FACT CHECK | ಲಾಸ್‌ ಏಂಜಲೀಸ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚಿನ ದೃಶ್ಯ ಎಂದು AI ಚಿತ್ರ ಹಂಚಿಕೆ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಅನಾಹುತ ಸೃಷ್ಟಿಸಿರುವ ಕಾಳ್ಗಿಚ್ಚಿಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ರಸ್ತೆಯ ಹಿನ್ನೆಲೆಯಲ್ಲಿ ದೊಡ್ಡ ಬೆಟ್ಟ ಧಗ ಧಗನೆ ಉರಿಯುವ, ಹೊತ್ತಿ ಉರಿಯುತ್ತಿರುವ ಪ್ರದೇಶದ ವೈಮಾನಿಕ ನೋಟದ ದೃಶ್ಯಾವಳಿ ಆ ತುಣುಕಿನಲ್ಲಿದೆ.

Fact Check: ಕಾಡ್ಗಿಚ್ಚಿಗೆ ಅಮೆರಿಕದ ಲಾಸ್ ಏಂಜಲೀಸ್‌ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನುವುದು ನಿಜವೇ?

ಅಮೆರಿಕದ ಲಾಸ್ ಏಂಜಲೀಸ್‌ ನಲ್ಲಿ ಕಾಡ್ಗಿಚ್ಚಿನ ಪರಿಣಾಮ ಅಪಾರ ಹಾನಿಯಾಗಿರುವಂತೆಯೇ, ಲಾಸ್‌ ಏಂಜಲೀಸ್‌ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂಬಂತೆ ಹೇಳಿಕೆಯೊಂದು ಹರಿದಾಡುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಲಾಸ್ ಏಂಜಲೀಸ್‌ನಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚಿನ ಪರಿಣಾಮ ಎಂದು ಸುಟ್ಟು ಕರಕಲಾದ ಪ್ರದೇಶದ ಎಂದು ಹೇಳಲಾಗುತ್ತಿರುವ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, ಇದೇ ವಿಡಿಯೊವನ್ನು ಪೋಸ್ಟ್‌ ಮಾಡಿರುವುದು ಲಭ್ಯವಾಗಿದೆ.

ವಿವಿಧ ಕೋನಗಳಲ್ಲಿ ಸೆರೆ ಹಿಡಿದಂತೆ ಕಾಣುವ ವಿಡಿಯೊ ಕ್ಲಿಪ್‌ಗಳನ್ನು ಬಳಸಿ ವಿಡಿಯೊ ಸಿದ್ಧಪಡಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದ್ದ ವಿಡಿಯೊಕ್ಕೆ ಪ್ರತಿಕ್ರಿಯೆ ನೀಡಿದವರಲ್ಲಿ ಕೆಲವರು, ಇದು ಕೃತಕ ಬುದ್ಧಿಮತ್ತೆಯ ವಿಡಿಯೊ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದರ ಆಧಾರದಲ್ಲಿ, ವಿಡಿಯೊದ ಕೆಲವು ಕೀಫ್ರೇಮ್‌ಗಳನ್ನು ಕೃತಕ ಬುದ್ಧಿಮತ್ತೆಯಿಂದ ತಯಾರಿಸಿದ ಚಿತ್ರ, ವಿಡಿಯೊಗಳನ್ನು ‍ಪತ್ತೆ ಮಾಡುವ ವಾಸಿಟೈ ಟೂಲ್‌ನಲ್ಲಿ ಹಾಕಿದಾಗ, ವಿಡಿಯೊ ತುಣುಕಿನಲ್ಲಿ ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ಡೀಪ್‌ಫೇಕ್‌ ವಿಡಿಯೋ ಕ್ಲಿಪ್‌ಗಳು ಇರುವುದು ದೃಢಪಟ್ಟಿತು.

ವಿವಿಧ ಸ್ಥಳಗಳಲ್ಲಿ ಬೆಂಕಿ ಆವರಿಸುತ್ತಿರುವುದನ್ನು ತೋರಿಸುವ ಆರು ಕ್ಲಿಪ್‌ಗಳನ್ನು ವಿಲೀನಗೊಳಿಸಿ ವೀಡಿಯೊವನ್ನು ರಚಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಕೀಫ್ರೇಮ್‌ಗಳನ್ನು ಹೊರತೆಗೆಯುವ ಮೂಲಕ ವೀಡಿಯೊವನ್ನು ವಿಶ್ಲೇಷಿಸಿದ್ದೇವೆ ಮತ್ತು AI ಡಿಟೆಕ್ಟರ್ ಮೂಲಕ ಇದನ್ನು ಪರಿಶೀಲಿಸಿದ್ದೇವೆ.

ಮೊದಲ ಕೀಫ್ರೇಮ್ ಸುಡುವ ಪರ್ವತದ ಕಡೆಗೆ ಹೋಗುವ ತಾಳೆ ಮರಗಳಿಂದ ಕೂಡಿದ ರಸ್ತೆಯನ್ನು ತೋರಿಸುತ್ತದೆ, ಎರಡನೆಯದು ಉರಿಯುತ್ತಿರುವ ಬೆಂಕಿಯ ಮಧ್ಯೆ ಟ್ರಾಫಿಕ್ ಲೈಟ್‌ನಲ್ಲಿ ಕಾರುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದು. ಮೂರನೆಯದು ರಾತ್ರಿಯಲ್ಲಿ ಜ್ವಾಲೆ ಮತ್ತು ಹೊಗೆಯಲ್ಲಿ ಮುಳುಗಿರುವ ನಗರದ ವೈಮಾನಿಕ ನೋಟವನ್ನು ನೋಡಬಹುದು, ನಾಲ್ಕನೆಯದು ಕಟ್ಟಡಗಳು ಮತ್ತು ರಸ್ತೆಗಳಲ್ಲಿ ವ್ಯಾಪಕ ಬೆಂಕಿ ಹರಡಿದಿರುವುದು ತೋರಿಸುತ್ತದೆ. ಐದನೇಯದರಲ್ಲಿ ಜ್ವಾಲೆಯು ಬೆಟ್ಟದ ತುದಿಯನ್ನು ಆವರಿಸಿದೆ. ಅಂತಿಮ ಕೀಫ್ರೇಮ್​ನಲ್ಲಿ ಕಿತ್ತಳೆ ಬಣ್ಣದ ಆಕಾಶದಲ್ಲಿ ಜ್ವಾಲೆಗಳಿಂದ ಮುಳಿಗಿರುವ ನಗರವನ್ನು ಕಾಣಬಹುದು. ಈ ಎಲ್ಲಾ ದೃಶ್ಯಗಳು AI- ರಚಿತವಾದವು ಎಂದು ಪತ್ತೆಹಚ್ಚಲಾಗಿದೆ. (ಇದನ್ನು ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಿ)

ಇನ್ನುಳಿದ ಕೀಫ್ರೇಮ್‌ಗಳನ್ನು ಮತ್ತೊಂದು ಎಐ ಪತ್ತೆ ಟೂಲ್‌ ಹೈವ್‌ ಮಾಡರೇಷನ್‌ನಲ್ಲಿ ಹಾಕಿದಾಗ, ಇದು ನಕಲಿ ವಿಡಿಯೊ ಎಂದು ತೋರಿಸಿತು. ಹಾಗಾಗಿ, ಕಾಳ್ಗಿಚ್ಚಿಗೆ ಸಂಬಂಧಿಸಿದ ವಿಡಿಯೊ ವಾಸ್ತವದ್ದಲ್ಲ, ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಡಿಯೊ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಲಾಸ್‌ ಏಂಜಲೀಸ್‌ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚುನಾವಣೆಯಲ್ಲಿ ಸೋಲುವ ಭಯದಿಂದ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರಾ ಅರವಿಂದ್‌ ಕೇಜ್ರಿವಾಲ್‌?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights