ಕೋವಿಡ್-19: ಜೀ ನ್ಯೂಸ್ ನ 28 ನೌಕರಿರಿಗೆ ಸೋಂಕು; ಸೀಲ್ ಡೌನ್ ಆದ ಸುದ್ದಿ ಸಂಸ್ಥೆ

ಹಿಂದಿ ಸುದ್ದಿವಾಹಿನಿ ಜೀ ನ್ಯೂಸ್ ನ 28 ನೌಕರರಿಗೆ ಕೊರೊನ ಸೋಂಕು ತಗಲಿದ್ದು ಅವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಸುದ್ದಿವಾಹಿನಿಯ ಸಂಪಾದಕ ಮುಖ್ಯಸ್ಥ ಸುಧೀರ್ ಚೌಧರಿ ಟ್ವೀಟ್ ಮಾಡಿದ್ದಾರೆ. ಸುದ್ದಿವಾಹಿನಿಯ ಹಲವು ನೌಕರರಿಗೆ ಸೋಂಕು ತಗಲಿದ್ದರೂ ಅವರು ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದರು.

ಮೇ 15 ರಂದು ಸಂಸ್ಥೆಯ ಒಬ್ಬರು ಉದ್ಯೋಗಿ ಕೊರೊನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದು ತಿಳಿದುಬಂದ ಮೇಲೆ ಅವರ ಸಂಪರ್ಕಕ್ಕೆ ಬಂದಿದ್ದ ಹಲವು ನೌಕರರನ್ನು ಪರೀಕ್ಷೆ ಮಾಡಿದೆವು. ಅವರಲ್ಲಿ 28 ಜನಕ್ಕೆ ಸೋಂಕು ತಗಲಿರುವುದು ಪತ್ತೆಯಾಗಿದೆ ಎಂದು ಜೀ ನ್ಯೂಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಲವು ನೌಕರಿರಿಗೆ ಸೋಂಕು ಪತ್ತೆಯಾದ ನಂತರವೂ ಅವರನ್ನು ಕೆಲಸಕ್ಕೆ ಕರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡಲಾಗಿತ್ತು. ಈ ಆರೋಪವನ್ನು ಅಲ್ಲಗೆಳೆದಿರುವ ಜೀ ನ್ಯೂಸ್ ಸಂಸ್ಥೆ ಯಾವ ಸೋಂಕಿತ ವ್ಯಕ್ತಿಯೂ ಕಚೇರಿಗೆ ಬಂದಿಲ್ಲ. ಮೇ 15 ರಂದು ಖಚಿತವಾದ ಬಹುತೇಕ ಸೋಂಕಿತರಿಗೆ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜೀ ನ್ಯೂಸ್ ಕಟ್ಟಡವನ್ನು ಈಗ ಸೀಲ್ ಡೌನ್ ಮಾಡಲಾಗಿದ್ದು, ಮತ್ತೊಂದು ಕಟ್ಟಡದಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಕೂಡ ಸಂಸ್ಥೆ ತಿಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights