ಬೆಂಗಳೂರು-ಮುಂಬೈ, ಬೆಂಗಳೂರು-ಚೆನ್ನೈ ಕೈಗಾರಿಕಾ ಟೌನ್‌ಶಿಪ್‌ಗೆ ತಾತ್ವಿಕ ಅನುಮೋದನೆ!

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಬೆಂಗಳೂರು-ಮುಂಬೈ ಮತ್ತು ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್ ಶಿಪ್‍ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಈ ಎರಡೂ ಕಡೆಗಳಲ್ಲಿ ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್‍ಶಿಪ್‍ಗಳನ್ನು ಸ್ಪಾಪಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳ ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಈ ಟೌನ್‍ಶಿಪ್‍ಗಳಿಂದ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 10 ಸಾವಿರ ಕೋಟಿ ರೂ.ಗಳ ಖಾಸಗಿ ಬಂಡವಾಳ ಆಕರ್ಷಿಸುವ ಮೂಲಕ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆ ಇದೆ.

ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್‍ಶಿಪ್‍ಗಳನ್ನು ಸ್ಥಾಪಿಸುವ ಬಗ್ಗೆ (MSME), KSSIDC, KSIIDC, KIADB, ಹಾಗೂ ನಿರ್ದೇಶಕರು ಹಾಗೂ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಭೂಮಿ ಲಭ್ಯತೆ ಕುರಿತಾದ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಹೊಸ ಯೋಜನೆ ಕಾರ್ಯಗತಗೊಳಿಸುವ ಕುರಿತಂತೆ ಕೆಳಕಂಡ ಅಂಶಗಳಿಗೆ ತಾತ್ವಿಕ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆ ಮತ್ತು ಯೋಜನಾ ಇಲಾಖೆಯನ್ನು ಕೋರಿ ಅನುಮೋದನೆ ಪಡೆಯಲಾಗಿದೆ.

ಈ ಕಾರಿಡಾರ್‍ಗಳ ಕಾರ್ಯ ವ್ಯಾಪ್ತಿಗೆ ಬರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೈಗಾರಿಕೆಗಳ ಬೇಡಿಕೆ ಸಮೀಕ್ಷೆಯನ್ನು ಕೈಗೊಂಡು ಆದರ ವರದಿಯನ್ನು ಎಂ.ಡಿ, ಕೆಎಸ್‍ಎಸ್‍ಐಡಿಸಿ ಅವರಿಗೆ ಸಲ್ಲಿಸುವುದು. ಕೆಎಸ್‍ಎಸ್‍ಐಡಿಸಿ ಸಂಸ್ಥೆಯು ಸರಳ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು.

ಎಂ.ಡಿ., ಕೆಎಸ್‍ಐಐಡಿಸಿಯವರು ಈ ಯೋಜನೆಯ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯ ಪರಿಕಲ್ಪನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು, ಈ ಯೋಜನೆಗೆ ಕೆಎಸ್‍ಐಐ.ಡಿಸಿ ಸಮಾಲೋಚಕರನ್ನು ಕೆಟಿಪಿಪಿ ಕಾಯ್ದೆ ಅನ್ವಯ ನೇಮಿಸಲು ಕ್ರಮ ವಹಿಸಬೇಕು.

ಈ ಯೋಜನೆಯನ್ನು ಜಾರಿಗೆ ತರಲು ಲಭ್ಯವಿರುವ ಲ್ಯಾಂಡ್ ಬ್ಯಾಂಕ್‍ನ ವಿವರವನ್ನು ಕೆ.ಐ.ಎ.ಡಿ.ಬಿ ಅವರು ಸರ್ಕಾರಕ್ಕೆ ಸಲ್ಲಿಸಬೇಕು. ಈ ಎರಡು ಕಾರಿಡಾರ್‍ಗಳಲ್ಲಿ ಯಾವ ಯಾವ ವಿಧದ ಕೈಗಾರಿಕೆಗಳನ್ನು ಸ್ಥಾಪಿಸಬಹುದು ಎಂಬುದರ ಬಗ್ಗೆ ವಿಶ್ಲೇಷಿತ ವಿವರಣೆಯನ್ನು ನಿರ್ದೇಶಕರು (ಎಂ.ಎಸ್.ಎಂ.ಇ.) ರವರು ಸರ್ಕಾರಕ್ಕೆ ಸಲ್ಲಿಸಬೇಕು.

ಈ ಯೋಜನೆಯ ನೋಡಲ್ ಏಜೆನ್ಸಿ – ಉಸ್ತುವಾರಿ ಸಂಸ್ಥೆಯಾಗಿ ಎಂ.ಡಿ., ಕೆ.ಎಸ್.ಎಸ್.ಐ.ಡಿ.ಸಿ ಮೇಲ್ಕಂಡ ಕಾರ್ಯಗಳ ಸಮನ್ವಯ ಸಾಸಿ ಸರ್ಕಾರಕ್ಕೆ ಆಗಿಂದಾಗ್ಗೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್‌ ಸೋಷಿಯಲ್ ಮೀಡಿಯಾ ನಿರ್ವಹಿಸುತ್ತಿದ್ದ ಕಂಪನಿ ಮೇಲೆ IT ದಾಳಿ; ಹಿಂದಿನ ಹುನ್ನಾರವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights