ಮತ್ತೊಂದು ಹಿಸ್ಟಾರಿಕಲ್ ಫಿಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಪ್ರಭಾಸ್…

ದಕ್ಷಿಣ ಚಿತ್ರರಂಗದ ಸ್ಟಾರ್‌ ನಟ ಪ್ರಭಾಸ್ ಅವರು ಮಂಗಳವಾರ ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹುನಿರೀಕ್ಷಿತ ದೊಡ್ಡ ಘೋಷಣೆ ಮಾಡಿದ್ದಾರೆ. ಬಾಹುಬಲಿ ನಿರ್ದೇಶಕ ಓಂ ರೌತ್ ಅವರ ಮುಂದಿನ ಪ್ರಾಜೆಕ್ಟ್ – ಆದಿಪುರಶ್ ಎಂಬ 3 ಡಿ ಆಕ್ಷನ್ ಸಿನಿಮಾದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.

ಆದಿಪುರಶ್ ಅನ್ನು ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಮತ್ತು ಓಂ ರೌತ್ ಸಹ-ನಿರ್ಮಾಣ ಮಾಡಲಿದ್ದಾರೆ. “ದುಷ್ಟರ ಮೇಲಿನ ಒಳ್ಳೆಯ ವಿಜಯವನ್ನು ಆಚರಿಸಲಿರುವ” ಈ ಚಿತ್ರ ಮುಂದಿನ ವರ್ಷ ತೆರೆ ಕಾಣುವ ನಿರೀಕ್ಷೆಯಿದೆ. ಸಾಹೋ ಮತ್ತು ರಾಧೆ ಶ್ಯಾಮ್ ನಂತರ ಆದಿಪುರಶ್ ಸಿನಿಮಾದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಇದು ಭೂಷಣ್ ಕುಮಾರ್ ಅವರ ಮೂರನೇ ಸಿನಿಮಾವಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ‌ ಮಾಹಿತಿ ನೀಡಿರುವ ಪ್ರಭಾಸ್,  ಚಿತ್ರದ ಲೋಗೋ ಪೋಸ್ಟರ್ ಜೊತೆಗೆ “ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಗೆದ್ದಿದ್ದನ್ನು ಆಚರಿಸುತ್ತಿದೆ! #ಆದಿಪುರಶ್.” ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರ 2022 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

 

ಪ್ರಭಾಸ್ ಮತ್ತು ಓಂ ರೌತ್ ಅವರು ತಮ್ಮ  ಸಿನಿಮಾದ ಕ್ಲಿಪ್‌ ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದಾರೆ. ಅದರಲ್ಲಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಸಿನಿಮಾದ ಸೆಟ್ಟೇರುವ ಬಗ್ಗೆ  ಮಾತನಾಡುವುದನ್ನು ಕಾಣಬಹುದು. ಕ್ಲಿಪ್ನಲ್ಲಿ, ಓಂ ರೌತ್ ಅವರು “ನಾಳೆಗೆ ಸಿದ್ಧರಾಗಿದ್ದೀರಾ” ಎಂದು ಪ್ರಭಾಸ್ ಅವರನ್ನು ಕೇಳುತ್ತಿರುವುದನ್ನು ಕಾಣಬಹುದು, ಅದಕ್ಕೆ ನಟ “ಎಲ್ಲ ಉತ್ಸಾಹ, ಬೆರಳು ದಾಟಿದೆ” ಎಂದು ಉತ್ತರಿಸುತ್ತಾರೆ.

ಆದಿಪುರಶ್ ಚಿತ್ರ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿತ್ರದ ಪೂರ್ಣ ಪಾತ್ರವರ್ಗದ ಬಗ್ಗೆ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.

ಬಾಹುಬಲಿ ಚಿತ್ರಗಳಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಪ್ರಭಾಸ್, ನಾಗ್ ಅಶ್ವಿನ್ ಅವರ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights