ಕಲ್ಲಿದ್ದಲು ಹಗರಣ: ಬಿಜೆಪಿ ಮಾಜಿ ಸಚಿವ ದಿಲೀಪ್‌ ರೇಗೆ 3 ವರ್ಷ ಜೈಲು ಶಿಕ್ಷೆ

ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಲ್ಲಿದ್ದಲು ಇಲಾಖೆಯ ಜಾರ್ಖಂಡ್‌ ರಾಜ್ಯ ಸವಿವರಾಗಿದ್ದ ದಿಲೀಪ್‌ ರೇ, 1999ರಲ್ಲಿ ಜಾರ್ಖಂಡ್‌ನ ಗಿರಿದಿಹ್ನಲ್ಲಿರುವ ಬ್ರಹ್ಮದಿಹಾ ಕಲ್ಲಿದ್ದಲು ಬ್ಯಾಕ್ ಅನ್ನು ಕ್ಯಾಸ್ಪ್ಯಾನ್ ಟೆಕ್ನಾಲಜೀರ್ ಲಿಮೀಟಿಚ್‌ಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದರು ಮತ್ತು ಇದರಲ್ಲಿ ಭಾರೀ ಅವ್ಯವಹಾರ ನಡೆಸಿದ್ದರು ಎಂದು ಸಾಬೀತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಶರ್ ಅವರು  ದಿಲೀಪ್‌ ರೇ ಅಪರಾಧಿ ಎಂದು ಕಳೆದ ವಾರ ಘೋಷಿಸಿದ್ದರು.

ಅಲ್ಲದೆ, ಅವರ ಆಡಳಿತಾವಧಿಯಲ್ಲಿ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ (ಸಿಟಿಎಲ್), ಅದರ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್ ಮತ್ತು ಕ್ಯಾಸ್ಟ್ರಾನ್ ಮೈನಿಂಗ್ ಲಿಮಿಟೆಡ್ (ಸಿಎಮ್‌ಎಲ್) ಗೆ ಸಹ ನ್ಯಾಯಾಲಯ ಅಪರಾಧಿಗಳು ಎಂದು ಹೇಳಿತ್ತು.

ಅಕ್ಟೋಬರ್‌ 06ರಂದು ವಿಚಾರಣೆಯಲ್ಲಿ ಮಾಜಿ ಸಚಿವ ದಿಲೀಪ್ ರೇ ಮತ್ತು ಮೂವರು ಅಧಿಕಾರಿಗಳು ಅಪರಾಧಿಗಳು ಎಂದು ತೀರ್ಪು ನೀಡಿದ್ದ ಕೋರ್ಟ್‌, ಶಿಕ್ಷಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಿರುವ ನ್ಯಾಯಾಲಯ ನಾಲ್ವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.


ಇದನ್ನೂ ಓದಿ: ಮೇವು ಹಗರಣ: ಲಾಲು ಪ್ರಸಾದ್ ಯಾದವ್‌ಗೆ ಜಾಮೀನು: ಲಾಲು ಭಾಗಿಯಾಗಿರುವ ಹಗರಣಗಳೆಷ್ಟು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights