ಟೀಂ ಇಂಡಿಯಾ ವಿರುದ್ದ ಪಾಕ್ ಗೆಲುವಿಗೆ ಸಂಭ್ರಮ; ಕೆಲಸದಿಂದ ಶಿಕ್ಷಕಿ ವಜಾ!

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದು, ಪಾಕ್ ಗೆಲುವನ್ನು ಸಂಭ್ರಮಿಸಿದ್ದ ಶಾಲಾ ಶಿಕ್ಷಕಿಯನ್ನು ಉದ್ಯೋಗದಿಂದ ವಜಾಗೊಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ..

ಟೀಂ ಇಂಡಿಯಾ ವಿರುದ್ದ ಪಾಕಿಸ್ತಾನ ಗೆಲುವು ಸಾಧಿಸಿದ್ದಕ್ಕೆ, ‘ನಾವು ಗೆದ್ದಿದ್ದೇವೆ’ ಎಂದು ರಾಜಸ್ಥಾನದ ಉದಯಪುರದ ನೀರಜ್​ ಮೋದಿ ಹೆಸರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ನಫೀಸಾ ಅಟ್ಟಾರಿ ಅವರು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದರು.

ಇದನ್ನು ಮನಿಸಿರುವ ಶಾಲಾ ಆಡಳಿತ ಮಂಡಳಿಯು ಆ ಶಿಕ್ಷಕಿಯನ್ನು ಕೆಲಸದಿಂದ ತೆಗೆದು ಹಾಕಿದೆ.

ಶಿಕ್ಷಕಿಯ ವಾಟ್ಸ್​ಆಯಪ್​ ಸ್ಟೇಟಸ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಅದು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ತಕ್ಷಣ ಆಕೆಯನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ.

https://twitter.com/BefittingFacts/status/1452658243331710979?s=19

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.