ಸದ್ಯಕ್ಕಿಲ್ಲ ಸಂಪುಟ : ಬೊಮ್ಮಾಯಿ ಬಳಗ ವಿಸ್ತರಣೆ ಆಗಲು ಇನ್ನೆಷ್ಟು ದಿನ ಬೇಕು?

ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ನಾಲ್ಕು ದಿನಗಳಾದರೂ ಸಚಿವ ಸಂಪುಟ ಮಾತ್ರ ರಚನೆಯಾಗಿಲ್ಲ. ಸದ್ಯಕ್ಕೆ ಸಂಪುಟ ರಚನೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಬೊಮ್ಮಾಯಿ ಬಳಗ ವಿಸ್ತರಣೆ ಆಗಲು ಇನ್ನೆಷ್ಟು ದಿನ ಬೇಕು? ಎಂದು ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ.

ಸಂಪುಟ ರಚನೆಗೆ ಬಿಜೆಪಿಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದ್ದು ಸಚಿವಾಕಾಂಕ್ಷಿಗಳು ಭಾರೀ ಲಾಬಿ ಮಾಡುತ್ತಿದ್ದಾರೆ. ಸಂಪುಟ ಪಟ್ಟಿ ಹೈಕಮಾಂಡ್ ರೆಡಿ ಮಾಡ್ತಾಯಿದೆ ಎನ್ನಲಾಗುತ್ತಿದೆ. ಹೀಗಾಗಿ ಇನ್ನು ಒಂದು ವಾರ ಸಂಪುಟ ರಚನೆ ಮುಂದಕ್ಕೆ ಹೋದಂತೆ ಕಾಣುತ್ತಿದೆ. ಅಧಿಕಾರದಾಟದಲ್ಲಿ ನೆರೆ ಜನರ ಸಮಸ್ಯೆಗಳನ್ನು ಕೇಳೋರಿಲ್ಲದಂತಾಗಿದೆ.

ಕರವಾಳಿ, ಮಲೆನಾಡಿನಲ್ಲಿ ಭಾರೀ ಮಳೆಗೆ ಬೆಳೆ ನಾಶವಾಗಿ ರೈತರ ಸಂಕಷ್ಟ ಕೇಳಲು ಕೃಷಿ ಸಚಿವರಿಲ್ಲದೇ, ಕೊರೊನಾ ಅಬ್ಬರ ಹೆಚ್ಚಳದ ಮಧ್ಯೆ ಜನರ ಸಮಸ್ಯೆಗಳನ್ನು ಕೇಳಲು ಆರೋಗ್ಯ ಸಚಿವರಿಲ್ಲದೇ ಕರ್ನಾಟಕ ಸೊರಗುತ್ತಿದೆ.

ಆದರೆ ಇತ್ತ ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಿಎಂ ತಮಗೆ ಹೈಕಮಾಂಡ್ ನಿಂದ ಸಂಪುಟ ರಚನೆಯ ಬಗ್ಗೆ ಯಾವುದೇ ಕರೆ ಬಂದಿಲ್ಲ. ಹೈಕಮಾಂಡ್ ಸಚಿವರ ಪಟ್ಟಿ ತಯಾರಿಸುತ್ತದೆ. ಅವರ ಕರೆಗಾಗಿ ಕಾಯುತ್ತಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇನ್ನೂ ಸಂಪುಟ ರಚನೆಯಾಗದೇ ಇದ್ದರೇ ಕೊರೊನಾ ಹಾಗೂ ಪ್ರವಾಹ ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಒಬ್ಬರೇ ಒದ್ದಾಟ ನಡೆಸುವ ಸಂದರ್ಭ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಒಟ್ಟಿನಲ್ಲಿ ನೂತನ ಸಿಎಂ ಗೆ ಅಗ್ನಿ ಪರೀಕ್ಷೆ ಎದುರಾಗಿರುವುದ ಮಾತ್ರ ಸುಳ್ಳಲ್ಲ.

 

Spread the love

Leave a Reply

Your email address will not be published. Required fields are marked *