ಜೀವಕ್ಕಾಗಿ ನಿಯಮ ಪಾಲಿಸದಿದ್ದರೆ ಕಠಿಣಕ್ರಮ – ಡಾ.ಕೆ ಸುಧಾಕರ್

ರಾಜ್ಯದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಕರುನಾಡಿಗೆ ಕೊರೊನಾ ಅಟ್ಟಹಾಸದ ಭೀತಿ ಶುರುವಾಗಿದೆ. ಹೀಗಾಗಿ ಜೀವಕ್ಕಾಗಿ ನಿಯಮ ತಂದಿದ್ದೇವೆ ಪಾಲಿಸದಿದ್ದರೆ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ ಕೊಟ್ಟಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕ-ಕೇರಳ ಗಡಿಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುತ್ತಿದೆ. ಆದರೆ ನಾವು ಜನರ ಜೀವಕ್ಕಾಗಿ ನಿಯಮ ಮಾಡಿದ್ದೇವೆ. ನಿಯಮ ಮೀರಿ ಪಾಲಿಸದೇ ಇದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯಗಳ ಪ್ರವೇಶಕ್ಕೆ ನಾವು ನಿರ್ಬಂಧ ಹೇರಿಲ್ಲ. ಆದರೆ ಪರೀಕ್ಷಾ ವರದಿ ಕೇಳುತ್ತಿದ್ದೇವೆ ಎಂದಿದ್ದಾರೆ.

ಈಗಾಗಲೇ ಕೇರಳ ಕಾಸರಗೋಡು ಹಾಗೂ ಮಂಗಳೂರು ಗಡಿ ಭಾಗದಲ್ಲಿ ಕೇರಳಿಗರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಭಾಗದಲ್ಲಿ ಲಸಿಕೆ ಕೊಡುವುದರಲ್ಲಿ ನಾವು ಹಿಂದೆ ಇದ್ದೇವೆ. ಗಡಿ ಭಾಗದಲ್ಲಿ ಜನರ ಜೀವ ಉಳಿಸಿಕೊಳ್ಳಲು ನಿಯಮ ಕಡ್ಡಾಯ ಮಾಡಿದ್ದೇವೆ. ಜನರೇ ಎಚ್ಚೆತ್ತುಕೊಳ್ಳಿ ನಿಯಮ ಪಾಲಿಸದೇ ಹೋದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜನಸಾಮಾನ್ಯರು ಮಾತ್ರವಲ್ಲ ವಿಐಪಿಗಳೇ ಅಂತರ ಕಾಪಾಡಿಕೊಳ್ಳದೇ, ಮಾಸ್ಕ್ ಹಾಕಿಕೊಳ್ಳದೇ ಇರುವುದು ಮರೆತುಬಿಟ್ಟಿದ್ದಾರೆ. ಮದುವೆ ಸಮಾರಂಭಗಳಲ್ಲೂ ಎಥಾ ಸ್ಥಿತಿಗೆ ಬಂದಿದೆ. 500 ಕ್ಕೂ ಹೆಚ್ಚು ಜನ ಸೇರಬಾರದು ಎನ್ನುವ ನಿಯಮ ಪಾಲಿಸಬೇಕು. ಎಲ್ಲಾ ಜನಸಾಮಾನ್ಯರು ಕೂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.

ಕೊರೊನಾ ಅಧಿಕ ಪ್ರಕರಣಗಳ ಸಂಖ್ಯೆಯಲ್ಲಿ ಕಲಬುರಗಿ ಮುಂದಿದೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮಾರ್ಚ್ ನಿಂದ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಡ್ಡಾಯ ಮಾಡಲಾಗುತ್ತದೆ. 5 ಜನರಿಗೆ ಕೊರೊನಾ ಬಂದರೆ ಆ ಏರಿಯಾ ಕಂಟೇನ್ ಮೆಂಟ್ ಜೋನ್ ಮಾಡುತ್ತೇವೆ ಎಂದಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights