ಕೊರೊನಾದಲ್ಲಿದಿಯಾ ಎರಡು ಬಗೆಯ ವೈರಸ್..? : ಗುಜರಾತಿಗೆ ಕಂಟಕವಾಗಿದ್ದು ಇದೆನಾ?

ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಕೊರೊನಾದಲ್ಲಿ ಎರಡು ತಳಿಯ ವೈರಸ್ ಗಳಿವೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ಸದ್ಯ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಯಾವ ವೈರಸ್ ನಮ್ಮನ್ನು ಕಾಡುತ್ತಿದೆ ಎನ್ನುವ ಪ್ರಶ್ನೆ ಮೂಡಿದೆ.

 ಹೌದು… ಕೊರೊನಾದಲ್ಲಿ ಎಲ್ ಹಾಗೂ ಎಸ್ ಎನ್ನುವ ಎರಡು ತಳಿಗಳಿವೆ. ಇದರಲ್ಲಿ ಎಲ್ ಅನ್ನೋ ತಳಿ ತುಂಬಾನೇ ಅಪಾಯಕಾರಿ, ಅಕ್ರಮಣಕಾರಿಯಾಗಿದ್ದು ಹೆಚ್ಚು ಬಲಿ ಪಡೆದುಕೊಳ್ಳುವ ಸಾಮಾರ್ಥ್ಯ ಹೊದಿರುತ್ತದೆ. ಆದರೆ ಇದರಲ್ಲಿ ಎಸ್ ವೈರಸ್ ಮಾತ್ರ ಅಪಾಯಕಾರಿ ಅಲ್ಲ ಜೊತೆಗೆ ಪರಿಣಾಮಕಾರಿಯೂ ಅಲ್ಲ. ಎಸ್ ವೈರಸ್ ಹರಡಿದರೆ ಅಷ್ಟಾಗಿ ಜೀವದ ಭಯವಿರುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಎಲ್ ವೈರಸ್ ಸದ್ಯ ಗುಜರಾತಿಗೆ ಲಗ್ಗೆ ಇಟ್ಟಿದಿಯಾ ಅನ್ನೋ ಅನುಮಾನ ಶುರುವಾಗಿದೆ.

ಕೊರೊನಾಗೆ 28 ರಾಜ್ಯಗಳು ತತ್ತರಿಸಿ ಹೋಗಿವೆ. ಈ ಪೈಕಿ ಮೊದಲ ಸ್ಥಾನದಲ್ಲಿ ಮಹರಾಷ್ಟ್ರವಿದ್ದರೆ. 2ನೇಯದು ಗುಜರಾತ್. ಕೇರಳದಲ್ಲಿ ಮೊದಮೊದಲು ಕೊರೊನಾ ಎಚ್ಚಾಗಿ ಕಾಡಿತ್ತು. ಆದರೆ ಗುಜರಾತ್ ನಲ್ಲಿ ಏಕಾಏಕಿ ಲಗ್ಗೆ ಇಟ್ಟ ಕೊರೊನಾ  ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರಲಾರಂಭಿಸಿತು. ಏಪ್ರಿಲ್  17ಕ್ಕೆ ಸಾವಿರ ಜನ, ಏಪ್ರಿಲ್ 27ಕ್ಕೆ  3000 ಜನಕ್ಕೆ ಹರಡಿತು. ಇಷ್ಟಕ್ಕೂ ಗುಜರಾತ್ ನಲ್ಲಿ ಇಷ್ಟು ವೇಗವಾಗಿ ವೈರಸ್ ಹರಡಲು ಕಾರಣ ಎಲ್ ವೈರಸ್ ಇರಬಹುದು ಎನ್ನುವ ಅನುಮಾನ ಶುರುವಾಗಿದೆ.

ಹೌದು.. ಚೀನಾದ ವುಹಾನ್ ಸದ್ಯ ಕೊರೊನಾ ಮುಕ್ತವಾಗಿದೆ. 70 ದಿನಗಳಕಾಲ ದಿಗ್ಬಂಧನ ಚೀನಾದಲ್ಲಿ 87000 ಸೋಂಕಿತರ ಸಂಖ್ಯೆ ದಾಟಿತ್ತು. ಇದಕ್ಕೆ ಕಾರಣ ಕೊರೊನಾ ಎಲ್ ತಳಿಯ ವೈರಸ್ ಎನ್ನಲಾಗುತ್ತದೆ. ಚೀನಾದಲ್ಲಿ 2020 ಮಾರ್ಚ ಸಮಯದಲ್ಲಿ ಕೊರೊನಾ ಬಗ್ಗೆ ಒಂದಿಷ್ಟು ಸಂಶೋಧಕರು ಅಧ್ಯಯನ ಮಾಡಿದರು. ಸೋಂಕಿತರಿಂದ ವೈರಸ್ ತೆಗೆದುಕೊಂಡು ಅದರಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅದನ್ನು ಬೇರ್ಪಡಿಸಿ ಸಂಶೋಧನೆ ಮಾಡಿದ ವೇಳೆ ಎರಡು ತಳಿಗಳು ಇರುವುದು ಬೆಳಕಿಗೆ ಬಂದಿದೆ. ಅದ್ರಲ್ಲಿ ಎಲ್ ಕೇಸ್ ಅಧಿಕವಾಗಿತ್ತು. ಇದರಿಂದಾಗಿ ಅಲ್ಲಿ ಸೋಂಕಿರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಿ ಕಂಡುಬಂತು. ಸದ್ಯ ಇದೇ ಅನುಮಾನ ಎದುರಾಗಿ ಗುಜರಾತ್ ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಎಲ್ ದಾಳಿ ಇಟ್ಟಕಡೆಗಳಲೆಲ್ಲಾ ಅತೀ ಹೆಚ್ಚು ಸಾವು ಸಂಭವಿಸಿದೆ. ಜನವರಿಯಲ್ಲಿ ವುಹಾನ್ ನಿಂದ ಅಮೆರಿಕಾಕ್ಕೆ ಲಕ್ಷಾಂತರ ಜನ ಬಂದಿದ್ರು. ಹೀಗಾಗಿ ಅಮೆರಿಕಾದಲ್ಲೂ ಎಲ್  ಕೊರೊನಾ ವೈರಸ್ ಹರಡಿರಬಹುದು ಎನ್ನುವ ಅನುಮಾನ ಸೃಷ್ಟಿಯಾಗಿದೆ. ಜೊತೆಗೆ ಇಟಲಿಯಲ್ಲೂ ಎಲ್ ವೈರಸ್ ಕಾಡುತ್ತಿರುವ ಶಂಕೆ ವ್ಯಕ್ತವಾಗಿದೆ.

ಅಮೆರಿಕಾದಲ್ಲಿ 50 ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಎಲ್ ವೈರಸ್ ಕಾರಣವಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಹಾಗಾದ್ರೆ ವುಹಾನ್ ನಿಂದ ಭಾರತಕ್ಕೆ ಯಾರೂ ಬಂದಿಲ್ಲ? ಇಲ್ಲ ಭಾತರಕ್ಕೆ ದುಬೈ ಹಾಗೂ ಲಂಡನ್ ನಿಂದ ಬಂದವರೇ ಹೆಚ್ಚು. ಹಾಗಂತ ಭಾರತದಲ್ಲಿ ಕೊರೊನಾ ಚಾಲ್ತಿಯಲ್ಲಿಲ್ಲ ಅನ್ಕೋಬೇಡಿ. ಭಾರತವನ್ನು ಕೊರೊನಾ ಅತೀಯಾಗಿ ಭಾತಿಸುತ್ತಿದೆ. ಇಡೀ ದೇಶದಲ್ಲಿ ಕೊರೊನಾ ದಿಂದ ಮೃತಪಟ್ಟವರಲ್ಲಿ ಗುಜರಾತ್ ನ ಕಾಂಗ್ರೆಸ್ ನಾಯಕ ಬದ್ರೂದ್ದೀನ್ ಶೇಖ್ ಒಬ್ಬರು. ಈ ಮಧ್ಯ ಅಹ್ಮದಬಾದ್ ನಲ್ಲಿ ಸಾವಿರಾರು ಜನರಿಗೆ ಕೊರೊನಾ ಹರಡಿತ್ತಿದ್ದು ಹೆಚ್ಚು ಸೋಂಕು ಕಾಡುವ ಸಾಧ್ಯತೆ ಇದ್ದು, 8 ಲಕ್ಷ ಜನರಿಗೆ ಆತಂಕ ಇದೆ ಎನ್ನಲಾಗುತ್ತಿದೆ. ಯಾವುದಕ್ಕೂ ಗುಜರಾತ್ ಹಾಗೂ ಮಹರಾಷ್ಟ್ರ, ಮದ್ಯಪ್ರದೇಶ ಈ ಬಗ್ಗೆ ಗಮನಹರಿಸಬೇಕಿದೆ.

ಯಾಕಂದ್ರೆ ಕೊರೊನಾ 200 ದೇಶಗಳನ್ನು ಕಾಡಿದ ಏಕೈಕ ವೈರಸ್. ಇದಕ್ಕೆ ಎಲ್ ತಳಿಯ ವೈರಸ್ಸೇ ಕಾರಣ ಎನ್ನಲಾಗುತ್ತಿದೆ. ಜಗತ್ತಿನ 17 ದೇಶಗಳನ್ನು ಕಾಡಿದೆ ಚೀನಾದ ಎಲ್ ವೈರಸ್ ನಾ ಮೊದಲ ಟಾರ್ಗೇಟ್ ಅಮೆರಿಕಾ ಎನ್ನಲಾಗುತ್ತಿದೆ.  ನಿಂತಲ್ಲೇ ಕುಂತಲ್ಲೇ ಎಲ್ ವೈರಸ್ ಜನರನ್ನು ಮಕಾಡೆ ಮಲಗಿಸಿದ ವಿಡಿಯೋ ಈಗಲೂ ನಮ್ಮ ಕಣ್ಣ ಮುಂದಿವೆ.

ಸದ್ಯಕ್ಕೆ ಕೊರೊನಾ ವಿಚಾರದಲ್ಲಿ ಅದೆಷ್ಟೋ ಗೊಂದಲಗಳಿವೆ. ಆದರೆ ಸಂಶೋಧಕರು ಗುಜಾರತ್ ಮೇಲೆ ಎಲ್ ವೈರಸ್ ದಾಳಿ ಇಟ್ಟಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಖಚಿತ ಮಾಹಿತಿಗಳು ಹೊರಬೀಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights