ನನ್ನನ್ನೂ ಬಂಧಿಸಿ: ಮೋದಿಯನ್ನು ಟೀಕಿಸದ್ದಾಗಿ 17 ಜನರ ಬಂಧನ; ರಾಹುಲ್‌ಗಾಂಧಿ ಆಕ್ರೋಶ!

ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರದ ವಿಫಲತೆಯನ್ನು ಟೀಕಿಸುವ ಭಿತ್ತಿಪತ್ರಗಳನ್ನು ಹಾಕಿದ್ದಕ್ಕಾಗಿ ದೆಹಲಿಯಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ “ನನ್ನನ್ನೂ  ಬಂಧಿಸಿ” ಎಂದು ಟ್ವೀಟ್‌ ಮಾಡಿದ್ದಾರೆ.

ಕಪ್ಪು ಪೋಸ್ಟರ್‌ಗಳ ಮೇಲೆ ಬಿಳಿ ಬಣ್ಣದಲ್ಲಿ “ಮೋದಿ ಜಿ, ನಮ್ಮ ಮಕ್ಕಳಿಗೆ ಲಸಿಕೆ ಇಲ್ಲ, ವಿದೇಶಗಳಿಗೆ ಲಸಿಕೆಯನ್ನು ಏಕೆ ಕಳಿಸಿದಿರಿ?” ಎಂದು ಪ್ರಶ್ನಿಸಿ ದೆಹಲಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.

ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಕಳೆದ ಕೆಲವು ದಿನಗಳಲ್ಲಿ ದೆಹಲಿ ಪೊಲೀಸರು ಸುಮಾರು 17 ಜನರನ್ನು ಬಂಧಿಸಿದ್ದಾರೆ.

ಪೋಸ್ಟರ್‌ಗಳನ್ನು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ತಿ ವಿರೂಪ ಕಾಯ್ದೆ ಮತ್ತು ಸೆಕ್ಷನ್ 188 ರ ಅಡಿಯಲ್ಲಿ ಸುಮಾರು 21 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಭಿತ್ತಿಪತ್ರವನ್ನು ಹಾಕಿದ್ದಕ್ಕಾಗಿ ಸಾರ್ವಜನಿಕರನ್ನು ಬಂಧಿಸಿರುವ ಸರ್ಕಾರದ ವಿರುದ್ದ ರಾಹುಲ್‌ಗಾಂಧಿ ಮತ್ತು ಇತರ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದು, ನನ್ನನ್ನೂ ಬಂಧಿಸಿ ಎಂದು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕಳೆದ ಮೂರು ವಾರಗಳಿಂದ ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಅದರ ಆರೋಗ್ಯ ವ್ಯವಸ್ಥೆ ಹದಿಗೆಟ್ಟಿದ್ದು, ಆಸ್ಪತ್ರೆಯಲ್ಲಿ ಹಾಸಿಗೆಗಳು, ಆಮ್ಲಜನಕ ಮತ್ತು ಸಮರ್ಪಕ ಚಿಕಿತ್ಸೆಯಿಲ್ಲದೆ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶ, ಗುಜರಾತ್, ಮತ್ತು ಮಧ್ಯಪ್ರದೇಶದಂತಹ ಹಲವಾರು ರಾಜ್ಯಗಳಲ್ಲಿನ ಸರ್ಕಾರಗಳು ತಮ್ಮ ರಾಜ್ಯಗಳಲ್ಲಾಗುತ್ತಿರುವ ಸಾವು-ನೋವುಗಳ ಸಂಖ್ಯೆಯನ್ನು ಮರೆಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿದ್ದು, ನೂರಾರು ಶವಗಳು ನದಿಗಳಲ್ಲಿ ತೇಲುತ್ತಿವೆ ಮತ್ತು ನದಿ ದಡಗಳಲ್ಲಿರುವ ಮರಳಿನಲ್ಲಿ ಹೂತುಹೋಗಿವೆ.

ಇದನ್ನೂ ಓದಿ: ಟಿಎಂಸಿ ತೊರೆದು ಬಂದವರನ್ನು ಕಣಕ್ಕಿಳಿಸಿದ್ದು ತಪ್ಪು; ಬಿಜೆಪಿ ವಿರುದ್ದ ಆರ್‌ಎಸ್‌ಎಸ್‌ ಗರಂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights