‘ಇದು ರೈತರ ಕೃಷಿ ಕಾನೂನು ವಿರೋಧಿ ಹೋರಾಟವಲ್ಲ, ಕಾಂಗ್ರೆಸ್ ಪರ ಹೋರಾಟ’ – ಸಿಟಿ ರವಿ

ರಾಜ್ಯ ರಾಜಧಾನಿಯಲ್ಲಿಂದು ರೈತರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದು ಇದಕ್ಕೆ ಕಾಂಗ್ರೆಸ್ ಸಾಥ್ ನೀಡಿದೆ. ಇದರ ವಿರುದ್ಧ ಸಚಿವ ಸಿಟಿ ರವಿ ಕಿಡಿ ಕಾರಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ ಅವರು ‘ಇಂದು ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರೈತರ ಪರವಾಗಿರುವ ಪ್ರತಿಭಟನೆ ಅಲ್ಲ ಕಾಂಗ್ರೆಸ್ ಪರವಾಗಿರುವ ಹೋರಾಟ’ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ಬೀದಿಯಲ್ಲಿ ಕುಳಿತು ಕಾನೂನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತದೆ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಕಾಂಗ್ರೆಸ್ ಅಪಸ್ವರ ಎತ್ತಿತ್ತು. ಯಾವ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಆ್ಯಕ್ಟ್ ರದ್ದು ಮಾಡ್ತೀವಿ ಅಂತ ಹೇಳಿತ್ತೋ ಅದೇ ಪಕ್ಷ ಈಗ ವಿರೋಧಿಸುತ್ತಿದೆ. ಅವರಿಗೆ ವಿರೋಧಿಸಲು ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಯಾವಾಗಲೂ ದಲ್ಲಾಳಿಗಳ ಪರವಾಗಿದೆ. ಈ ಹಿಂದೆಯೂ ಕಾಂಗ್ರೆಸ್ ದಲ್ಲಾಳಿಗಳ ಒತ್ತಡಕ್ಕೆ ಪಣಿದು ಕಾನೂನು ಜಾರಿಗೆ ತರುವುದನ್ನು ಕೈಬಿಟ್ಟಿತ್ತು. ಈಗ ಬಿಜೆಪಿ ಕಾನೂನುನನ್ನು ಜಾರಿಗೆ ತಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಪರವಾಗಿವೆ. ರೈತರಿಗೆ ಸಂಪೂರ್ಣವಾಗಿ ಸ್ವಾಂತಂತ್ರ್ಯವನ್ನು ಕೊಟ್ಟಿದೆ. ಮಾತ್ರವಲ್ಲ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ನಿರ್ಧರಿಸಿದೆ. ಸದ್ಯಕ್ಕಿರುವ ಕಾನೂನುಗಳು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದು ಬರಲು ಸಹಕಾರಿಯಾಗಿದೆ. ದೆಹಲಿಯಲ್ಲಿಯೂ ರೈತರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ದೆಹಲಿಯಲ್ಲಿ ನಡೆಯುತ್ತಿರುವುದು ಸಂಘಟಿತ ಹೋರಾಟವಾಗಿದೆ. ರೈತರ ಹೆಸರಿನಲ್ಲಿ ಕೆಲವರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದರ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಾಗಿದೆ. ಆದರೆ ಬ್ಲಾಕ್ ಮೇಲ್ ಮಾಡಿದರೆ ನಡೆಯುದಿಲ್ಲ. ಕಾನೂನು ಮಾಡುವುದು ಸಂಸತ್ತು. ಬೀದಿಯಲ್ಲಿ ಕುಳಿತು ಕಾನೂನು ಮಾಡುವುದಲ್ಲ. ಕೃಷಿ ಕಾನೂನು ಜನ ವಿರೋಧಿ ಅನ್ನೋದಾದರೆ ಸುಪ್ರಿಂಕೋರ್ಟ್ ಚರ್ಚಿಸಿ. ನಾವು ರೆಡಿ ಇದ್ದೇವೆ. ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸಿದುವುದು ಸರಿಯಲ್ಲ ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *