ಕೊರೊನಾ ಬಂದರೂ ಹಾಸಿಗೆ ಹಿಡಿಯದೆ ಆಸ್ಪತ್ರೆಯ ನೆಲ ಒರಸಿದ ಮಿಜೋರಾಂ ಸಚಿವ..!

ಕೊರೊನಾ ಸೋಂಕು ಹರಡಿದ ಕೂಡಲೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ರೆಸ್ಟ್ ಮಾಡಿ ಪ್ರಾಣ ಉಳಿಸಿಕೊಳ್ಳೋಣ ಅನ್ನೋ ಜನ ಜಾಸ್ತಿ. ಆದರೆ ಇಲ್ಲೊರ್ವ ಕೊರೊನಾ ಸೋಂಕಿತ ಸಚಿವರು ಆಸ್ಪತ್ರೆಯ ನೆಲ ಒರಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಿಜೋರಾಂನ ಇಂಧನ ಮತ್ತು ವಿದ್ಯುತ್ ಸಚಿವ ಆರ್. ಲಾಲ್ಜಿರ್ಲಿಯಾನಾ ಅವರು ಶುಕ್ರವಾರ ಆಸ್ಪತ್ರೆಯ ಮಹಡಿಗಳನ್ನು ಸ್ವಚ್ಚಗೊಳಿಸುತ್ತಿರುವುದು ಕಂಡುಬಂದಿದೆ. ಮೇ 8 ರಂದು ಮಗನಿಗೆ ಕೊರೊನಾ ದೃಢಪಟ್ಟ ನಂತರ71 ವರ್ಷದ ಸಚಿವರಿಗಿಗೂ ಪಾಸಿಟಿವ್ ಬಂದಿತ್ತು. ಆಸ್ಪತ್ರೆಯಲ್ಲಿ ಅವರು ಪತ್ನಿ ಮತ್ತು ಮಗನೊಂದಿಗೆ ಕೋವಿಡ್-19 ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವರ ಕೆಲಸ ವೈದ್ಯಕೀಯ ಸಿಬ್ಬಂದಿಯನ್ನು ಅಥವಾ ಅಧಿಕಾರಿಗಳನ್ನು ಮುಜುಗರಕ್ಕೀಡುಮಾಡದೆ, ಇತರರಿಗೆ ಒಂದು ಉದಾಹರಣೆಯಾಗಿದೆ. ಆದರೆ ಸಚಿವರು ನೆಲ ಒರಸುವುದು ಇದೇ ಮೊದಲಲ್ಲ. ಮನೆಯಲ್ಲಿ ಮತ್ತು ಇತರೆಡೆ ಇಂತಹ ಕೆಲಸಗಳನ್ನು ಅವರು ಮಾಡಿದ್ದಾರೆ.

ಮಿಜೋರಾಂ ಸಚಿವರು ಸಾಮಾನ್ಯ ವ್ಯಕ್ತಿಯಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಮನೆಕೆಲಸಗಳನ್ನು ಮಾಡುತ್ತಾರೆ, ಸಾರ್ವಜನಿಕ ಸಾರಿಗೆ ಅಥವಾ ಮೋಟಾರು ಬೈಕಿನಲ್ಲಿ ಪ್ರಯಾಣಿಸುತ್ತಾರೆ. ಸಮುದಾಯ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ ಮತ್ತು ಹಬ್ಬದ ಸಮಯದಲ್ಲಿ ಸಮುದಾಯ ಹಬ್ಬಕ್ಕೆ ಅಡುಗೆಯವರಾಗಿ ಸೇವೆ ಸಲ್ಲಿಸುತ್ತಾರೆ. ಆಸ್ಪತ್ರೆಯಲ್ಲಿ ಸ್ವೀಪರ್ ಬರಲು ಸಾಧ್ಯವಾಗದಿದ್ದಾಗ ಸಚಿವರು ಮಹಡಿಗಳನ್ನು ಸ್ವತ: ಒರಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights