ಕೊರೊನಾ ಸಂಕಷ್ಟ; ವಿಡಿಯೋ ಕಾಲ್​ನಲ್ಲೇ ಮದುವೆಯಾದ ಜೋಡಿ

ದೇಶದಲ್ಲಿ ಕೊರೋನಾ ವೃರಸ್‌ನಿಂದಾಗಿ ಬಿಕ್ಕಟ್ಟು ಶುರುವಾಗಿರುವ ಹಿನ್ನೆಲೆ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ದೇಶಾದ್ಯಂತ ಲಾಕ್​ಡೌನ್​ ಮಾಡಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನಿಗದಿಯಾಗಿರುವ ಮದುವೆಗಳನ್ನು ಸರಳವಾಗಿ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚು ಜನ ಸೇರದೇ ಕುಟುಂಬದ ಕೆಲವೇ ಮಂದಿ ಸೇರಿಕೊಂಡು ಮದುವೆ ಸಮಾರಂಭ ನೆರವೇರಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆ, ವಿಡಿಯೋ ಕಾಲ್​ನಲ್ಲೇ ಮದುವೆ ಮಾಡಿ ಮುಗಿಸಲಾಗಿದೆ.

ಹೌದು, ಮುಸ್ಲಿಂ ಯುವಕ ಮೊಹಮ್ಮದ್ ಮಿನ್ಹಜುದ್​ ವೈಶಿಷ್ಟ್ಯವಾಗಿ ಮದುವೆಯಾಗಿದ್ದಾರೆ. ಲಾಕ್​ಡೌನ್​ ಇರುವ ಕಾರಣಕ್ಕೆ ವಿಡಿಯೋ ಕಾಲ್​ನಲ್ಲೇ ಮದುವೆಯ ವಿಧಿ-ವಿಧಾನಗಳನ್ನು ಮಾಡಲಾಗಿದೆ. ವರ ಔರಂಗಾಬಾದ್​ನಲ್ಲಿ ಮತ್ತು ವಧು ಬೀಡ್​ ಪ್ರದೇಶದವರಾಗಿದ್ದು, ಇಬ್ಬರೂ ಸಹ ಅಂತರ ಕಾಯ್ದುಕೊಂಡೇ ಮದುವೆಯಾಗಿದ್ದಾರೆ.

ಈ ಮದುವೆ ಶುಕ್ರವಾರ ನೆರವೇರಿದ್ದು, ಇತರೆ ಮದುವೆಗಳಿಗಿಂತ ವಿಭಿನ್ನವಾಗಿದೆ. 6 ತಿಂಗಳ ಹಿಂದೆಯೇ ಎರಡು ಕುಟುಂಬದವರೂ ಸಹ ಮದುವೆ ದಿನಾಂಕ ನಿಗದಿ ಮಾಡಿದ್ದೆವು. ಆದರೆ ಈಗ ಕೊರೋನಾ ಭೀತಿಯಿಂದಾಗಿ ವಿಡಿಯೋ ಕಾಲ್​ನಲ್ಲೇ ಮದುವೆ ಮಾಡುವಂತಾಯಿತು. ನಮ್ಮ ಕುಟುಂಬದ ಹಿರಿಯ ಸದಸ್ಯರು ಒಗ್ಗೂಡಿ ಫೋನ್​ನಲ್ಲೇ ಮದುವೆ ಮಾಡಿದೆವು ಎಂದು ವರನ ತಂದೆ ಹೇಳಿದ್ದಾರೆ.

21 ದಿನಗಳ ಲಾಕ್​ ಡೌನ್ ಆದೇಶ ಜಾರಿಯಾದ ಬಳಿಕ ಅಗತ್ಯ ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಲ್ಯಾಣ ಮಂಟಪಗಳನ್ನು ಸಹ ಮುಚ್ಚಲಾಗಿದೆ. ಮದುವೆ ಸಮಾರಂಭಗಳನ್ನು ಹೆಚ್ಚು ಜನ ಸೇರದೆ ಸರಳವಾಗಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅತೀ ಹೆಚ್ಚಿನ ಪ್ರಮಾಣದಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights