FACT CHECK | 2019 ರಲ್ಲಿ ಯುಎಇ ರಾಜಕುಮಾರಿ ತಮಿಳುನಾಡಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದ ವಿಡಿಯೋವನ್ನು ತಪ್ಪಾಗಿ ಹಂಚಿಕೆ

ಹಿಂದೂ ಸಂಪ್ರದಾಯದ ಉಡುಪು ಧರಿಸಿ ಮಂದಿರ ಪ್ರದಕ್ಷಿಣೆ ಮಾಡುತ್ತಿರುವವರು ಯಾರು ಅಂದು ಕೊಂಡಿದ್ದೀರಾ? ದುಬೈ ಶೇಖ್ ಅವರ ಹೆಂಡತಿ,ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದಾಗ ತಮಿಳುನಾಡಿನ ಗೋಲ್ಡನ್ ಟೆಂಪಲ್ ದರ್ಶನ ಮಾಡಿದ್ದಾರೆ. ಹಿಜಾಬ್ ಇಲ್ಲ ,ಬುರ್ಖಾ ಇಲ್ಲ. ಸನಾತನ ಹಿಂದೂ ಧರ್ಮಕ್ಕನುಗುಣವಾಗಿ ಶಿಸ್ತಿನ ವಸ್ತ್ರ ಧರಿಸಿ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಇಲ್ಲಿರುವ ಮುಸ್ಲಿಂ ಬಾಂಧವರಿಗೆ ಮಾತ್ರ ನೂರಾರು ಕಟ್ಟುಪಾಡುಗಳು ಎಂತಹ ವಿಚಿತ್ರ ವಿಪರ್ಯಾಸ. ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ದುಬೈ ರಾಜನ ಪತ್ನಿ’ ಭಾರತಕ್ಕೆ ಪ್ರವಾಸಕ್ಕೆಂದು ಬಂದಾಗ ತಮಿಳುನಾಡಿನ ಶ್ರೀಪುರಂನಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 3 ಜೂನ್ 2019 ರಂದು ಪ್ರಕಟಿಸಲಾದ ವೆಲ್ಲೂರು ದೇವಸ್ಥಾನದ  ‘ಶ್ರೀಪುರಂ ಟಿವಿ’ ಹೆಸರಿನ YouTube ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ. ಶೀರ್ಷಿಕೆಯ ಪ್ರಕಾರ, “ಹರ್ ಹೈನೆಸ್ ಶೇಖಾ ಹೆಂಡ್ ಫೈಸಲ್ ಅಲ್ ಖಾಸ್ಸೆಮಿ 22-02-2019 ರಂದು ಶ್ರೀಪುರಂಗೆ ಭೇಟಿ ನೀಡಿದ್ದಾರೆ” ಎಂದು ಬರೆಯಲಾಗಿದೆ.

ಮತ್ತಷ್ಟು ಸರ್ಚ್ ಮಾಡಿದಾಗ,  ನವಭಾರತ್ ಟೈಮ್ಸ್ಪಂಜಾಬ್ ಕೇಸರಿ ಮತ್ತು ಅಮರ್ ಉಜಾಲಾದಲ್ಲಿ 2020 ರ ಸುದ್ದಿ ವರದಿಗಳು ಲಭ್ಯವಾಗಿದ್ದು, ರಾಜಕುಮಾರಿಯು ತಮಿಳುನಾಡು ದೇವಸ್ಥಾನಕ್ಕೆ ಭೇಟಿ ನೀಡಿದ ಹಳೆಯ ವೀಡಿಯೊವನ್ನು  ಎಕ್ಸ್‌(ಟ್ವೀಟರ್) ನಲ್ಲಿ ಪೋಸ್ಟ್ ಮಾಡಿದಾಗ ಅವರು, ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಒಳಗಾದರು ಎಂದು ವರದಿಗಳಲ್ಲಿ  ತಿಳಿಸಲಾಗಿದೆ.

The video is from 2019 when Princess Hend Al Qassimi visited the Sripuram temple in Vellore.

20 ಮೇ 2020ರಲ್ಲಿ ರಾಜಕುಮಾರಿ ತಾನು ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಬದಲ್ಲಿ ತನಗಾದ ಅನುಭವವನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು,  “ಭಾರತದಲ್ಲಿ, ನಾನು ಪಾಂಡಿಚೇರಿಯ ಬೆಟ್ಟಗಳಲ್ಲಿ ಸುತ್ತಿದ್ದೇನೆ. ಅಲ್ಲಿಯ ಹೊಲಗಳ ಡುವೆ ನಡೆಯುವಾಗ ಸೂರ್ಯ ರಶ್ಮಿಯ ಕಿರಣಗಳು ನನನ್ನು ಸೋಕಿದ ಅನುಭವ ಅದ್ಬುತ. ಅಲ್ಲಿಯ ನಗರ ಸೌಂಸರ್ಯವನ್ನು ವೀಕ್ಷಿಸುತ್ತಾ ಬಿಂದಿ ಮತ್ತು ಉಡುಪುಗಳನ್ನು ಖರೀದಿಸಿ ವೆಲ್ಲೂರಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದೆ ಮತ್ತು ಶ್ರೀ ಶಕ್ತಿ ಅಮ್ಮನವರ ಸನ್ನಿದಿಯಲ್ಲಿ ಪ್ರಸಾದ ಸೇವಿಸಿದೆ ಎಂದು ತಪ್ಪ ಪ್ರವಾಸದ ಅನುಭವವನ್ನು ಹಂಚಿಕೊಂದ್ದಾರೆ.

ಒಟ್ಟಾರೆಯಾಗ ಹೇಳುವುದಾದರೆ, 2019ರಲ್ಲಿ ಯುಎಇ ರಾಜಕುಮಾರಿ ಭಾರತದ ತಮಿಳುನಾಡಿಗೆ ಭೇಟಿ ನೀಡಿದ ವಿಡಿಯೋವನ್ನು  ಹಳೆಯ ವೀಡಿಯೊವನ್ನು “ದುಬೈ ರಾಜನ ಪತ್ನಿ ಶೇಖ್ ಹೆಂಡ್ ಅಲ್ ಖಾಸಿಮಿ ಇತ್ತೀಚೆಗೆ ವೆಲ್ಲೂರ್ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | CSK ಅಭಿಮಾನಿಗೆ RCB ಬೆಂಬಲಿಗರು ಥಳಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights