ತೌಕ್ಟೇ ಚಂಡಮಾರುತ: ಜನರಿಗೆ ನೆರವಾಗುವಂತೆ ರಾಹುಲ್ ಗಾಂಧಿಯಿಂದ ಕೈ ಕಾರ್ಯಕರ್ತರಿಗೆ ಮನವಿ!

ತೌಕ್ಟೇ ಚಂಡಮಾರುತದ ಹಿನ್ನೆಲೆಯಲ್ಲಿ ಅಗತ್ಯವಿರುವ ಜನರಿಗೆ ನೆರವು ನೀಡುವಂತೆ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಹೌದು… ತೌಕ್ಟೇ ಚಂಡಮಾರುತದ ಹಿನ್ನೆಲೆಯಲ್ಲಿ ಅಗತ್ಯವಿರುವ ಎಲ್ಲರಿಗೂ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ತೌಕ್ಟೇ ಚಂಡಮಾರುತ ಅಪ್ಪಳಿಸಲಿದೆ, ಈ ಬಳಿಕ ಒಂದು ದಿನದ ನಂತರ ಗುಜರಾತ್ ನ ಕಡಲ ತೀರವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ)  ಮಾಹಿತಿ ನೀಡಿದೆ.

ಹವಾಮಾನ ಸ್ಥಿತಿಯಿಂದ ವಾಯುಭಾರ ಕುಸಿತ ಕಂಡಿದ್ದು, ಶನಿವಾರ ಮೇ.15 ರಂದು ಬೆಳಿಗ್ಗೆಯಿಂದ ತೌಕ್ಟೇ ಚಂಡಮಾರುತ ತೀವ್ರಗೊಳ್ಳಲಿದೆ. ಮೇ.16-19 ವರೆಗೆ ಪ್ರತಿ ಗಂಟೆಗೆ 150-160 ರಿಂದ ಪ್ರಾರಂಭಿಸಿ 175 ಕಿ.ವೇಗದಲ್ಲಿ ಈ ಚಂಡಮಾರುತ ಸಂಚರಿಸಲಿದೆ.

ಗುಜರಾತ್ ನ ಕಡಲ ತೀರವನ್ನು ಮೇ.18 ಕ್ಕೆ ತಲುಪಲಿದ್ದು, ಐಎಂಡಿ ಎಚ್ಚರಿಕೆ ನೀಡಿದೆ. ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದ ಕಡಲ ತೀರದ ಜಿಲ್ಲೆಗಳು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೇ.15-16 ರಂದು ಮಧ್ಯಮ, ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದ್ದು ಕೊಂಕಣ, ಗೋವಾ, ಗುಜರಾತ್ ನ ಸೌರಾಷ್ಟ್ರ ಜಿಲ್ಲೆಗಳಲ್ಲೂ ಮಳೆಯಾಗಲಿವೆ. ಈ ಚಂಡಮಾರುತಕ್ಕೆ ತೌಕ್ಟೇ ಎಂಬ ಹೆಸರನ್ನು ಮ್ಯಾನ್ಮಾರ್ ನೀಡುದ್ದು ಇದಕ್ಕೆ ಗೆಕ್ಕೊ (ಹಲ್ಲಿ ಎಂಬ ಅರ್ಥ) ಭಾರತದಲ್ಲಿ ಇದು ಈ ವರ್ಷದ ಮೊದಲ ಚಂಡಮಾರುತವಾಗಿರಲಿದೆ.

ಕೇರಳ, ತಮಿಳುನಾಡು, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿಯಲ್ಲಿ ತೌಕ್ಟೇ ಚಂಡಮಾರುತ ಪ್ರಭಾವ ಬೀರುವುದರಿಂದ ಮುಂಚೆಯೇ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿದ್ಧವಾಗಿದೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ 78 ಕುಟುಂಬಗಳ 308 ಜನರನ್ನು ವಿಪತ್ತು ಪೀಡಿತ ಪ್ರದೇಶಗಳಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು ಅಲ್ಲಿ ತೌಕ್ಟೇ ಚಂಡಮಾರುತದಿಂದಾಗಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಇದಲ್ಲದೆ, ಕಲಡಿಯ ತಗ್ಗು ಪ್ರದೇಶಗಳಲ್ಲಿ ಮತ್ತು ಪೂಂಟುರಾದ ಕರಾವಳಿ ಪ್ರದೇಶಗಳಲ್ಲಿ, ರಾತ್ರಿಯ ಸಮಯದಲ್ಲಿ ನಿರಂತರ ಮಳೆಯಿಂದಾಗಿ ನೀರು ಮನೆಗೆ ಪ್ರವೇಶಿಸಿದೆ.

ಹೀಗಾಗಿ ಅಗತ್ಯವಿರುವ ಎಲ್ಲರಿಗೂ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights