ಕೊರೊನಾ ಸಂತ್ರಸ್ತರಿಗೆ ಫುಡ್ ಕಿಟ್ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡ ಶುಭಾ ಪೂಂಜಾ!

ಅರ್ಧಕ್ಕೆ ಮುಗಿದ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಶುಭಾ ಪೂಂಜಾ ಕೊರೊನಾ ಸಂತ್ರಸ್ತರಿಗೆ ಫುಡ್ ಕಿಟ್ ನೀಡಿ ಮಾತುಕೊಟ್ಟಂತೆ ನಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಅರ್ಭಟ ಹೆಚ್ಚಾಗಿದ್ದು, ಅದೆಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಬಿಗ್ ಬಾಸ್ ಸೀಸನ್ 8 ಕೂಡ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಿಂದಾಗಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಮನೆಯಿಂದ ಹೊರಬರುವ ಮುನ್ನ ಮನೆಯ ಎಲ್ಲಾ ಸ್ಪರ್ಧಿಗಳೊಂದಿಗೆ ಶುಭಾ ತಾವು ಹೊರ ಬಂದ ಬಳಿಕ ಸಂತ್ರಸ್ತರಿಗೆ ಸಹಾಯ ಮಾಡುವುದಾಗಿ ಹೇಳಿದ್ದರು. ಮಾತು ಕೊಟ್ಟಂತೆ ಶುಭಾ ಸಂತ್ರಸ್ತರಿಗೆ ಫುಡ್ ಕಿಟ್ ನೀಡಿ ಸಹಾಯ ಮಾಡಿದ್ದಾರೆ.

ತಾವು ಫುಡ್ ಕೊಟ್ಟ ಕೊಲ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶುಭಾ, ಕೈಲಾದ ಸಹಾಯ ಮಾಡಿದ್ದೇನೆ ಎಂದು ಬರೆದಿದ್ದಾರೆ.

ನಟಿ ಶುಭಾ ಮಾತ್ರವಲ್ಲದೇ ಸ್ಯಾಂಡಲ್ ವುಡ್ ಸ್ಟಾರ್ ನಟರಾದ ಕಿಚ್ಚಾ ಸುದೀಪ್, ಉಪೇಂದ್ರ, ಹಿರಿಯ ನಟಿ ಲೀಲಾವತಿ, ನಟಿ ರಾಗಿಣಿ, ನಟಿ ಸಂಜನಾ ಕೂಡ ಬಡವರ ನೆರವಿಗೆ ನಿಂತಿದ್ದಾರೆ. ಸದ್ಯ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಶುಭಾ ಪೂಂಜಾ ಕೂಡ ಬಡವರಿಗೆ ಸಹಾಯ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *