ಭಾಲ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಬಿಜೆಪಿ ಸೇರ್ಪಡೆ…!
ಭಾಲ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಇಂದು ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆ ಯಾದರು.
ಜಿಲ್ಲೆಯ ಹಿರಿಯ ರಾಜಕೀಯ ಪಟು, ಕೆಲ ವರ್ಷಗಳ ಹಿಂದಷ್ಟೇ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರಿದ್ದ ಭಾಲ್ಕಿಯ ಮಾಕಿ ಶಾಸಕ ಪ್ರಕಾಶ ಖಂಡ್ರೆ ಘರ್ ವಾಪಸ್ ಆಗಿದ್ದು, ಇಂದು ಬೆಳಗ್ಗೆ 11ರ ಸುಮಾರಿಗೆ ಅವರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಬಸವಕಲ್ಯಾಣ ುಪಚುನಾವಣೆ ಹಿನ್ನೆಲೆಯಲ್ಲಿ ಜೆಲ್ಲೆಯಲ್ಲಿ ಠಿಕಾಣಿ ಹೂಡಿರುವ ಕಮಲ ಪಾಳಯದ ಸಚಿವ ವಿ.ಸೋಮಣ್ಣ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಗೇಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ತಡರಾತ್ರಿ ಸಂಧಾನ ಯಶಸ್ವಿಯಾಗಿದೆ.
ಪ್ರಕಾಶ್ ಖಂಡ್ರೆ ಬಿಜೆಪಿಗೆ ವಾಪಾಸ್ಸಾಗುತ್ತಿರುವ ಸುದ್ದಿ ಹಲವರ ನಿದ್ದೆಗೆಡಿಸಿದೆ. ಕಳೆದ 2018ರ ಏಪ್ರಿಲ್ ತಿಂಗಳಲ್ಲಿ ಭಾಲ್ಕಿ ಬಿಜೆಪಿ ಟಿಕೆಟ್ ವಂಚಿತರಾಗಿ ಪಕ್ಷದಿಂದ ಮುನಿಸಿಕೊಮಡು ಜೆಡಿಎಸ್ ಸೇರಿದ್ದರು. ಇದೀಗ ಅವರ ಬಿಜೆಪಿ ಸೇರ್ಪಡೆಯಿಂದ ಬಸವಕಲ್ಯಾಣ ಕ್ಷೇತ್ರದ ುಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ವರಿಗೆ ನೆರವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ಹಾಕಲಾಗಿದೆ.
ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜು ಬೊಮ್ಮಾಯಿ, ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವರಾದ ಶ್ರೀ ವಿ ಸೋಮಣ್ಣ ಉಪಸ್ಥಿತರಿದ್ದರು.

