Fact check: ಸಿರಿಯಾ ಆಂತರಿಕ ಸಂಘರ್ಷದ ಫೋಟೋಗಳನ್ನು ಆಫ್ಘಾನಿಸ್ತಾನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಸ್ವಾಧೀನದ ಪಡಿಸಿಕೊಂಡ ಕ್ಷಣದಿಂದಲೂ ಜಾಗತಿಕವಾಗಿ ಪರ ವಿರೋಧ, ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿವೆ. ಅಮೇರಿಕಾದ ಮಿಲಿಟರಿ ಸೇನೆಯನ್ನು ಕೇಂದ್ರೀಕರಿಸಿ ದೇಶದ ದಾರುಣ ಸ್ಥಿತಿಯ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಅಫ್ಘನ್ ಆರ್ಥಿಕತೆಯು ನಾಶವಾಗಿದೆ, ಹಣದುಬ್ಬರದಲ್ಲಿ ಬಾರಿ ಏರಿಕೆಯಾಗಿದೆ ಮತ್ತು ವರದಿಗಳ ಪ್ರಕಾರ ಬಡತನ ಮತ್ತು ನಿರುದ್ಯೋಗವು ಹೆಚ್ಚಾಗಿದ್ದು, ಹಸಿವಿನಿಂದ ಪಾರಾಗಲು ಜನರು ತಮ್ಮ ಮಕ್ಕಳನ್ನು ಮತ್ತು ಅಂಗಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಸುದ್ದಿಗಳು ಪ್ರಸಾರವಾಗುತ್ತಿವೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಕ್ಷಣಕಾಲ ಆತಂಕ ಮೂಡಿಸುವಂತಿವೆ, ಮಕ್ಕಳು ಬುಲೆಟ್ ಶೆಲ್‌ಗಳನ್ನು ಮತ್ತು ಮದ್ದು ಗುಂಡುಗಳನ್ನು(ಸ್ಫೋಟಕ ವಸ್ತುಗಳನ್ನು) ಹೊತ್ತೊಯ್ಯುತ್ತಿರುವ ನಾಲ್ಕು ಫೋಟೋಗಳು ಸೆಟ್ ಯುದ್ಧ ಪೀಡಿತ ಪ್ರದೇಶದಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ. “ಅಮೆರಿಕಾದ ಸೇನೆ ವಾಪಸಾತಿಯ ನಂತರ ಅಫ್ಘಾನಿಸ್ತಾನದಲ್ಲಿನ ಎಳೆಯ ಜೀವಗಳ ಪ್ರತಿಬಿಂಬ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ವೈರಲ್ ಆಗುತ್ತಿವೆ “20 ವರ್ಷಗಳ ಯುದ್ಧದ ನಂತರ, ಯುಎಸ್ ಅಫ್ಘಾನಿಸ್ತಾನದ ಮಕ್ಕಳನ್ನು ಈ ಹಂತಕ್ಕೆ ತಂದಿದೆ” ಎಂದು ದೂರಲಾಗಿದೆ.

ವೈರಲ್ ಆಗುತ್ತಿರುವ ಫೋಸ್ಟ್ ಮತ್ತು ಪೋಟೋಗಳ ಕುರಿತು ಪರಿಶೀಲಿಸಲು ಫ್ಯಾಕ್ಟ್‌ಚೆಕ್ ಮಾಡಿದಾಗ ವೈರಲ್ ಫೋಟೋಗಳು ಆಫ್ಘಾನಿಸ್ತಾದ ಫೋಟೋಗಳಲ್ಲ, ಅವು  ಸಿರಿಯಾದಲ್ಲಿ ನಡೆದ ಆಂತರಿಕ ಸಂಘರ್ಷದ ಸಂದರ್ಭದಲ್ಲಿ ತೆಗೆದಿರುವ ಪೋಟೋಗಳೆಂದು ತಿಳಿದುಬಂದಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸುತ್ತಿರುವ ಹೇಳಿಕೆ ತಪ್ಪಾಗಿದೆ.

ಫ್ಯಾಕ್ಟ್‌ಚೆಕ್:

ಫೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್‌ ಮಾಡಿದಾಗ “ಮಧ್ಯಪ್ರಾಚ್ಯ ಫೋಟೋಗಳು ಲಭ್ಯವಾಗಿದ್ದು  ಮತ್ತಷ್ಟು ಶೋದ ನಡೆಸಿದಾಗ” ವೆಬ್‌ಸೈಟ್‌ನ ವರದಿಗಳು  “ದಿ ಶೆಲ್ಸ್ ಆಫ್ ವಾರ್” ಎಂಬ ಶೀರ್ಷಿಕೆಯನ್ನು ಹೊಂದಿದೆ.

“ದಿ ಶೆಲ್ಸ್ ಆಫ್ ವಾರ್” ಎಂಬುದು ಸಿರಿಯಾದಿಂದ ಅಲಿ ಹಾಜ್ ಸುಲೇಮಾನ್ ತೆಗೆದ ಛಾಯಾಚಿತ್ರಗಳ ಸಂಗ್ರಹವಾಗಿದೆ. ಇದು ಸ್ಥಳಾಂತರಗೊಂಡ ಸಿರಿಯನ್ ವ್ಯಕ್ತಿಯಿಂದ ನಡೆಸಲ್ಪಡುವ ಸ್ಕ್ರ್ಯಾಪ್‌ಯಾರ್ಡ್‌ ಆಗಿದೆ. ಆತ ತನ್ನದೇ ಆದ ಯುದ್ದ ಸಾಮಗ್ರಿಗಳನ್ನು ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದನು, ಅವನು ತನ್ನಂತಹ ಇತರರಿಗೆ ಚಿಪ್ಪುಗಳು, ಗಾರೆ ಸುತ್ತುಗಳು, ಕ್ಷಿಪಣಿಗಳು ಮತ್ತು ಗುಂಡುಗಳನ್ನು ಸಂಘರ್ಷ ವಲಯಗಳಿಂದ ಸ್ಕ್ರ್ಯಾಪ್ ಮೆಟಲ್‌ನಂತೆ ಮಾರಾಟ ಮಾಡುವ ಮೂಲಕ ಸಿರಿಯಾದಲ್ಲಿ ನಡೆಯುತ್ತಿದ ಆಂತರಿಕ ಯುದ್ದಕ್ಕೆ ಸಹಾಯ ಮಾಡುತ್ತಿದ್ದನು.

ಅಲಿ ಅವರ ಫೋಟೋ ಮತ್ತು ಕೀವರ್ಡ್ ಬಳಸಿ ಮತ್ತಷ್ಟು ಸರ್ಚ್ ಮಾಡಿದಾಗ, ನಾವು ಅಲಿ ಹಾಜ್ ಸುಲೇಮಾನ್ ಅವರ ಟ್ವಿಟರ್ ಅಕೌಂಟ್ ಕೂಡ ಪರಿಶೀಲಿಸಲು ಸಾದ್ಯವಾಗಿದೆ. ಯುದ್ಧದ ಫೋಟೋಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕ ಅಲಿ ತನ್ನ ಪ್ರೊಫೈಲ್‌ನಲ್ಲಿರುವ ಫೋಟೋಗಳಿಗೆ ಹೊಂದಿರುವ ಮತ್ತೊಂದು ಟ್ವೀಟ್‌ನ ಸ್ಕ್ರೀನ್‌ಶಾಟ್‌ನೊಂದಿಗೆ ಪಿನ್ ಮಾಡಿದ ಟ್ವೀಟ್ ನ ಲಿಂಕ್ ಲಭ್ಯವಾಗಿದೆ.

“ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರಕಟಿಸಿರುವ @zlj517 , ಫೋಟೋಗಳು ಇಡ್ಲಿಬ್‌ ನಲ್ಲಿ ತೆಗೆದಿರುವ ಚಿತ್ರಗಳು ಎಂದು ಹೇಳಿಕೊಂಡಿದ್ದಾರೆ ಮತ್ತು ‘ಅಫ್ಘಾನಿಸ್ತಾನದ ಮಕ್ಕಳಿಗೆ ಯುನೈಟೆಡ್ ಸ್ಟೇಟ್ಸ್ ತಂದದ್ದು ಇದನ್ನೇ’ ಎಂದು ಹೇಳಿಕೊಂಡಿದ್ದಾರೆ, ಆದರೆ ವಾಸ್ತವವಾಗಿ, ಜನವರಿ 27 ರ ಟ್ವೀಟ್ ನಲ್ಲಿ ಇರುವ ಮಾಹಿತಿ ಪ್ರಕಾರ ಇದು ಸಿರಿಯನ್ ಆಡಳಿತ ಮತ್ತು ರಷ್ಯಾದ ಪಡೆಗಳು ತಂದವು ಇಡ್ಲಿಬ್‌ನಲ್ಲಿರುವ ಮಕ್ಕಳು ಎಂದು ದೃಢಪಡಿಸಿವೆ ”.

@zlj517 ಎಂಬುದು ಚೀನಾದ ವಿದೇಶಾಂಗ ಸಚಿವಾಲಯದ ಅಧಿಕಾರಿ ಲಿಜಿಯಾನ್ ಝಾವೋ ಅವರ ಟ್ವಿಟರ್ ಅಕೌಂಟ್ ಆಗಿದೆ. ಬಳಿಕ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಲಿ ಹಾಜ್ ಸುಲೇಮಾನ್ ಅವರು ಡಿಸೆಂಬರ್ 21, 2021 ರಂದು ನಾಲ್ಕು ಫೋಟೋಗಳನ್ನು ಟ್ವೀಟ್ ಮಾಡಿದ್ದರು.

“ಶೆಲ್ಸ್ ಆಫ್ ವಾರ್’ ನನ್ನ ಕಥೆಗಳಲ್ಲಿ ಒಂದಕ್ಕೆ UNICEF ಫೋಟೋ ಸ್ಪರ್ಧೆ 2021 ರಲ್ಲಿ ಗೌರವ ಸ್ಥಾನವನ್ನು ನೀಡಲಾಯಿತು. ಈ ಕಥೆಯು 3 ಇತರರ ನಂತರ ಬಂದಿದ್ದರೂ, ಸ್ಪರ್ಧೆಯಲ್ಲಿ ಅದರ ಪ್ರವೇಶ, ಫೈನಲ್‌ಗೆ ಬರುವುದು ಮತ್ತು ಗೌರವದ ಸ್ಥಾನವನ್ನು ಪಡೆಯುವುದು ಜಗತ್ತಿಗೆ ತಿಳಿಸುವಲ್ಲಿ ದೊಡ್ಡ ಯಶಸ್ಸು” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

2021 ರ ಯುನಿಸೆಫ್ ಫೋಟೋ ಆಫ್ ದಿ ಇಯರ್ ಅವಾರ್ಡ್‌ನಲ್ಲಿ ತೀರ್ಪುಗಾರರಿಂದ ಅಲಿ ಹಾಜ್ ಸುಲೇಮಾನ್ ಅವರ ಫೋಟೋಗಳಿಗೆ ಗೌರವ ಪ್ರಶಂಸೆಗಳನ್ನು ನೀಡಲಾಗಿರುವ ವರದಿಯು  “ಮಿಡಲ್ ಈಸ್ಟ್ ಇಮೇಜಸ್” ನಲ್ಲಿ ಕಾಣಬಹುದು.

ಈ ಸುದ್ದಿಯೂ ಇಂಡಿಯಾ ಟುಡೆ ದಲ್ಲಿಯೂ ವರದಿಯಾಗಿದ್ದು ಫೋಟೋಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಇಂಡಿಯಾ ಟುಡೆ ಅಲಿ ಹಾಜ್ ಸುಲೇಮಾನ್ ಅವರನ್ನು ಸಂಪರ್ಕಿಸಲಾಗಿದ್ದು ಮತ್ತಷ್ಟು ಮಾಹಿತಿಯನ್ನು ಪಡೆದು ಫೋಟೋಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿರುವಂತೆ ವೈರಲ್ ಆಗುತ್ತಿರುವ “ಬುಲೆಟ್ ಶೆಲ್‌ಗಳು ಮತ್ತು ಮಾರ್ಟರ್ ರೌಂಡ್‌ಗಳನ್ನು ಹೊತ್ತಿರುವ ಮಕ್ಕಳ ನಾಲ್ಕು ಫೋಟೋಗಳು ಅಫ್ಘಾನಿಸ್ತಾನದಿಂದಲ್ಲ ಅವು ಸಿರಿಯಾದಲ್ಲಿ ಸೆರೆ ಹಿಡಿದಿರುವ ಫೋಟೋಗಳು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಪಾದಿಸಲಾಗುತ್ತಿರುವ ಹೇಳಿಕೆ ತಪ್ಪಾಗಿದೆ.


ಇದನ್ನು ಓದಿರಿ: ತನ್ನ ಮಗುವಿನ ಹೃದಯವನ್ನು ಮತ್ತೊಂದು ಮಗುವಿಗೆ ಜೋಡಿಸಿದ ತಾಯಿಯ ಕತೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights