ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಐಪಿಎಲ್ ಒಪ್ಪಂದ ಅಂತ್ಯ – ಹರ್ಭಜನ್ ಸಿಂಗ್ ಘೋಷಣೆ

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅವರೊಂದಿಗಿನ ಒಪ್ಪಂದವು ಮುಕ್ತಾಯಗೊಂಡಿದೆ ಎಂದು ಹರ್ಭಜನ್ ಸಿಂಗ್ ಘೋಷಿಸಿದ್ದಾರೆ. 40 ವರ್ಷದ ಕ್ರಿಕೆಟಿಗ ಮುಂದಿನ ಐಪಿಎಲ್ ಹರಾಜಿಗೆ ಮುಂಚಿತವಾಗಿ ಈ ವಿಚಾರ ಬಹಿರಂಗಪಡಿಸಿದ್ದಾರೆ.  ಮುಂಬರುವ ಆವೃತ್ತಿಯ ಉಳಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಕೆಲ ಗಂಟೆಗಳ ಮುನ್ನ ಅವರ ಈ ಹೇಳಿಕೆ ಹೊರಬಿದ್ದಿದೆ.

“ಚೆನ್ನೈಐಪಿಎಲ್ನೊಂದಿಗೆ ನನ್ನ ಒಪ್ಪಂದ ಮುಕ್ತಾಯಗೊಂಡಿದೆ. ಈ ತಂಡಕ್ಕಾಗಿ ಆಡಿದ್ದು ಒಂದು ಉತ್ತಮ ಅನುಭವವಾಗಿತ್ತು. ಕೆಲ ನೆನಪುಗಳು, ಉತ್ತಮ ಸ್ನೇಹಿತರನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಚೆನ್ನೈಐಪಿಎಲ್, ನಿರ್ವಹಣೆ, ಸಿಬ್ಬಂದಿ ಮತ್ತು 2 ವರ್ಷಗಳ ಅಭಿಮಾನಿಗಳಿಗೆ ಧನ್ಯವಾದಗಳು. ಆಲ್ ದಿ ಬೆಸ್ಟ್ .. ” ಎಂದು ಹರ್ಭಜನ್ ಅವರು ಟ್ವೀಟ್ ಮಾಡಿದ್ದಾರೆ.

https://twitter.com/harbhajan_singh/status/1351778962708389889?ref_src=twsrc%5Etfw%7Ctwcamp%5Etweetembed%7Ctwterm%5E1351778962708389889%7Ctwgr%5E%7Ctwcon%5Es1_&ref_url=https%3A%2F%2Fwww.kannadaprabha.com%2Fcricket%2F2021%2Fjan%2F20%2Fipl-contract-with-chennai-super-kings-has-ended-harbhajan-singh-437686.html

ಹರ್ಭಜನ್ ಸಿಂಗ್  2018 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿದ್ದರು. ಎರಡು ವರ್ಷಗಳ ಅಮಾನತಿನ ನಂತರ ತಂಡಕ್ಕೆ ಹಿಂತಿರುಗಿದ್ದ ಅವರು ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಯುಎಇಯಲ್ಲಿ ಕಳೆದ ವರ್ಷ ನಡೆದಿದ್ದ ಐಪಿಎಲ್‌ನ 13 ನೇ ಆವೃತ್ತಿಯಲ್ಲಿ ಆಡದೆ ಇರಲು ತೀರ್ಮಾನಿಸಿದ್ದ ಇಬ್ಬರು ಸಿಎಸ್‌ಕೆ ಆಟಗಾರರಲ್ಲಿ ಹರ್ಭಜನ್ ಕೂಡ ಒಬ್ಬರಾಗಿದ್ದಾರೆ.
ಹರ್ಭಜನ್ 160 ಐಪಿಎಲ್ ಪಂದ್ಯಗಳನ್ನು ಆಡಿದ್ದು, 150 ವಿಕೆಟ್ ಪಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್-ನವೆಂಬರ್ ನಿಂದ ನಡೆದ ಐಪಿಎಲ್ 2020 ರಿಂದ ಹೊರಬರಲು ಹರ್ಭಜನ್ ನಿರ್ಧರಿಸಿದ್ದರು. ಅವರು ಕೊನೆಯ ಬಾರಿಗೆ 2016 ರಲ್ಲಿ ನಡೆದ ಟಿ 20 ವಿಶ್ವಕಪ್ ಸಮಯದಲ್ಲಿ ಭಾರತ ಪರ ಆಡಿದ್ದಾರೆ. 103 ಟೆಸ್ಟ್, 236 ಏಕದಿನ ಮತ್ತು 28 ಟಿ 20 ಐಗಳಲ್ಲಿ ಭಾಗವಹಿಸಿದ್ದಾರೆ. 2007 ರಲ್ಲಿ ಟಿ 20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಅವರು 417 ಟೆಸ್ಟ್ ವಿಕೆಟ್, 269 ಏಕದಿನ ವಿಕೆಟ್ ಮತ್ತು 25 ಟಿ 20 ಐ ವಿಕೆಟ್ ಪಡೆದಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights