FACT CHECK | ಪ್ರಧಾನಿ ಮೋದಿ ರಾಷ್ಟ್ರಪತಿಯವರನ್ನು ‘ಕಪ್ಪು ಚರ್ಮ’ದವರು ಎಂದು ಅವಮಾನ ಮಾಡಿದ್ದು ನಿಜವೇ?

ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕುರಿತು ಅವಹೇಳನ ಮಾಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚರ್ಮ ಕಪ್ಪು ಬಣ್ಣ ಎಂದು ಹೇಳುವ ಮೂಲಕ ಭಾರತದ ಪ್ರಥಮ ಪ್ರಜೆಯನ್ನು ಅವಮಾನಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪ್ರಧಾನಿ ಮೋದಿ ರಾಷ್ಟ್ರಪತಿ ಮುರ್ಮುರವರನ್ನು ಕುರಿತು ಇಂತಹ ಹೇಳಿಕೆ ನೀಡಿರುತ್ತಿದ್ದರೆ, ಭಾರತದ ಮುಖ್ಯವಾಹಿನಿಯ ಮಾಧ್ಯಮಗಳೆಲ್ಲವೂ ದೊಡ್ಡ ಮಟ್ಟದಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದವು. ಆದರೆ ಅಂತವ ವರದಿಗಳಾಗಿ ಸುದ್ದಿಗಳಾಗಲಿ ಲಭ್ಯವಿಲ್ಲ.ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  8 ಮೇ 2024 ರಂದು  ಬಿಜೆಪಿಯ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡಿದ ವಿಡಿಯೋ ಲಭ್ಯವಾಗಿದೆ.

ತೆಲಂಗಾಣದ ವಾರಂಗಲ್‌ನಲ್ಲಿ 2024ರ ಲೋಕಸಭಾ ಚುನಾವಣೆಯ  ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ  ನರೇಂದ್ರ ಮೋದಿ ಭಾಷಣ ಮಾಡುವ ವಿಡಿಯೋದಲ್ಲಿ ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಮಾಜಿ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಅವರು ಭಾರತದ ವೈವಿಧ್ಯವನ್ನು ವಿವರಿಸುವಾಗ ನೀಡಿರುವ ಹೇಳಿಕೆ ಉಲ್ಲೇಖಿಸಿ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿ ಮಾತನಾಡಿದ್ದರು.

ಪ್ರಧಾನಿ ಮೋದಿ ಭಾಷಣದ ವಿಡಿಯೋದ  44 ನಿಮಿಷಗಳ ಅವದಿಯಲ್ಲಿ, ಮೋದಿ ಹೇಳುವುದನ್ನು ಕೇಳಬಹುದು, “ಅಮೆರಿಕದಲ್ಲಿ ‘ಶೆಹಜಾದಾ’ ಅವರ ತತ್ವಶಾಸ್ತ್ರದ ಮಾರ್ಗದರ್ಶಿಯಾಗಿರುವ ಅಂಕಲ್ ಇದ್ದಾರೆ ಎಂದು ನನಗೆ ತಿಳಿದಿತ್ತು ಮತ್ತು ಕ್ರಿಕೆಟ್‌ನಲ್ಲಿ ಮೂರನೇ ಅಂಪೈರ್‌ನಂತೆ ಈ ‘ಶೆಹಜಾದಾ’ ಮೂರನೇಯವರಿಂದ ಸಲಹೆ ಪಡೆಯುತ್ತಾನೆ. ಅಂಪೈರ್, ಕಪ್ಪು ಚರ್ಮ ಹೊಂದಿರುವವರು ಆಫ್ರಿಕಾದಿಂದ ಬಂದವರು ಎಂದರೆ ನೀವು ಅವರ ಚರ್ಮದ ಬಣ್ಣದಿಂದ ಹಲವಾರು ಜನರನ್ನು ನಿಂದಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

ಈ ಹೇಳಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ‘ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ, ಅವರ ಚರ್ಮದ ಬಣ್ಣ ಕಪ್ಪು ಎಂಬ ಕಾರಣಕ್ಕೆ ಅವರನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷ ಮುಂದಾಗಿತ್ತು ಎಂಬುದು ನನಗೆ ಈಗ ಅರ್ಥವಾಗುತ್ತಿದೆ’ ಎಂದು ಹೇಳಿರುವುದನ್ನು ಕೇಳಬಹುದು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾಷಣದ ಹಿಂದೆ ಮತ್ತು ಮುಂದೆ ಕಟ್‌ ಮಾಡಿ ‘ದ್ರೌಪದಿ ಮುರ್ಮು ಕಪ್ಪು ಬಣ್ಣದವರು’ ಎಂದು ಹೇಳುವ ಭಾಗವನ್ನಷ್ಟೆ ತೆಗೆದು ರಾಷ್ಟ್ರಪತಿಯನ್ನು ಅವಮಾನಿಸಿದ್ದಾರೆ ಎಂದು ಹಂಚಿಕೊಂಡಿರುವುದು ಸ್ವಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಯಾಮ್‌ ಪಿತ್ರೋಡಾ ಹೇಳಿಕೆಯನ್ನು ಉಲ್ಲೇಖಿಸಿ ಜನಾಂಗೀಯ ಭೇದ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡುತ್ತಾ, ಅವರ ಹೇಳಿಕೆಯನ್ನು ಖಂಡಿಸಿ ಮಾತನಾಡಿರುವ ಭಾಗವನ್ನು ಕತ್ತರಿಸಿ ಪ್ರಧಾನಿ ಮೋದಿ, ದ್ರೌಪದಿ ಮುರ್ಮು ಕಪ್ಪು ಚರ್ಮದವರು ಎನ್ನು ಮೂಲಕ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | CSK ಅಭಿಮಾನಿಗೆ RCB ಬೆಂಬಲಿಗರು ಥಳಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights