ಟಿಎಂಸಿ ತೊರೆದು ಬಂದವರನ್ನು ಕಣಕ್ಕಿಳಿಸಿದ್ದು ತಪ್ಪು; ಬಿಜೆಪಿ ವಿರುದ್ದ ಆರ್‌ಎಸ್‌ಎಸ್‌ ಗರಂ!

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿಯಿಂದ ವಲಸೆ ಬಂದವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದನ್ನು ಆರ್‌ಎಸ್‌ಎಸ್‌ ವಿರೋಧಿಸಿದೆ. ಟಿಎಂಸಿ ತೊರೆದು ಬಿಜೆಪಿ ಸೇರಿದವರ ಬಗ್ಗೆ ಜನಾಭಿಪ್ರಾಯ ಏನಿದೆ ಎಂಬುದನ್ನು ಅಧ್ಯಯನ ಮಾಡದೇ ಅವರಿಗೆ ಟಿಕೆಟ್‌ ನೀಡಿದ್ದೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ನ ಅಂಕಣದಲ್ಲಿ ಹೇಳಿದೆ.

ಬಂಗಾಳ ಚುನಾವಣಾ ಫಲಿತಾಂಶ ಬಂದ ನಂತರ, ಬಂಗಾಳದಲ್ಲಿ ಕೇಸರಿ ಪಡೆಯ ಕಾರ್ಯಕ್ಷಮತೆಯ ಬಗ್ಗೆ ವಿಶ್ಲೇಷಿಸಿರುವ ಆರ್‌ಎಸ್‌ಎಸ್‌, ಬಂಗಾಳದಲ್ಲಿ ಬಿಜೆಪಿ ಸೋಲಿಗೆ ಕೊರೊನಾ ಬಿಕ್ಕಟ್ಟನ್ನು ಎದುರಿಸುವಲ್ಲಿ ಕೇಂದ್ರ ಸರ್ಕಾರದ ವಿಫಲತೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಪರಿಣಾಮಕಾರಿ ಕಲ್ಯಾಣ ಯೋಜನೆಗಳು ಕಾರಣಗಳೆಂದು ಪಟ್ಟಿ ಮಾಡಿದೆ.

ಈ ಹಿಂದೆ ಮಾರ್ಚ್‌ ತಿಂಗಳಿನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿಯೂ ಕೂಟ ಟಿಎಂಸಿ ತೊರೆದು ಬಂದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿ ನಿರ್ಧಾರವನ್ನು ಆರ್‌ಎಸ್‌ಎಸ್ ವಿರೋಧಿಸಿತ್ತು. ಆಗ ಪಕ್ಷದ ರಾಷ್ಟ್ರೀಯ ನಾಯಕತ್ವವು ಆರ್‌ಎಸ್‌ಎಸ್‌ನ ಆಕ್ಷೇಪಣೆಗಳಿಗೆ ಕಿವಿಗೊಡಲಿಲ್ಲ ಎಂದು ಕೇಸರಿ ಶಿಬಿರದ ಹಿರಿಯ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಸ್ಪರ್ಧಿಸಿ ಗೆದ್ದ ಇಬ್ಬರು ಬಿಜೆಪಿ ಸಂಸದರ ರಾಜೀನಾಮೆ…!

ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾಗಿರುವ “ಬಂಗಾಳದಲ್ಲಿ ಕೆಟ್ಟ ಪ್ರಯೋಗಗಳು” ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿರುವ ಲೇಖನದಲ್ಲಿ, “ವಿವಿಧ ಯೋಜನೆಗಳ ಮೂಲಕ ಟಿಎಂಸಿ ಗಳಿಸಿದ ಜನಪ್ರಿಯತೆ, ಕೊರೊನಾ ಪರಿಣಾಮ ಮತ್ತು ಬಿಕ್ಕಟ್ಟನ್ನು ಪರಿಗಣಿಸದೇ ಟಿಎಂಸಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಸೇರಿದಂತೆ ಬಿಜೆಪಿಯ ಕೆಲವು ತಪ್ಪು ನಿರ್ಣಯಗಳು ಮತ್ತು ಕ್ರಮಗಳು ಬಿಜೆಪಿಯ ಸೋಲಿಗೆ ಕಾರಣವೆಂದು ಹೇಳಿದೆ.

ಎಸ್‌ಸಿ / ಎಸ್‌ಟಿ ಸಮುದಾಯಗಳ ಬೆಂಬಲ ಪಡೆಯಲು ಬಿಜೆಪಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರ್‌ಎಸ್‌ಎಸ್ ಮುಖವಾಣಿಯಲ್ಲಿ ಟೀಕಿಸಿದೆ. “ಜಾರ್ಗ್ರಾಮ್ (4 ಸ್ಥಾನಗಳು), ದಕ್ಷಿಣ 24 ಪರಗಣ (31 ಸ್ಥಾನಗಳು), ಪುರ್ಬಾ ಬರ್ಧಮನ್ (16 ಸ್ಥಾನಗಳು), ಮತ್ತು ಕೋಲ್ಕತಾ (11 ಸ್ಥಾನಗಳು) ಜಿಲ್ಲೆಗಳಲ್ಲಿ ಬಿಜೆಪಿಗೆ ಒಂದೇ ಒಂದೂ ಸ್ಥಾನವೂ ಸಿಕ್ಕಿಲ್ಲ. ಅಲ್ಲದೆ, ಒಟ್ಟು 51 ಸ್ಥಾನಗಳನ್ನು ಹೊಂದಿರುವ ಜಂಗಲ್ ಮಹಲ್ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ 17 ಸ್ಥಾನಗಳು ಮಾತ್ರ.

ಇದು ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಬೆಂಬಲವನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ಪರಿಣಾಮಕಾರಿಯಾಗಿ ಪ್ರಯತ್ನ ನಡೆಸಿಲ್ಲ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಮಾಟುವಾ ಸಮುದಾಯದಿಂದಲೂ, ಬಿಜೆಪಿಗೆ ಸಂಪೂರ್ಣ ಬೆಂಬಲ ಸಿಗಲಿಲ್ಲ ಮತ್ತು ಈ ಸಮುದಾಯವು ಹೇಗೆ ಮತ ಚಲಾಯಿಸಿದೆ ಎಂಬುದು ಇನ್ನೂ ಅಧ್ಯಯನ ನಡೆಸಬೇಕಾದ ವಿಷಯವಾಗಿದೆ. ಎರಡು ಹಂತಗಳಲ್ಲಿ ದೇಶವನ್ನು ಕಾಡಿದ ಸಾಂಕ್ರಾಮಿಕ ರೋಗವು ಬಿಜೆಪಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿರಬಹುದು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಸೈಕಲ್ ರಿಕ್ಷಾ ತುಳಿಯುತ್ತಿದ್ದ ಬಡ ದಲಿತ; ಈಗ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights