ಮುಂದೂಡಿ ಎಂದು ಸಲಹೆ ನೀಡಿದೆವು. ಆದರೆ ಅವರು ಅನೇಕ ಬಿಲ್ ಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದು ಖಡಕ್ ಆಗಿ‌ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights