“ಕಾರ್ಗಲ್ ನೈಟ್ಸ್”ನಲ್ಲಿ ಕಳಚಲಿದೆ ಪಶ್ಚಿಮ ಘಟ್ಟದಲ್ಲಿನ ಭೂಗತ ಲೋಕ!

ಕ್ರೂರತ್ವ, ನೈಜತ್ವ , ರೌಡಿಸಂ , ಮಾಫಿಯಾ , ಸ್ಮಗ್ಲಿಂಗ್ , ಘೋರ ಅನುಭವಗಳು, ದಟ್ಟಕಾಡುಗಳ ನಡುವೆ ಸಮಾಜಕ್ಕೆ ಗೊತ್ತಾಗದ ಮತ್ತೊಂದು ಕರಾಳ ಮುಖವನ್ನ ಜನರ ಮುಂದೆ ಬೆಳ್ಳಿ ಪರದೆ ಮೂಲಕ ತೋರಿಸೋಕೆ ಅರುಣ್ ಎ ಎನ್ ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ ಟೀಮ್ ರೆಡಿಯಾಗಿದೆ.

19ನೇ ಶತಮಾನದಲ್ಲಿ ರಾಜ್ಯದ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ನಡೆಯುತ್ತಿದ್ದ ಗಂಧದ ಕಳ್ಳಸಾಗಣಿಕೆಯ ಸುತ್ತ ಕಥೆಯನ್ನ ಹೆಣೆಯಲಾಗಿದೆ. ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಎದೆ ಝುಂ ಎನಿಸುವಂತಹ ಸನ್ನಿವೇಶಗಳು, ಬಿಜಿಎಂ, ಲೊಕೇಶನ್, ಥ್ರಿಲ್ ಜೊತೆಗೆ ಮತ್ತಷ್ಟು ಕಾತರತೆ ಹೆಚ್ಚಿಸಿದೆ. ಸಿನಿಮಾದ ಟ್ರೇಲರ್ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.

ಟೈಟಲ್ “ಕಾರ್ಗಲ್ ನೈಟ್ಸ್”… ಹರ್ಶಿಲ್ ಕೌಶಿಕ್ ಈ ಸಿನಿಮಾದ ನಾಯಕ. ಈ ಸಿನಿಮಾ ಮೂಲಕ ಹರ್ಶಿಲ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಸತ್ಯಕಥೆ ಆಧಾರಿತ ಸಿನಿಮಾ ಇದು. 90ರ ದಶಕದಲ್ಲಿ ಸ್ಮಗ್ಲಿಂಗ್ ನ ಸುತ್ತ ಕಥೆ ನಡೆಯಲಿದೆ. ಟ್ರೆಲರ್ ನಿಂದಲೇ ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್, ಆಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತಿದ್ದು, ನೆಟ್ಟಿಗರು ಸಿನಿಮಾ ಟೀಮ್ ಗೆ ಆಲ್ ದ ಬೆಸ್ಟ್ ಹೇಳ್ತಿದ್ಧಾರೆ.

ಅಂದ್ಹಾಗೆ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಅದ್ಭುತವಾಗಿ ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು ಸುರೇಂದ್ರನಾಥ್ ಬಿ ಆರ್ ಸಂಗೀತವನ್ನು ರಚಿಸಿದ್ದಾರೆ. ಚಿತ್ರದ ಕತೆಯನ್ನು ಸಾಗರ ತಾಲ್ಲೂಕ್ ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ .

ಸಿನಿಮಾದಲ್ಲಿ ಹರ್ಶಿಲ್ ಕೌಶಿಕ್ , ರಾಗ್ ಯು ಆರ್ ಎಸ್, ಸೂಚನ್ ಶೆಟ್ಟಿ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಸೇರಿದಂತೆ ಇನ್ನು ಹಲವರು ನಟಿಸಿದ್ದು, ಸಿನಿಮಾದ ನಿರೀಕ್ಷೆಯನ್ನ ಟ್ರೇಲರ್ ಹೆಚ್ಚಿಸಿದೆ.
ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಇದನ್ನೂ ಓದಿ: ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಬಗ್ಗೆ ಮೋದಿ ಬೆಂಬಲಿಗಳಿಂದ ಅವಹೇಳನ; ಸಾಹಿತ್ಯ ಪ್ರೇಮಿಗಳ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights