ಪ್ರಿಯಾಂಕ-ರಾಹುಲ್ ಮೇಲೆ ಮ್ಯಾನ್ ಹ್ಯಾಂಡಲಿಂಗ್: 24 ಗಂಟೆ ಬಳಿಕ ಕ್ಷಮೆ ಕೋರಿದ ಯುಪಿ ಪೊಲೀಸರು!
ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆಗೆ ಬಲಿಯಾದ ಸಂತ್ರಸ್ತೆಯ ಪೋಷಕರನ್ನು ಭೇಟಿಗೆ ಹೊರಟಿದ್ದ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ಮೇಲೆ ಮ್ಯಾನ್ ಹ್ಯಾಂಡಲಿಂಗ್ ನಡೆಸಿದ್ದ ಉತ್ತರ ಪ್ರದೇಶ ಪೊಲೀಸರು ಇಂದು ಅವರಲ್ಲಿ ಕ್ಷಮೆ ಕೇಳಿದ್ದಾರೆ.
ದೆಹಲಿಯಿಂದ ಹತ್ರಾಸ್‌ಗೆ ತೆರಳುತ್ತಿದ್ದ ರಾಹುಲ್ ಮತ್ತು ಪ್ರಿಯಾಂಕರನ್ನು ನೋಯ್ಡಾ ಗಡಿಯಲ್ಲಿ ತಡೆದಿದ್ದ ಉತ್ತರ ಪ್ರದೇಶ ಪೊಲೀಸರು ಮ್ಯಾನ್ ಹ್ಯಾಂಡಲಿಂಗ್ ನಡೆಸಿದ್ದರು. ಅಲ್ಲದೆ, ಓರ್ವ ಪುರುಷ ಪೊಲೀಸ್ ಸಿಬ್ಬಂದಿ ಪ್ರಿಯಾಂಕಾರನ್ನು ತಡೆಯಲು ಮುಂದಾದ ವೇಳೆ ಅವರ ಕುರ್ತಾ ಹಿಡಿದು ಎಳೆದಾಡಿದ್ದರು. ಪೊಲೀಸರ ದೌರ್ಜನ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಪೊಲೀಸರಿಗೆ ಗೊತ್ತಿಲ್ಲ. ಇವರು ಕಾನೂನನ್ನು ಹೇಗೆ ಕಾಪಾಡುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಕುರ್ತಾವನ್ನು ಹಿಡಿದಿದ್ದ ಪೊಲೀಸರ ವಿರುದ್ಧ ಜಾಲತಾಣಿಗರು ಕಿಡಿಕಾರಿದ್ದರು.
ಈ ಎಲ್ಲಾ ಬೆಳವಳಣಿಗೆಗಳ ನಂತರ, ಘಟನೆ ನಡೆದು 24 ಗಂಟೆಗಳ ಬಳಿಕ ಉತ್ತರ ಪ್ರದೇಶ ಪೊಲೀಸರು ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಲ್ಲಿ ಕ್ಷಮೆ ಕೋರಿದ್ದಾರೆ.
ಮ್ಯಾನ್ ಹ್ಯಾಂಡಲಿಂಗ್ ಮಾಡಬಾರದಾಗಿತ್ತು. ಪೊಲೀಸರ ನಡೆಯಿಂದ ತಪ್ಪಾಗಿದೆ. ಹೀಗಾಗಿ ಪ್ರಿಯಾಂಕಾ, ರಾಹುಲ್ ಗಾಂಧಿ ಕ್ಷಮೆ ಯಾಚಿಸುತ್ತೇವೆ. ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆದೇಶಿದ್ದು, ತನಿಖೆಯ ನಂತರ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಹತ್ರಾಸ್: ಸಾಕ್ಷಿಯನ್ನು ಸಮಾಧಿ ಮಾಡಿದ್ದಾರೆ; ತನಿಖೆಗೆ ಇನ್ನೇನು ಉಳಿದಿದೆ: ದಿನೇಶ್ ಗುಂಡೂರಾವ್

