ಪೇಪರ್ ಕಪ್ನಲ್ಲಿ ಟೀ ಕುಡಿದರೆ ದೇಹ ಸೇರುತ್ತೆ ಪ್ಲಾಸ್ಟಿಕ್ – ಖರಗ್ಪುರ ಐಐಟಿ ಸಂಶೋಧನೆ!

ಬಹುತೇಕ ಜನರಿಗೆ ದಿನ ಫ್ರೆಶ್ ಆಗಿ ಆರಂಭ ಆಗಬೇಕು ಅಂದ್ರೆ ಟೀ ಬೇಕು. ಹೀಗಾಗಿ ಬೆಳಿಗ್ಗೆ ವಾಕಿಂಗ್, ಜಾಗಿಂಗ್ ಹೋದಾಗ ಹೋಟೆಗಳಲ್ಲಿ, ಟೀ ಶಾಪ್ ಗಳಲ್ಲಿ ಟೀ-ಕಾಫಿ ಕುಡಿಯುತ್ತಾರೆ. ಸ್ನೇಹಿತರೊಂದಿಗೆ ಕೊಂಚ ಸಮಯ ಕಳಿಯಬೇಕಾದ್ರೆ, ಕೆಲಸದ ಮಧ್ಯೆ ಕೊಂಚ ಬ್ರೇಕ್ ಇದ್ದಾಗಲೂ ಟೀ ಅಥವಾ ಕಾಫಿ ಮೊರೆ ಹೋಗ್ತಾರೆ. ಹೀಗೆ ಅಧಿಕ ಸಲ ಟೀ-ಕಾಫಿಯನ್ನ ಕುಡಿಯುವವರು ಒಂದು ವಿಚಾರ ಗಮನದಲ್ಲಿಡಲೇಬೇಕು. ಯಾಕಂದ್ರೆ ಪ್ರತಿನಿತ್ಯ ಪೇಪರ್ ಕಪ್ ನಲ್ಲಿ ಕುಡಿಯುವ ಟೀ ಅಥವಾ ಕಾಫಿ ನಿಮ್ಮ ದೇಹವನ್ನು ವಿಷವಾಗಿ ಸೇರಬಹುದು.

ಹೌದು… ಆಶ್ಚರ್ಯ ಎನ್ನಿಸಿದರೂ ಇದು ನಿಜ ಎನ್ನುತ್ತಿದೆ ಖರಗ್ಪುರ ಐಐಟಿ ಸಂಶೋಧನೆ. ಇದರ ಪ್ರಕಾರ, ಪೇಪರ್ ಕಪ್ ನಲ್ಲಿ ಚಹಾ ಸೇವಿಸುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹ ಸೇರುತ್ತವೆ. ಪ್ಲಾಸ್ಟಿಕ್ ಕಪ್ ನಲ್ಲಿ ಬಿಸಿ ಕಾಫಿ ಅಥವಾ ಚಹಾ ಹಾಕಿದಾಗ ಸೂಕ್ಷ್ಮಾತಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಅದರಲ್ಲಿ ಸೇರಿಕೊಳ್ಳುತ್ತವೆ. ಸಾಮಾನ್ಯವಾಗಿ ಪೇಪರ್ ಕಪ್ ಗಳು ಪ್ಲಾಸ್ಟಿಕ್ ಪದರಗಳನ್ನು ಹೊಂದಿರುತ್ತವೆ. ಇದರಲ್ಲಿ ಕೊಲವೊಂದು ಪಾಲಿಮರ್ ಗಳನ್ನು ಬಳಕೆ ಮಾಡಲಾಗುತ್ತದೆ. ಇವುಗಳು ಬಿಸಿ ನೀರಿನಲ್ಲಿ ಕರಗುತ್ತವೆ ಎಂದು ಐಐಟಿಯ ಸಹಾಯಕ ಪ್ರಾಧ್ಯಾಪಕಿ ಸುಧಾ ಗೋಯಲ್ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಸದ್ಯ ಕ್ಲಾಸ್ ಹಾಗೂ ಪ್ಲೇಟ್ ಗಳ ಬಳಕೆ ಬಹುತೇಕ ಕಡಿಮೆಯಾಗಿದ್ದು, ಅತಿ ಹೆಚ್ಚು ಯ್ಯೂಸ್ ಆ್ಯಂಡ್ ಥ್ರೂ ಪೇಪರ್ ಕಪ್, ಪ್ಲೇಟ್ ಗಳ ಬಳಕೆ ಅಧಿಕವಾಗುತ್ತಿದೆ. ಹೀಗಾಗಿ ಜನ ಕೂಡ ಇದರ ಅಡ್ಡಪರಿಣಾಮಗಳನ್ನು ತಿಳಿಯದೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಪೇಪರ್ ಕಪ್ ಗಳ ಬಳಕೆ ದೇಹದಲ್ಲಿ ಕ್ರಮೇಣ ನಾನಾ ಸಮಸ್ಯೆಗಳನ್ನು ಹುಟ್ಟುಹಾಕಬಹುದು.

ಇದಕ್ಕೆ ಸಾಕ್ಷಿ ಐಐಟಿ ನಡೆಸಿದ ಸಂಶೋಧನೆಯಾಗಿದೆ. 15 ನಿಮಿಗಳ ಕಾಲ 100 ಎಂಎಲ್ ಬಿಸಿ ನೀರನ್ನು ಪೇಪರ್ ಕಪ್ ಗಳಲ್ಲಿ ಇಟ್ಟರೆ 25,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬಿಡುಗಡೆ ಆಗಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. ಒಂದು ಪೇಪರ್ ಕಪ್ ನಲ್ಲಿ ಒಂದು ಬಾರಿ ಟೀ ಕುಡಿದರೆ 25,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಸೇರುವುದಾದರೆ, ನೀವು ದಿನಕ್ಕೆ ಮೂರು ಬಾರಿ ಟೀ ಸೇವಿಸಿದರೆ ಇದರ ಪ್ಲಾಸ್ಟಿಕ್ ದೇಹ ಸೇರುವ ಪ್ರಮಾಣ ಅಧಿಕವಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights