ಮಂಗಳವಾರದಿಂದ ಮನ್‌ ಕೀ ಬಾತ್‌ ಆರಂಭಿಸಲಿದ್ದಾರೆ ರಾಹುಲ್‌ಗಾಂಧಿ…!

ಕೊರೊನಾ ವೈರಸ್‌ನಿಂದ ಉಂಟಾದ ಸಂಕಷ್ಟಗಳ ನಿರ್ವಹಣೆ ಮತ್ತು ಭಾರತ-ಚೀನಾ ಗಡಿ ಲಡಾಖ್‌ನಲ್ಲಿನ ಸಂಘರ್ಷಗಳನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರದ ಲೋಪಗಳನ್ನು ಪ್ರಶ್ನೆಸುತ್ತಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಇಂದಿನಿಂದ ಮನ್‌ ಕೀ ಬಾತ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಜನರಿಗೆ ದ್ರೋಹ ಬಗೆಯುತ್ತಿರುವ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಕುತಂತ್ರವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಿದ್ದಾರೆ.

ಅವರು ಮನ್‌ ಕಿ ಬಾಕ್‌ ಆರಂಭಿಸುವ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ ಅವರು,  ‘ಇಂದು ಭಾರತದ ಹಲವಾರು ಸುದ್ದಿ ಮಾಧ್ಯಮಗಳ ಬಹುಪಾಲು ಭಾಗವನ್ನು ಫ್ಯಾಸಿಸ್ಟ್ ಹಿತಾಸಕ್ತಿಗಳು ಅಕ್ರಮಿಸಿಕೊಂಡಿವೆ. ಟಿವಿ ಚಾನೆಲ್‌ಗಳು, ವಾಟ್ಸಾಪ್ ಫಾರ್ವರ್ಡ್ಗಳು ಸುಳ್ಳು ಸುದ್ದಿಗಳಿಂದ ಮತ್ತು ದ್ವೇಷದಿಂದ ತುಂಬಿದ ಮಾಹಿತಿಗಳನ್ನು ಹರಡುತ್ತಿದೆ. ಇಂತಹ ಸುಳ್ಳುಗಳ ನಿರೂಪಣೆಯೇ ಇಂದು ದೇಶವನ್ನು ಛಿದ್ರ ಮಾಡುತ್ತಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕಾರಣಕ್ಕಾಗಿ ‘ಅಂತಹ ಅನೇಕ ಸುಳ್ಳು ವರದಿಗಳ ಸತ್ಯವನ್ನು ನಾನು ಹೊರತರುತ್ತೇನೆ. ಪ್ರಚಲಿತ ವಿದ್ಯಮಾನ, ಇತಿಹಾಸ ಮತ್ತು ಬಿಕ್ಕಟ್ಟು ಪರಿಹಾರದ ಕುರಿತು ಮಾತನಾಡುತ್ತೇನೆ. ಸತ್ಯದ ಬಗ್ಗೆ ತಿಳಿಯಲು ಆಸಕ್ತಿ ಇರುವವರು ಇದನ್ನು ಕೇಳಬಯಸುತ್ತೇನೆ. ನಾಳೆಯಿಂದ, ನಾನು ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ವೀಡಿಯೊದಲ್ಲಿ ಹಂಚಿಕೊಳ್ಳುತ್ತೇನೆ’ ಎಂದು ರಾಹುಲ್‌ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

 

https://twitter.com/RahulGandhi/status/1282663996043083782?ref_src=twsrc%5Etfw%7Ctwcamp%5Etweetembed%7Ctwterm%5E1282664032307040256%7Ctwgr%5E&ref_url=https%3A%2F%2Fwww.kannadaprabha.com%2Fnation%2F2020%2Fjul%2F14%2Frahul-gandhis-mann-ki-baat-from-tomorrow-423609.html

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights