ದೆಹಲಿ ರೈತರಿಗೆ ಬೆಂಬಲ : ಶನಿವಾರ ನಗರದಲ್ಲಿ ರಾಜ್ಯ-ರಾಷ್ಟ್ರ ಹೆದ್ದಾರಿ ಬಂದ್ಗೆ ಕರೆ!

ದೆಹಲಿ ಗಡಿಭಾಗದಲ್ಲಿ ಪ್ರತಿಭಟನಾ ನಿತರ ರೈತರ ಬೆಂಬಲಿಸಿ ರಾಜ್ಯದಲ್ಲಿ ಶನಿವಾರ ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳಿಗೆ ಕರೆ ಕೊಟ್ಟಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಮೂರು ತಿಂಗಳಿನಿಂದ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕೇಂದ್ರ ಸರ್ಕಾರ ರೈತರೊಂದಿಗೆ ಹಲವಾರು ಸುತ್ತಿನ ಮಾತುಕತೆಗೆ ನಡೆಸಿದರೂ ರೈತರ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ರೈತರು ಶನಿವಾರ (ಫೆ.6) ರಾಷ್ಟ್ರ ಹೆದ್ದಾರಿಗಳ ಬಂದ್ಗೆ ಕರೆ ಕೊಟ್ಟಿದ್ದಾರೆ.

ಹೌದು… ಕರುನಾಡ ಅನ್ನದಾತರು ದೇಶಾದ್ಯಂತ ರೈತರ ಪ್ರಿಭಟನೆಯನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಾಜ್ಯ ಕೊಬ್ಬು ಬೆಳೆಗಾರರ ಸಂಘದ ಅಧ್ಯಕ್ಷ, ಕುರುಬೂರು ಶಾಂತಕುಮಾರ್ “ ರಾಜ್ಯದ ಉದ್ದಗಲ ಇರುವ ರೈತರಿಗೆ ದೆಹಲಿ ರೈತರ ಹೋರಾಟಕ್ಕೆ ಬೆಂಬಲಿಸಲು ಕರೆ ಕೊಡಲಾಗಿದೆ. ಇದರ ಬೆನ್ನಲ್ಲೇ ಶನಿವಾರ ದೆಹಲಿ ರೈತರ ಪ್ರತಿಭಟನೆ ಬೆಂಬಲಿಸಿ ರಾಜ್ಯ ರಾಜಧಾನಿಯಲ್ಲಿ ಹೆದ್ದಾರಿ ಬಂದ್ ಗೆ ಕರೆ ಕೊಟ್ಟಿದ್ದೇವೆ” ಎಂದಿದ್ದಾರೆ.

” ಶಾಂತಿಯುತ ಚಳುವಳಿ ನಮ್ಮ ಹಕ್ಕು. ನಮ್ಮ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಪ್ರತಿಭಟನಾ ಸ್ಥಳದಲ್ಲಿ ನೀರಿನ ವ್ಯವಸ್ಥೆ, ನೆಟ್ ವರ್ಕ್, ವಿದ್ಯುತ್ ಕಡಿತ ಮಾಡುವುದ ಧೋರಣೆ ಒಪ್ಪಿವಂತದಲ್ಲ. ಹೀಗಾಗಿ ನಾವು ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಡುತ್ತಿರುವ ರೈತರ ಪರ ಇದ್ದೇವೆ. ರೈತರ ಬದುಕು ಹಸನು ಮಾಡಲಿಕ್ಕೆ ಈ ಹೆದ್ದಾರಿ ತಡೆ ಮಾಡಲಿದ್ದೇವೆ. ರೈತರ ಅಳಿವು-ಉಳಿವಿನ ಹೋರಾಟ ಇದಾಗಿದೆ” ಎಂದಿದ್ದಾರೆ.

” ಜೊತೆಗೆ 12 ಗಂಟೆಯಿಂದ 2 ಗಂಟೆಯವರೆಗೆ ಹೆದ್ದಾರಿ ತಡೆ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗದೇ ಇರಲು ಈ ಬಗ್ಗೆ ಮುಂಚಿತವಾಗಿ ತಿಳಿಸುತ್ತಿದ್ದೇವೆ. ರಾಜ್ಯಕ್ಕೆ ಒಳಪ್ರವೇಶಿಸುವ ಮುನ್ನ ಎಚ್ಚರ ವಹಿಸಬೇಕು” ಎಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಶನಿವಾರ ಕರುನಾಡು ಸ್ತಬ್ದವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights