FACT CHECK | ಈದ್ ಶುಭಾಶಯ ಕೋರಲು ಯೋಗಿ ಆದಿತ್ಯನಾಥ್ ಮುಖ್ತಾರ್ ಅಬ್ಬಾಸ್ ನಖ್ವಿ ಭೇಟಿ ನೀಡಿದ್ದಾರೆ ಎಂದು 4 ವರ್ಷ ಹಳೆಯ ಫೋಟೊ ಹಂಚಿಕೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈದ್ ಶುಭಾಶಯ ಕೋರಲು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಮನೆಗೆ ಭೇಟಿ ನೀಡಿ ಸೇವೆಯಾನ್ ಸವಿದಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೊವನ್ನು ಹಂಚಿಕೊಳ್ಳಲಾಗುತ್ತಿದೆ.
![]()
ಫೇಸ್‌ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದು, “ಧಾರ್ಮಿಕ ಸಂಘರ್ಷಗಳಲ್ಲಿ ಜನರನ್ನು ಬಲಿಕೊಡುವ ಇವರು ಮಾತ್ರ ಈದ್ ಸೇವಿಯನ್ ಅನ್ನು ಆನಂದಿಸುತ್ತಿರುವ ಇಂತಹ ಕಪಟಿ ಹಿಂದೂಗಳ ಬಗ್ಗೆ ನಾವು ಜಾಗರೂಕರಾಗಿರಬೇಕು” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಪೋಸ್ಟ್‌ಅನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು,ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಮನೆಗೆ ಈದ್ ಶುಭಾಶಯ ಕೋರಲು ಭೇಟಿ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಈ ಫೋಟೋವನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 11, 2021 ರಂದು ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.
![]()
ಈ ವರದಿಯಲ್ಲಿ ವೈರಲ್ ಚಿತ್ರವನ್ನು ಕಾಣಬಹುದು. ಪೋಸ್ಟ್‌ನ ಶೀರ್ಷಿಕೆಯಲ್ಲಿ ಆಗಿನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಮಥುರಾ ಸಂಸದೆ ಹೇಮಾ ಮಾಲಿನಿ ಅವರು ಯೋಗಿ ಆದಿತ್ಯನಾಥ್ ಅವರೊಂದಿಗೆ ವೃಂದಾವನದ ಹುನಾರ್ ಹಾತ್‌ನಲ್ಲಿ ಹಾಜರಿದ್ದರು ಎಂದು ಬರೆಯಲಾಗಿದೆ. ಈ ಸಮಯದಲ್ಲಿ ಸಿಎಂ ಯೋಗಿ ವೃಂದಾವನದಲ್ಲಿ ಬ್ರಜ್ರಸ್ ಮಹೋತ್ಸವ ಮತ್ತು ಹುನಾರ್ ಹಾತ್ ಅನ್ನು ಉದ್ಘಾಟಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
![]()
ಮತ್ತಷ್ಟು ಸರ್ಚ್ ಮಾಡಿದಾಗ, ನವೆಂಬರ್ 10, 2021 ರಂದು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ. ಈ ಪೋಸ್ಟ್‌ನಲ್ಲಿ ವೈರಲ್ ಚಿತ್ರಕ್ಕೆ ಸಂಬಂಧಿಸಿದ ಇನ್ನೂ ಅನೇಕ ಚಿತ್ರಗಳಿದ್ದು, ಅದರಲ್ಲಿ ಯೋಗಿ ಆದಿತ್ಯನಾಥ್ ಮಥುರಾ ಸಂಸದೆ ಹೇಮಾ ಮಾಲಿನಿ ಮತ್ತು ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರೊಂದಿಗೆ ಕುಳಿತು ಲಿಟ್ಟಿ ಚೋಖಾ ಸವಿಯುತ್ತಿರುವುದನ್ನು ಕಾಣಬಹುದು.
![]()
ಈ ವರ್ಷ ಅಂದರೆ 2025 ಮಾರ್ಚ್ 31 ರಂದು ಭಾರತದಲ್ಲಿ ಮುಸ್ಲಿಮರು ಈದ್ ಆಚರಿಸುತ್ತಿದ್ದಂತೆ, ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆಯೇ ಎಂದು ಪರಿಶೀಲಿಸಲು ನಾವು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದೇವೆ. ಪ್ರಮುಖ ನಾಯಕರ ಭೇಟಿಗಳನ್ನು ಒಳಗೊಂಡ ಹಲವಾರು ಈದ್ ಫೋಟೋಗಳನ್ನು ನಖ್ವಿ ಹಂಚಿಕೊಂಡಿದ್ದರೂ, ಯೋಗಿ ಆದಿತ್ಯನಾಥ್ ಅವರ ಯಾವುದೇ ಚಿತ್ರ ನಮಗೆ ಕಂಡುಬಂದಿಲ್ಲ. ಅದೇ ರೀತಿ, ಯೋಗಿ ಆದಿತ್ಯನಾಥ್ ಅವರ ಅಧಿಕೃತ ಖಾತೆಗಳಲ್ಲಿ ಅಂತಹ ಯಾವುದೇ ಭೇಟಿಯನ್ನು ಉಲ್ಲೇಖಿಸಲಾಗಿಲ್ಲ.ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊ ಹಳೆಯದಾಗಿದೆ.
ಒಟ್ಟಾರಾಯಾಗಿ ಹೇಳುವುದಾದರೆ, ಯೋಗಿ ಆದಿತ್ಯನಾಥ್ ಅವರು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಮನೆಗೆ ಈದ್ ಶುಭಾಶಯ ಕೋರಲು ಭೇಟಿ ನೀಡಿದ್ದರು ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಫೋಟೋ ನಾಲ್ಕು ವರ್ಷ ಹಳೆಯದು ಮತ್ತು ವೃಂದಾವನದಲ್ಲಿ ನಡೆದ ಹುನಾರ್ ಹಾತ್ ಕಾರ್ಯಕ್ರಮದ ಫೋಟೋ ಎಂದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ನಂತರ ಆಡಳಿತ ಪಕ್ಷದ ನಾಯಕರೊಂದಿಗೆ ಸಂಭ್ರಮಿಸಿದ್ರಾ ಅಸಾದುದ್ದೀನ್ ಓವೈಸಿ?

