ತನ್ನ ಮಗುವಿನ ಹೃದಯವನ್ನು ಮತ್ತೊಂದು ಮಗುವಿಗೆ ಜೋಡಿಸಿದ ತಾಯಿಯ ಕತೆ

“ಸಾವನಪ್ಪಿದ ತನ್ನ ಮಗುವಿನ ಹೃದಯವನ್ನ ಮತ್ತೊಂದು ಮಗುವಿಗೆ ಜೋಡಿಸಿದ್ದು, ತನ್ನ ಮಗುವಿನ ಎದೆ ಬಡಿತದ ಸದ್ದನ್ನು ಕೇಳುತ್ತಿರುವ ತಾಯಿ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಹಲವು ಗುಂಪುಗಳಲ್ಲಿ ಶೇರ್‌ ಆಗುತ್ತಿದೆ. ಹಾಗಾಗಿ ಕೆಲವರು, ನಮ್ಮ ಏನ್‌ಸುದ್ದಿ.ಕಾಂಗೆ ಕರೆ ಮಾಡಿ ಈ ವೈರಲ್ ವಿಡಿಯೋದ ನೈಜತೆಯನ್ನು ಪರಿಶೀಲಿಸಿ ಇದರ ಸತ್ಯಾಸತ್ಯತೆಯನ್ನು ತಿಳಿಸಿ ಎಂದು ಮನವಿ ಮಾಡಿದ್ದರು. ಹಾಗಾಗಿ ತಾಯಿಯೊಬ್ಬಳು ತನ್ನ ಮಗುವಿನ ಹೃದಯ ಬಡಿತ ಕೇಳಿಸಿಕೊಳ್ಳುತ್ತಿರುವ ವೈರಲ್ ವೀಡಿಯೋದ ವಾಸ್ತವವನ್ನು ಫ್ಯಾಕ್ಟ್‌ಚೆಕ್ ಮೂಲಕ ಪರಿಶೀಲಿಸಿದ್ದೇವೆ.

ಫ್ಯಾಕ್ಟ್‌ಚೆಕ್:

ಮೊದಲಿಗೆ ವೈರಲ್ ವಿಡಿಯೊದ ಸುದ್ದಿ ಮತ್ತು ಹೇಳಿಕೆಯನ್ನು ಖಚಿತ ಪಡಿಸಿಕೊಳ್ಳಲು ಗೂಗಲ್ ಇಮೇಜ್ ಸರ್ಚ್ ಮಾಡಿದಾಗ ಒಂದೇ ಮಾದರಿಯ ಹಲವು ವಿಡಿಯೊಗಳು ಕಂಡುಬಂದವು ಮತ್ತು ಹೇಳಿಕೆ ಕುರಿತಂತೆ Newser ಮತ್ತು Fox news ನಲ್ಲೂ ಸುದ್ದಿ ಪ್ರಕಟವಾಗಿರುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ವೈರಲ್ ವಿಡಿಯೊದಲ್ಲಿ ಹೇಳಿಕೊಂಡಿರುವಂತೆ ಇದು ನೈಜ ಘಟನೆಯಾಗಿದ್ದು ಅದರಲ್ಲಿ ತಮ್ಮ ಮಗುವಿನ ಹೃದಯವನ್ನು ಮತ್ತೊಂದು ಮಗುವಿಗೆ ಜೋಡಣೆ ಮಾಡಿದ್ದು, ಮೂರು ವರ್ಷಗಳ ನಂತರ ಹೃದಯ ಜೋಡಣೆ ಮಾಡಿಸಿಕೊಂಡ ಮಗುವಿನ ಹೃದಯ ಬಡಿತವನ್ನು ಕೇಳಿಸಿಕೊಂಡಾಗ ಆ ತಾಯಿ ಭಾವುಕಳಾದ ಕ್ಷಣ’ ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತದೆ.

(ಕೆಳಗಿನ ವೀಡಿಯೊ)

“ಪುಟಾಣಿ ಜೋರ್ಡಾನ್ ಎದೆಗೆ ಸ್ಕೆತಾಸ್ಕೋಪ್ ಇಟ್ಟು ತನ್ನ ಮಗುವಿನ ಹೃದಯ ಬಡಿತ ಕೇಳುತ್ತಿರುವ ಕ್ಲಾರ್ಕ್‌ನ ತಾಯಿ ಹೀದರ್‌ “

ಘಟನೆಯ ವಿವರ

ಜೂನ್ 2013 ರಲ್ಲಿ, ಲಿಟಲ್ ಥಿಂಗ್ಸ್ ಪ್ರಕಾರ, ಲುಕಾಸ್ ಕ್ಲಾರ್ಕ್ 7 ತಿಂಗಳ ಮಗು. ಆ ಮಗುವನ್ನು ಒಂದು ಶಿಶು ಪಾಲನಾ ಕೇಂದ್ರದಲ್ಲಿ, ಶಿಶುಪಾಲಕರ ಮೇಲ್ವಿಚಾರಣೆಯಲ್ಲಿ ನೋಡಿಕೊಳ್ಳಲಾಗುತ್ತಿತ್ತು. ಶಿಶುಪಾಲಕನ ಬೇಜವಾಬ್ದಾರಿಯಿಂದಾಗಿ 7 ತಿಂಗಳ ಮಗು ಕ್ಲಾರ್ಕ್ ಆಸ್ಪತ್ರೆ ಸೇರುವಂತಾಗಿ ಮೆದುಳು ನಿಷ್ಕ್ರಿಯಗೊಂಡು ಕೊನೆಗೆ ಸಾವನ್ನಪ್ಪುವ ಸ್ಥಿತಿಯಲ್ಲಿರುತ್ತದೆ.  ಲ್ಯೂಕಾಸ್‌ ಕ್ಲಾರ್ಕ್‌ನ ತಾಯಿ ಹೀದರ್ ಕ್ಲಾರ್ಕ್, ಮಗುವನ್ನು ಕಳೆದುಕೊಳ್ಳುವ ಚಿಂತೆಯಲ್ಲಿದ್ದರೂ, ತನ್ನ ಮಗುವಿನ ಅಂಗಾಂಗವನ್ನು ದಾನ ಮಾಡಲು ಮುಂದೆ ಬರುತ್ತಾಳೆ. ಆ ಮೂಲಕ ಸಾವಿನ ಅಂಚಿನಲ್ಲಿದ್ದ ಮೂರು ಜೀವಗಳಿಗೆ ಪುನರ್‌ಜನ್ಮ ನೀಡುತ್ತಾಳೆ. ಹೀದರ್ ಅವರ ನಿಸ್ವಾರ್ಥ ನಿರ್ಧಾರದಿಂದ ರಕ್ಷಿಸಲ್ಪಟ್ಟ ಮೂರು ಮಕ್ಕಳಲ್ಲಿ ಜೋರ್ಡಾನ್ ಎಂಬ ಮಗು ಕೂಡ ಒಂದು.

ಜೋರ್ಡಾನ್ ಡ್ರೇಕ್ (ಹೃದಯ ಕಸಿ ಮಾಡಿಸಿಕೊಂಡ ಮಗು) ತನ್ನ 4 ವರ್ಷಗಳ ಜೀವನದ ಬಹುಪಾಲು ಸಮಯವನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾಳೆ ಎಂದು ವರದಿಯಾಗಿದೆ. ಆ ಮಗು ಹುಟ್ಟುವಾಗಲೆ ಹೃದಯಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದಳು ಆ ಮಗುವನ್ನು ಅದರಿಂದ ಪಾರು ಮಾಡಲು ಇದ್ದ ಒಂದು ಅವಕಾಶ ಎಂದರೆ ಅದು ಹೃದಯ ಕಸಿ, ಅದರಿಂದ ಮಾತ್ರ ಆ ಮಗುವನ್ನು ಉಳಿಸಲು ಸಾಧ್ಯ ಎಂದು ವೈದ್ಯರು ಹೇಳಿರುತ್ತಾರೆ.

ಲುಕಾಸ್ ಕ್ಲಾರ್ಕ್ 7 ತಿಂಗಳ ಮಗುವಿನ ಸಾವಿಗೆ ಸಂಬಂಧಿಸಿದಂತೆ ವಿಚಾರಣೆಯು ಕೋರ್ಟ್‌ನಲ್ಲಿದ್ದು ತನಿಖೆ ನಡೆಯುತ್ತಿದೆ ಎಂದು ಕ್ಲಾರ್ಕ್ ಹೇಳುತ್ತಾರೆ. ಕ್ಯಾಲಿಫೋರ್ನಿಯಾದ ಕ್ಲಾರ್ಕ್ ತಾಯಿ ಜೋರ್ಡಾನ್ ಸೇರಿದಂತೆ ಮೂವರಿಗೆ ತ್ವರಿತವಾಗಿ ತನ್ನ ಮಗುವಿನ ಅಂಗಗಳನ್ನು ದಾನ ಮಾಡುತ್ತಾರೆ “ನಾನು ಆ ಮೂರು ಜೀವಗಳಿಗೆ ನನ್ನ ಮಗುವಿನ ಅಂಗಾಂಗಗಳನ್ನು ದಾನ ಮಾಡಿದರೆ ಆ ಮಕ್ಕಳು ಉಳಿಯುತ್ತಾರೆ ಆ ಕುಟುಂಬವಾದರು ತನ್ನ ಮಕ್ಕಳೊಂದೆಗೆ ಸಂತೋಷದಿಂದಿರಲಿ ಎಂದು ಆಶಿಸಿ ತನ್ನ ಮಗುವಿನ ಅಂಗಾಗಗಳನ್ನು ದಾನ ಮಾಡುತ್ತಾಳೆ.

2016 ರ ಫೆಬ್ರವರಿ 1 ರಂದು CNN ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಹೀದರ್ ಕ್ಲಾರ್ಕ್ ಜೋರ್ಡಾನ್ ಮತ್ತು ಅವರ ಕುಟುಂಬದೊಂದಿಗೆ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿವೆ. ಈ ವೇಳೆ ಜೋರ್ಡಾನ್‌ನ ಎದೆಯಲ್ಲಿ ತನ್ನ ಮಗನ ಹೃದಯ ಬಡಿತವನ್ನು ಕೇಳಲು ಹೀದರ್ ಸ್ಟೆತಸ್ಕೋಪ್ ಅನ್ನು ಬಳಸುತ್ತಿರುವಾಗ ಜೋರ್ಡಾನ್‌ನ ತಾಯಿ ತನ್ನ ಮಗಳನ್ನು ತನ್ನ ತೊಡೆಯ ಮೇಲೆ ಹಿಡಿದಿದ್ದಾಳೆ. ಇದೇ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆಯು ಸುಮಾರು ವರ್ಷಗಳ ಹಿಂದೆ ನಡೆದಿರುವ ಒಂದು ಮನ ಮಿಡಿಯುವ ಘಟನೆಯಾಗಿದ್ದು ಎಲ್ಲರ ಕಣಂಚುಗಳು ಜಿನುಗುವಂತೆ ಮಾಡಿದೆ.

ಜೋರ್ಡಾನ್‌ನ ಹೃದಯಕ್ಕೆ ಸ್ಟೆತೊಸ್ಕೋಪ್ ಇಟ್ಟು ಹೂದಯ ಬಡಿತ ಕೇಳುವ ಮೊದಲು ಕ್ಲಾರ್ಕ್, ಜೋರ್ಡಾನ್ ಮತ್ತು ಅವಳ ತಾಯಿ ಎಸ್ತರ್ ಗೊಂಜಾಲೆಜ್ ಅವರನ್ನು ಅಪ್ಪಿಕೊಂಡು ಕಣ್ಣೀರಾಕುತ್ತಾಳೆ. “ಅವಳು ತನ್ನ ದುಃಖವನ್ನು ಅನುಭವಿಸುತ್ತಿರುವಾಗ ಮತ್ತೊಂದು ಕುಟುಂಬದ ಬಗ್ಗೆ ಯೋಚಿಸಲು ಸಾಧ್ಯವಾಗುವಂತೆ ನಿಸ್ವಾರ್ಥವಾಗಿರುತ್ತಾಳೆ ಎಂದು ವಿವರಿಸಲು ಕಷ್ಟವಾಗುತ್ತದೆ” ಎಂದು ಗೊಂಜಾಲೆಜ್ ಹೇಳುತ್ತಾರೆ, ಆ ಮಗು ಫೀನಿಕ್ಸ್ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ನರಳುತ್ತಿರುವಾಗ ಆ ಮಗುವಿಗೆ ನನ್ನ ಮಗನ ಹೃದಯ ಸಹಾಯ ಮಾಡಿತು ಈಗ ನಾವು ಒಂದೇ ಕುಟುಂಬದವರಾಗಿದ್ದಾವೆ, ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಮೂಡಿದೆ ಎನ್ನತ್ತಾರೆ ಕ್ಲಾರ್ಕ್. “ಇಂದಿನಿಂದ ಒಂದು ವಾರ ನಾನು ಮತ್ತೊಮ್ಮೆ ಲುಕಾಸ್‌ನ ಹೃದಯ ಬಡಿತವನ್ನು ಕೇಳುತ್ತೇನೆ” ಎಂದು ಕ್ಲಾರ್ಕ್ ಬರೆದಿದ್ದಾರೆ. “ನಾನು ಜೋರ್ಡಾನ್ ಅನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುತ್ತೇನೆ ಮತ್ತು ಅವಳಿಗೆ ಪ್ರೀತಿಯಿಂದ ಮತ್ತು ಮುತ್ತು ನೀಡುತ್ತೇನೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು!”

ಕ್ಲಾರ್ಕ್ ತನ್ನ ಮಗನ ಹೃದಯ ಬಡಿತದ ಶಬ್ದವನ್ನು ರೆಕಾರ್ಡ್ ಮಾಡಿಕೊಂಡು ತನ್ನ ಬಳಿಯಲ್ಲೆ ಇಟ್ಟುಕೊಳ್ಳುವ ಆಸೆಯನ್ನು ಹೊಂದಿದ್ದರು, ಹಾಗೆ ಅವರ ಅಂದುಕೊಂಡಂತೆ ರೆಕಾರ್ಡ್ ಮಾಡಿಕೊಂಡು ಆನಂದಿಸಿದರು ಎಂದು ವರದಿಗಳು ಲಭ್ಯವಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊದ ಘಟನೆಯು ನಿಜವಾಗಿಯೂ ನಡೆದಿದ್ದು ಇದು ಸುಮಾಡು 6 ವರಷಗಳ ಹಿಂದೆ ನಡೆದ ಘಟನೆಯಾಗಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಏನ್ ಸುದ್ದಿ.ಕಾಂ ಗೆ ಬಂದ ಕರೆಗಳ ಮನವಿ ಮೇರೆಗೆ ಘಟನೆಯ ವಾಸ್ತವವನ್ನು ಫ್ಯಾಕ್ಟ್‌ಚೆಕ್ ಮಾಡಲಾಗಿದ್ದು ಇದು ನೈಜ ಮನಮಿಡಿಯುವ ಘಟನೆಯಾಗಿದೆ.

                                                                                                               ಕೃಪೆ: Little Things, CNN/YouTube / Photo Credit: CNN/YouTube


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಜಿಲ್ಲಾಧಿಕಾರಿ ಏಕೆ ಮೇಕಪ್ ಮಾಡಿಲ್ಲ? – ಇದು ಕಲ್ಪಿತ ಕಥೆ ಹೊರತು ನೈಜ ಘಟನೆಯಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights