ಒಂದೇ ಇನ್ನಿಂಗ್ಸ್‌‌ನಲ್ಲಿ 10 ವಿಕೆಟ್ ಪಡೆದ ಪಟೇಲ್; ಭಾರತದ ವಿರುದ್ಧ ಸೃಷ್ಟಿಯಾಯ್ತು ಇತಿಹಾಸ!

ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಕಬಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, 1999 ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಸಾಧಿಸಿದ್ದರು. ಒಂದೇ ಇನ್ನಿಂಗ್ಸ್ನಲ್ಲಿ ೧೦ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಜಿಮ್ ಲೇಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಈವರೆಗೆ ಈ ಪಟ್ಟಿಯಲ್ಲಿ ಈ ಇಬ್ಬರು ಬೌಲರ್ಗಳು ಮಾತ್ರ ಸ್ಥಾನ ಪಡೆದಿದ್ದರು. ಆದರೆ, ಇದೀಗ ಭಾರತದ ವಿರುದ್ಧವೇ ನ್ಯೂಜಿಲೆಂಡ್ನ ಮತ್ತೊಬ್ಬ ಬೌಲರ್ ಈ ಅಪರೂಪದ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಟಿ೨೦ ವಿಶ್ವಕಪ್ ಬೆನ್ನಿಗೆ ಮುಂದಿನ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್ ಭಾರತಕ್ಕೆ ಆಗಮಿಸಿತ್ತು. ಆದರೆ, ರಾಜ್ಕೋಟ್ನಲ್ಲಿ ನಡೆದ ಮೊದಲ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡಕ್ಕೆ ಎರಡೂ ತಂಡಗಳು ಒಳಗಾಗಿದ್ದವು. ಆದರೆ, ಈ ಮಹತ್ವದ ಪಂದ್ಯದಲ್ಲಿ ನ್ಯೂಜೆಲೆಂಡ್ನ ಎಡಗೈ ಸ್ಪಿನ್ನರ್ ಅಜಾಸ್ ಪಟೇಲ್ 10 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದ್ದಾರೆ. ಹೊಸ ದಾಖಲೆ ಬರೆದಿದ್ದಾರೆ.

೧೦ ವಿಕೆಟ್ ಕಬಳಿಸಿದ ಪಟೇಲ್:

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದ ಭಾರತ ಉತ್ತಮ ಆರಂಭವನ್ನೇ ಪಡೆದಿತ್ತು. ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ 50 ರನ್ ಗಳ ಅತ್ಯುತ್ತಮ ಜೊತೆಯಾಟ ನೀಡಿದ್ದರು. ಆದರೆ, ಗಿಲ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಜಾಸ್ ಪಟೇಲ್ ಯಶಸ್ವಿಯಾಗಿದ್ದರು. ಇವರ ಬೆನ್ನಿಗೆ ಚೇತೇಶ್ವರ ಪೂಜಾರಾ ಮತ್ತು ವಿರಾಟ್ ಕೊಹ್ಲಿ ಸಹ ಇಜಾಸ್ ಪಟೇಲ್ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಶ್ರೇಯಸ್ ಐಯ್ಯರ್ ಸಹ ಪಟೇಲ್ಗೆ ವಿಕೆಟ್ ಒಪ್ಪಿಸಿದ್ದರು. ಕೊನೆಗೆ ೪ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ಮೊದಲ ದಿನದ ಆಟವನ್ನು ಕೊನೆಗೊಳಿಸಿತ್ತು. ಆದರೆ, ಮಯಾಂಕ್ ಅಗರ್ವಾಲ್ ಶತಕ ಬಾರಿಸಿ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಿದ್ದರು.

ಎರಡನೇ ದಿನದ ಆಟ ಆರಂಭಕ್ಕೂ ಮುನ್ನ ಇಜಾಸ್ ಪಟೇಲ್ 10 ವಿಕೆಟ್ ಕಬಳಿಸುತ್ತಾರೆ ಎಂದು ಭಾಗಶಃ ಯಾರೂ ಭಾವಸಿರಲಿಲ್ಲ. ವೃದ್ಧಿಮಾನ್ ಸಹಾ ವಿಕೆಟ್ ಪಡೆಯುವ ಮೂಲಕ ಇಂದಿನ ತನ್ನ ವಿಕೆಟ್ ಭೇಟೆಯನ್ನು ಮುಂದುವರೆಸಿದ ಪಟೇಲ್ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಪರಿಣಾಮ ಭಾರತ ೧೦ ವಿಕೆಟ್ ಕಳೆದುಕೊಂಡು ೩೨೫ ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ಇದೀಗ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಲಿದ್ದು, ಭಾರತದ ಬೌಲರ್ಗಳು ಎಷ್ಟರ ಮಟ್ಟಿಗೆ ತಿರುಗೇಟು ನೀಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.
\

Spread the love

Leave a Reply

Your email address will not be published. Required fields are marked *