ಮುಂಬೈ ಮಿರರ್‌ ಮತ್ತು ಪುಣೆ ಮಿರರ್ ಪತ್ರಿಕೆಗಳನ್ನು ಮುಚ್ಚಲು ಟೈಮ್ಸ್‌ ಗ್ರೂಪ್‌ ನಿರ್ಧಾರ!

2020ನೇ ವರ್ಷದ ಅಂತ್ಯಕ್ಕೆ ಬರುತ್ತಿದ್ದಂತೆ, ಟೈಮ್ಸ್‌ ಗ್ರೂಪ್‌ನ ಮುಂಬೈ ಮಿರರ್‌ ಮತ್ತು ಪುಣೆ ಮಿರರ್‌ ಪತ್ರಿಕೆಗಳನ್ನು ಮುಚ್ಚಲು ಸಂಸ್ಥೆ ನಿರ್ಧರಿಸಿದೆ.

ಟೈಮ್ಸ್‌ನ ಗ್ರೂಪ್‌ನ ಭಾಗವಾಗಿರುವ ಪುಣೆ ಮಿರರ್‌ ಪಬ್ಲಿಕೇಷನ್‌ ಅನ್ನು ನಿಲ್ಲಿಸಲು ನಿರ್ಧರಿಸಲಾಗಿದ್ದು, ಮುಂಬೈ ಮಿರರ್‌ ವಾರಪತ್ರಿಕೆಯಾಗಿ ಮರುಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮುಚ್ಚಲ್ಪಡುತ್ತಿರುವ ಈ ಎರಡೂ ಪತ್ರಿಕೆಗಳ ಅಸಂಖ್ಯಾತ ನೌಕರರ ಭವಿಷ್ಯದ ಬಗ್ಗೆಯಾಗಲೀ ಮತ್ತು ಅಹಮದಾಬಾದ್ ಮಿರರ್ ಹಾಗೂ ಬೆಂಗಳೂರು ಮಿರರ್ ಪತ್ರಿಕೆಗಳ ಪ್ರಸಾರದ ಬಗ್ಗೆ ಪ್ರಕಟಣೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ನೌಕರರ ಕೊಡುಗೆಯು “ನಿಜವಾಗಿಯೂ ಮೌಲ್ಯಯುತವಾಗಿದೆ.” ಅವರ “ಕಠಿಣ ಪರಿಶ್ರಮ ಮತ್ತು ಉತ್ತಮ ಶ್ರಮ” ಕ್ಕೆ ಧನ್ಯವಾದಗಳು ಎಂದಷ್ಟೇ ಟೈಮ್ಸ್‌ ಗ್ರೂಪ್‌ ಹೇಳಿದೆ.

“ಕೊರೊನಾ, ಲಾಕ್‌ಡೌನ್ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಪತ್ರಿಕೆಯ ಆದಾಯ ಕುಸಿದಿದ್ದು, ಪತ್ರಿಕೆಯ ಮುದ್ರಣ ವೆಚ್ಚವನ್ನು ಹೆಚ್ಚಿಸಿದೆ.” ಹೀಗಾಗಿ ಪತ್ರಿಕೆಯನ್ನು ಮುಚ್ಚಲು ನಿರ್ಧರಿಸಿದೆ. ಅಲ್ಲದೆ, ಈ ಎರಡೂ ಪತ್ರಿಕೆಗಳ ಡಿಜಿಟಲ್ ನ್ಯೂಸ್‌ ಪೋರ್ಟಲ್‌ಗಳು ಮುಂದುವರೆಯುತ್ತಿವೆ ಎಂದು ಹೇಳಿದೆ.

ಪತ್ರಿಕೆಗಳನ್ನು ಮುಚ್ಚುವ ವಿಚಾರಕ್ಕೆ ಹಲವಾರು ಜನರು ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

Spread the love

Leave a Reply

Your email address will not be published. Required fields are marked *