ಪೊಲೀಸ್ ಠಾಣೆಯಲ್ಲಿ ಯುವಕನಿಗೆ ಮನಸೋಯಿಚ್ಛೆ ಥಳಿಸಿದ ಪೊಲೀಸರು: ಅಮಾನತಿಗೆ ಆಗ್ರಹ
ದೂರು ದಾಖಲಿಸದೆಯೇ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಪೊಲೀಸರು ಮನಸೋಯಿಚ್ಛೆ ಥಳಿಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಮೈಸೂರು ರಸ್ತೆ ಹಳೇ ಗುಡ್ಡದ ನಿವಾಸಿ ತೌಸಿಫ್ ಪಾಷಾ ಎಂಬಾತನನ್ನು ಪೊಲೀಸರು ಥಳಿಸಿದ್ದಾರೆ ಎಂದು ವರದಿಯಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂದಿಸಿದಂತೆ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಕೇಸ್ ದಾಖಲಿಸದೇ ಆತನಿಗೆ ಥಳಿಸಿದ್ದಾರೆ.
ತೌಸಿಫ್ ಪಾಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪಾಷಾ ಕುಟುಂಬಸ್ಥರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು, ಬ್ಯಾಟರಾಯನಪುರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೇ ಇನ್ಸ್ಪೆಕ್ಟರ್ ಹರೀಶ್ & ಇತರರ ವಿರುದ್ಧ ಆರೋಪ ಮಾಡಲಾಗಿದ್ದು ಕೆಲಸದಿಂದ ಅಮಾನತು ಗೊಳಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

