ದೀಪ ಹಚ್ಚೋಂದ್ರಿಂದ ಕೊರೊನಾ ವೈರಸ್ ಸಾಯುತ್ತೆ- ಬಿಜೆಪಿ ಶಾಸಕ ರಾಮ್‍ದಾಸ್

ನಿನ್ನೆಯಷ್ಟೇ ದೇಶದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಏಪ್ರಿಲ್ 5 ರ ರಾತ್ರಿ ಸರಿಯಾಗಿ 9 ಗಂಟೆಗೆ 9 ನಿಮಿಷ ದೀಪ ಅಥವಾ ಟಾರ್ಚ್ ಹಚ್ಚಿ ಎಂದು 130 ಕೋಟಿ ಭಾರತೀಯರಿಗೆ ಕರೆ ನೀಡಿದ್ದಾರೆ. ಇದನ್ನ ಯಾಕೆ ಪಾಲಿಸಬೇಕು ಎನ್ನುವುದಕ್ಕೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಉತ್ತರ ನೀಡಿದ್ದಾರೆ.

ಮೋದಿ ಹೇಳಿದಂತೆ ಪ್ರತೀ ಯೊಬ್ಬರು ಮನೆಯಲ್ಲಿ ದೀಪ ಹಚ್ಚಿದರೆ ಕೊರೊನಾ ವೈರಸ್ ದೀಪದ ಬಳಿ ಬರುತ್ತದೆ. ಬಂದು ಸಾಯುತ್ತದೆ ಎನ್ನುವ ಹೇಳಿಕೆಯನ್ನ ನೀಡಿದ್ದಾರೆ. ಹೀಗೆ ಮಾಡುವುದರಿಂದ ಕೊರೊನಾ ವೈರಸ್ ಸಾಯುತ್ತದೆ ಅನ್ನೋದಾಗಿದ್ದರೆ ಈ ವಿಚಾರವನ್ನ ಮೋದಿಯವರೇ ಹೇಳಬಹುದಿತ್ತು ಅಲ್ವಾ..? ಅಷ್ಕ್ಕೂ ರಾಮದಾಸ್ ಹೇಳುವಂತೆ ಕೊರೊನಾ ವೈರಸ್ ದೀಪ ಹಚ್ಚೋದ್ರಿಂದ ಸಾಯೋದಾಗಿತ್ತು ಅಂದರೆ ವೈದ್ಯಕೀಯವಾಘಿ ದಾಖಲಾಗಬೇಕಿತ್ತು ಅಲ್ವಾ…? ಆಸ್ಪತ್ರೆಗಳಲ್ಲಿ ಇದೇ ಿದೇ ರೀತಿ ಮಾಡಿದ್ದರೇ ಅದೆಷ್ಟೋ ವೈರಸ್ ಸತ್ತು ಹೋಗಿ ಅದೆಷ್ಟೋ ಜನರ ಪ್ರಾಣ ಉಳಿಯಬೇಕಿತ್ತು ಅಲ್ವಾ…?

ಬಿಜೆಪಿ ಶಾಸಕ ಈ ರೀತಿಯ ಹೇಳಿಕೆಯ ಮೂಲಕ ಮೈಸೂರಿನ ಎಂಜಿ ಮಾರುಕಟ್ಟೆಯಲ್ಲಿ ಕ್ಯಾಂಡಲ್, ಮಾಸ್ಕ್ ಹಾಗೂ ದೀಪ ವಿತರಣೆ ಮಾಡಿದ್ದಾರೆ. ಈ ವೇಳೆ ಮಾಸ್ಕ್ ಪಡೆಯಲು ಜನ ಮುಗಿಬಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಿದ್ದಾರೆ.

ಒಟ್ಟಿನಲ್ಲಿ ಯಾವುದೇ ದಾಖಲೆಗಳೇ ಇಲ್ಲದ ಇಂಥಹ ಹೇಳಿಕೆಗಳು ಜನರ ದಿಕ್ಕು ತಪ್ಪಿಸುತ್ತಿವೆ. ಹಾಗೊಂದು ವೇಳೆ ದೀಪ ಹಚ್ಚಿಯೇ ವೈರಸ್ ಸಾಯುವಂತಿದ್ದರೇ ಅದನ್ನು ಏಪ್ರಿಲ್ 5 ಕ್ಕೇ ಯಾಕೆ ಮಾಡಬೇಕು…? ಮೋದಿ ಹೇಳಿದ ದಿನದಿಂದಲೇ ಜನ ಯಾವಾಗ ಬೇಕಾದರೂ ಹಚ್ಚಬಹುದಾಗಿತ್ತು. ಒಂದು ಕಡೆ ಮೋದಿ ಅವರು ಒಂದೇ ದಿನ ಒಂದೇ ಸಮಯಕ್ಕೆ ದೀಪ ಹಚ್ಚಿಲು ಹೇಳುತ್ತಾರೆ. ಇದನ್ನ ಪಾಲಿಸಲು ಬಿಜೆಪಿ ಶಾಸಕ ರಾಮ್ ದಾಸ್ ಜನರನ್ನು ಗುಂಪು ಸೇರಿಸಿ ಕ್ಯಾಂಡಲ್ ವಿತರಣೆ ಮಾಡುತ್ತಾರೆ. ಇತ್ತ ಬೆಂಗಳೂರಿನಲ್ಲಿ ಸಿಎಂ ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಉಚಿತ ಹಾಲು ವಿತರಿಸಿ, ಇನ್ಮುಂದೆ ಉಚಿತ ಹಾಲು ಕೊಡುವುದಾಗಿ ಹೇಳಿ ಜನರನ್ನು ಗುಂಪು ಸೇರಿಸುತ್ತಾರೆ. ಒಟ್ಟಿನಲ್ಲಿ ಇವರೆಲ್ಲರ ಹೇಳಿಕೆಗಳಿಂದ, ನಡುವಳಿಕೆಗಳಿಂದ ಜನ ಗೊಂದಲಕ್ಕೀಡಾಗಿರೋದಂತು ಸತ್ಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights