ಯುಎಸ್ ತಂದೆ ಮಗಳ ನೃತ್ಯಕ್ಕೆ ಫ್ಯಾನ್ಸ್ ಫಿದಾ : ಶಾನೇ ಟಾಪ್ ಆಗಿದಾರೆ ರಿಕಿ ಪಾಂಡ್!
ಡ್ಯಾನ್ಸ್ ಅಂದರೆ ಯಾರಿಗೆ ಯಾನೆ ಇಷ್ಟ ಇಲ್ಲ. ಕೆಲ ಮ್ಯೂಸಿಕ್ ಸಾಂಗ್ಸ್ ಅಂತೂ ಎಂಥವರನ್ನು ಎದ್ದು ಕುಣಿಯುವಂತೆ ಮಾಡುತ್ತವೆ. ಯುಎಸ್ ನಲ್ಲಿ ಹೀಗೆ ಮಸ್ತ್ ಮಸ್ತ್ ಆಗಿ ಡ್ಯಾನ್ಸ್ ಮಾಡುವ ತಂದೆಯ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಬಾಲಿವುಡ್ ಮಂದಿ ಕೂಡ ಇವರ ಡ್ಯಾನ್ಸ್ ಗೆ ಉಘೇ ಉಘೇ ಎಂದಿದ್ದಾರೆ.
ಯುಎಸ್ ನ ರಿಕಿ ಎಲ್ ಪಾಂಡ್ ಅವರ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇವರು ಮೊದಲು ಹೃತಿಕ್ ರೋಷನ್ ಅವರ 2019 ರ ಹಿಟ್ ಸಾಂಗ್ ಘುಂಗ್ರೂಗೆ ನೃತ್ಯ ಮಾಡುವ ವೀಡಿಯೊವನ್ನು ನೆಟಿಜನ್‌ಗಳು ಆನಂದಿಸಿದ್ದರು. ಇಲ್ಲಿಂದಲೇ ಅವರು ಡ್ಯಾನ್ಸ್ ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಇನ್ನೂ ರಿತೀಶ್ ದೇಶ್ಮುಖ್ ಅವರ 2006 ರ ಚಲನಚಿತ್ರ ಅಪ್ನಾ ಸಪ್ನಾ ಮನಿ ಮನಿ ಯಿಂದ ‘ದಿಲ್ ಮೇ ಬಾಜಿ ಗಿಟಾರ್’ಗೆ ನೃತ್ಯ ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈಗ ರಿಕಿಯ ಹೊಸ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅವರು ಜನಪ್ರಿಯ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ಗಾಯಕ ಪವನ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ವೀಡಿಯೊದಲ್ಲಿ, ರಿಕಿ ತನ್ನ ಮಗಳ ಜೊತೆ ಪ್ರಸಿದ್ಧ ಹಾಡು ಲಾಲಿಪಾಪ್ ಲಗೆಲುಗೆ ನೃತ್ಯ ಮಾಡುವುದನ್ನು ಕಾಣಬಹುದು. ತಂದೆ-ಮಗಳು ಜೋಡಿಯ ಹೆಜ್ಜೆಗಳು ಮತ್ತು ಅವರ ಡ್ಯಾನ್ಸಿಂಗ್ ಸ್ಮೈಲ್ಸ್ ಗೆ ಜನ ಮಾರುಹೋಗಿದ್ದಾರೆ .
ಇಂಟರ್ನೆಟ್ ರಿಯಾಕ್ಟ್ ..
ವೀಡಿಯೋ ಹಂಚಿಕೊಂಡಾಗಿನಿಂದ 294 ಕೆ ಬಾರಿ ವೀಕ್ಷಿಸಲಾಗಿದೆ. ಇದು 24,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ರಿಕಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲು ನೆಟಿಜನ್‌ಗಳು ಕಾಮೆಂಟ್‌ಗಳನ್ನು ಮಾಡಿದ್ದಾರೆ.