ಟೀಂ ಇಂಡಿಯಾ ವಿರುದ್ದ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ತಂಡ; ಯಾಕೆ ಗೊತ್ತೇ?

ಟಿ-20 ವಿಶ್ವಕಪ್‌ ಇತಿಹಾಸದಲ್ಲೇ ಪಾಕಿಸ್ತಾನ ತಂಡವು ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಆದರೂ, ಪಾಕಿಸ್ತಾನ ತಂಡ ಈ ಗೆಲುವನ್ನು ಸಂಭ್ರಮಿಸಿಲ್ಲ.

ಬರೋಬ್ಬರಿ 29 ವರ್ಷಗಳ ನಂತರ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ದ ಗೆಲುವು ಸಾಧಿಸಿದೆ. 1992ರಲ್ಲಿ ಟಿ-20 ವಿಶ್ವಕಪ್ ಆರಂಭಗೊಂಡಾಗಿನಿಂದ ಟೀಂ ಇಂಡಿಯಾ ಗೆಲುವು ಸಾಧಿಸುತ್ತಲೇ ಇತ್ತು. ಇದೇ ಮೊದಲ ಬಾರಿಗೆ ಭಾರತ ತಂಡ ಪಾಕ್ ವಿರುದ್ಧ ಸೋಲು ಕಂಡಿದೆ.

ಭಾರತ ವಿರುದ್ಧ ಗೆದ್ದರೂ, ಪಾಕ್ ತಂಡ ಸಂಭ್ರಮಿಸಿಲ್ಲ. ಬದಲಾಗಿ, ತಂಡದ ನಾಯಕ ಬಾಬರ್ ಅಜಾಮ್ ತಂಡದ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಕೂರಿಸಿಕೊಂಡು ಈ ಹಿಂದೆ ಮಾಡಿದ ತಪ್ಪನ್ನು ಮರುಕಳಿಸದಂತೆ ನೋಡಬೇಕು ಎಂದು‌ ಕಿವಿ ಮಾತು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ‌ ಪಾಕ್ ತಂಡದ ನಾಯಕ ಬಾಬರ್, ಆಟಗಾರರನ್ನು ಕೂರಿಸಿ ಕೆಲ ಮಾತುಗಳನ್ನು ಹೇಳಿದ್ದಾರೆ.

ಭಾರತದ ವಿರುದ್ಧದ ಪಂದ್ಯದಲ್ಲಿ ತಂಡದ ಪ್ರದರ್ಶನದ ಬಗ್ಗೆ ಹಾಡಿಹೊಗಳಿದ ನಾಯಕ, ಇದು ಕೇವಲ ಆರಂಭವಷ್ಟೇ ನಮ್ಮ ಗುರಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವುದು ಎಂಬುವುದನ್ನು ಮರೆಯಬೇಡಿ ಎಂದಿದ್ದಾರೆ.

ಈ ಗೆಲುವಿನಿಂದ ಬೀಗಬೇಡಿ, ಮುಂದಿನ ಪಂದ್ಯಗಳಿಗೆ ಸಜ್ಜಾಗಿ. ನಾವು ಈ ಹಿಂದೆ ಒಂದು ಪಂದ್ಯ ಗೆದ್ದ ಬಳಿಕ ದೊಡ್ಡ ರೀತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದೆವು. ಬಳಿಕ ಮುಂದಿನ ಪಂದ್ಯ ಸೋತೆವು. ಈ ತಪ್ಪನ್ನು ನಾವು ಮತ್ತೆ ಮಾಡಬಾರದು. ಮುಂದಿನ ಪಂದ್ಯದ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights