ಛತ್ತೀಸ್‌ಘಡ: ದಂತೇವಾಡದಲ್ಲಿ 32 ಮಾವೋವಾದಿ ಹೋರಾಟಗಾರರು ಶರಣಾಗತಿ
ಛತ್ತೀಸ್‌ಘಡದ ಬಸ್ತಾರ್ ಪ್ರದೇಶದ ದಂತೇವಾಡ ಜಿಲ್ಲೆಯಲ್ಲಿ 32 ನಕ್ಸಲರು ಭಾನುವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾವೋವಾದಿ ಸಿದ್ದಾಂತದಿಂದ ನಿರಾಶರಾಗಿದ್ದೇವೆ ಎಂದು ಹೇಳಿರುವ ಮಾವೋವಾದಿ ಕಾರ್ಯಕರ್ತರು ಬಾರ್ಸೂರ್ ಪೊಲೀಸ್ ಠಾಣೆಯಲ್ಲಿ ತಾವಾಗಿಯೇ ಶರಣಾಗಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಾಂಗ್ಥಾನ್, ಕ್ರಾಂತಿಕಾರಿ ಮಹಿಲಾ ಆದಿವಾಸಿ ಸಂಘನ್, ಮಾವೋವಾದಿ ನಾಥ್ ಪ್ರಂಟಲ್ ಘಟಕ, ಚೆಟ್ನಾ ನಾಟ್ಯ ಮಾಂಡ್ಲಿ (ಮಾವೋವಾದಿಗಳ ಸಾಂಸ್ಕೃತಿಕ ಶಾಖೆ) ಮತ್ತು ಜನತಾನ ಸರ್ಕಾರ್ ಸಂಘಟನೆಗಳಿಗೆ ಸೇರಿದ 32 ಕಾರ್ಯಕರ್ತರು ಶರಣಾಗಿದ್ದಾರೆ. ಇವರಲ್ಲಿ 10 ಜನ ಮಹಿಳೆಯರು ಎಂದು ಪೊಲೀಸರು ತಿಳಿದ್ದಾರೆ.

ಈ 32 ಕಾರ್ಯಕರ್ತರಲ್ಲಿ 19 ಮಂದಿ ಬಕೆಲಿ ಗ್ರಾಮದ ಸ್ಥಳೀಯರು, ನಾಲ್ವರು ಕೊರ್ಕೊಟ್ಟಿಯವರು ಮತ್ತು ತಲಾ ಮೂವರು ಉಡೆನಾರ್, ತುಮರಿಗುಂಡ ಮತ್ತು ಮಾತಾಸಿ ಗ್ರಾಮಗಳವರು ಎಂದು ಅವರು ಹೇಳಿದರು.
ಇತ್ತೀಚೆಗೆ ಪೊಲೀಸರು ನಡೆಸಿದ ಲೋನ್ ವರ್ರತು (ಗೊಂಡಿ ಭಾಷೆಯ ಪದವಾಗಿದ್ದು, ಅರ್ಥ ನಿಮ್ಮ ಹಳ್ಳಿ\ಮನೆಗಳಿಗೆ ಹಿಂದಿರುಗಿ) ಅಭಿಯಾನದ ಅಡಿಯಲ್ಲಿ ಮಾವೋವಾದಿ ಕಾರ್ಯಕರ್ತರು ಶರಣಾಗತರಾಗಿದ್ದು, ಅವರಿಗೆ ತಲಾ 10,000 ರೂ.ಗಳ ತಕ್ಷಣದ ನೆರವು ನೀಡಲಾಗಿದ್ದು, ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಪ್ರಕಾರ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಇದನ್ನೂ ಓದಿ: ಖೈರ್ಲಾಂಜಿಯಿಂದ ಹತ್ರಾಸ್‌ವರೆಗೆ ದಲಿತರ ಮೇಲಿನ ಅತ್ಯಾಚಾರ ಮತ್ತು ದಮನದ ಕಥನ!

