ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣಿ – ಪ್ರಮೋದ ಮುತಾಲಿಕ್

ಸಿಎಎ ಹಾಗೂ ಎನ್‌ಆರ್‌ಸಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳು ಮುಸ್ಲಿಂರನ್ನು ಪ್ರಚೋದಿಸುತ್ತಿದ್ದಾರೆ, ಇದು ಕೆಟ್ಟ ರಾಜಕೀಯ ಎಂದು ಧಾರವಾಡದಲ್ಲಿ ಶ್ರೀರಾಮ‌ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪ ಮಾಡಿದ್ದಾರೆ.

ಸಿಎಎ ಹಾಗೂ ಎನ್‌ಆರ್‌ಸಿ ವಿಚಾರದಲ್ಲಿ ಧಾರವಾಡದಲ್ಲಿ ಮಾತನಾಡಿದ ಅವರು, ಮುಂದೆ ಜನಸಂಖ್ಯಾ ನಿಯಂತ್ರಣ ಕಾಯಿದೆ ಬರಲಿದೆ. ಕಾಮನ್ ಸಿವಿಲ್ ಕೋಡ್ ಕೂಡ ಬಂದೇ ಬರುತ್ತೆ.ದೇಶದ ರಕ್ಷಣೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕುಮಾರಸ್ವಾಮಿ ಕೂಡ ವಿರೋಧ ಮಾಡ್ತಿದ್ದಾರೆ. ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣಿ. ಮುಂದಿನ ದಿನಗಳಲ್ಲಿ ಮೋದಿ ಮತ್ತು ಅಮಿತ ಷಾ ಇನ್ನೆನೋ ಹೆಜ್ಜೆ ಇಡಲಿದ್ದಾರೆ.  ಅದಕ್ಕಾಗಿಯೇ ಈಗಲೇ ಈ ಸಿಎಎಗೆ ಅಡ್ಡಿ ಮಾಡುವ ಕೆಲಸ ನಡೆದಿದೆ.

ಜನಸಂಖ್ಯಾ ನಿಯಂತ್ರಣ ಕಾನೂನು, ಕಾಮನ್ ಸಿವಿಲ್ ಕೋಡ್ ಹಾಗೂ ಗೋ ಹತ್ಯಾ ನಿಷೇಧ ಕಾನೂನು ಬಂದೇ ಬರುತ್ತೆ. ರೋಹಿಂಗ್ಯಾಗಳು, ಅಹಮ್ಮದಿಯರು ಹಾಗೂ ಸಿಯಾಗಳನ್ನೂ ಸೇರಿಸಿ ಅಂತಾ ಇವರೆಲ್ಲ ಸಿಎಎಗೆ ಪ್ರತಿಭಟನಾ ಮಾಡ್ತಿದ್ದಾರೆ. ಅವರನ್ನೆಲ್ಲ ಸೇರಿಸಿಕೊಳ್ಳೊಕ್ಕೆ ಭಾರತ ಅನ್ನೊದು ಧರ್ಮ ಛತ್ರನಾ..? ಇದನ್ನ ಭಯೋತ್ಪಾದಕ ದೇಶ ಮಾಡೊಕೆ ಹೊರಟಿದಿರಾ..? ನಾವು ಈ ದೇಶವನ್ನು ಇಸ್ಲಾಂ ದೇಶ ಮಾಡೊಕೆ ಕೊಡಲ್ಲ. ಪೌರತ್ವ ಕಾಯಿದೆ ಬೆಂಬಲಿಸಿ ನಾವು ಕೆಲ ಸಾಹಿತಿಗಳು, ಸಿನೆಮಾ ನಟರ ಸಹಿ ಸಂಗ್ರಹಿಸಿ ಅಮಿತ ಷಾಗೆ ಕೊಡಲಿದ್ದೆವೆ.

೫೦ ಜನರ ಸಹಿ ಸಂಗ್ರಹ ಈಗಾಗಲೇ ಮಾಡಿದ್ದೇವೆ. ಕಾಶಿ ಸ್ವಾಮಿಜೀ, ಕೇದಾರ ಸ್ವಾಮೀಜಿ, ವೀರೇಂದ್ರ ಹೆಗಡೆ, ನಟ ಚರಣರಾಜ್ ಸೇರಿ ಅನೇಕರು ಸಹಿ ಮಾಡಿದ್ದಾರೆ. ನಾವು ಇಡಿ ರಾಜ್ಯದಲ್ಲಿ ನೂರು ಕಡೆ ಪೌರತ್ವ ಕಾಯ್ದೆ ಪರ ಅಭಿಯಾನ ಮಾಡಲಿದ್ದೆವೆ ಎಂದಿದ್ದಾರೆ.

ಜೆಎನ್‌ಯು ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಜೆ‌ಎನ್‌ಯು ಭಾರತೀಯ ವಿಚಾರ ಧಾರೆ ವಿರೋಧ ಮಾಡುವವರ ಅಡ್ಡೆಯಾಗಿದೆ. ಸುಬ್ರಹ್ಮಣ್ಯಣ್ಯಸ್ವಾಮಿ ಎರಡು ವರ್ಷ ಜೆಎನ್‌ಯು ನಿಲ್ಲಿಸಿ ಎಂದಿದ್ದಾರೆ. ಅದಕ್ಕೆ ನಾನು ಸ್ವಾಗತ ಮಾಡ್ತೆನೆ. ಒಂದು ಸಲ ಜೆಎನ್‌ಯು ಕ್ಲಿನ್ ಆಗಬೇಕು. ವಿದ್ಯಾರ್ಥಿಗಳ ಹಲ್ಲೆ ಮಾಡಿದ್ದು ತಪ್ಪು, ಆದರೆ ತನಿಖೆಯಾಗಲಿ, ತನಿಖೆಯಿಂದ ಸತ್ಯ ಹೊರಬರಲಿ.

ಸೋಮಶೇಖರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾಕಿಸ್ತಾನ್ ಜಿಂದಾಬಾದ ಎನ್ನುವ‌ ಮುಸ್ಲಿಮರ ಕುರಿತು ಮಾತ್ರ ಅವರು ಹೇಳಿದ್ದಾರೆ. ಸಂಘರ್ಷದ ಕಾರಣಕ್ಕೆ ಹೇಳಿದ್ದಾರೆ. ಭಯೋತ್ಪಾದನೆ ವಿಚಾರವಾಗಿ ಹೇಳಿದ್ದಾರೆ ಹೊರತು ಎಲ್ಲ‌ ಮುಸ್ಲಿಮರಿಗೆ ಅವರು ಹೇಳಿಲ್ಲ ಎಂದು ಸಮರ್ಥಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights