FACT CHECK | ಹಿಮಾಚಲ ಪ್ರದೇಶದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಕಾರೊಂದು ಮರದ ಕೊಂಬೆಗಳ ಮೇಲೆ ಸಿಲುಕಿಕೊಂಡಿದ್ದು ನಿಜವೇ?

ಮರದವೊಂದರ ಮೇಲೆ ಕಾರು ಸಿಲುಕಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಮರದ ಕೊಂಬೆಗಳ ನಡುವೆ ಕಾರು ಸಿಲುಕಿಕೊಂಡಿರುವುದನ್ನು ಕಾಣಬಹುದು. ಹಿಮಾಚಲ ಪ್ರದೇಶದ ಶಲಘಾಟ್‌ನಲ್ಲಿ ಬೀಸಿದ ಬಿರುಗಾಳಿಗೆ ಕಾರು ಹಾರಿಹೋಗಿ ಮರದ ಕೊಂಬೆಗಳ ಮೇಲೆ ಸಿಲುಕಿಕೊಂಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಏಪ್ರಿಲ್ 17 ರಂದು ‘ಮಿಸ್ ಬಿಮ್ಲಾ‘ ಎಂಬ ಫೇಸ್‌ಬುಕ್ ಬಳಕೆದಾರರು  ಫೋಟೋವನ್ನು (ಆರ್ಕೈವ್ ಲಿಂಕ್) ಹಂಚಿಕೊಂಡಿದ್ದು, “ನಿನ್ನೆ ರಾತ್ರಿ ಭೀಕರ ಚಂಡಮಾರುತದ ಪರಿಣಾಮವಾಗಿ, ಶಾಲುಘಾಟ್ ನಿಂದ ಹಾರಿಹೋದ ಕಾರು, ಕೆಳಗಿನ ಸಾಯಿ ಖಾರ್ಸಿಯಲ್ಲಿರುವ ಮರದ ಮೇಲೆ ಸಿಲುಕಿಕೊಂಡಿತು. ಅದು ಯಾರ ಕಾರು ಎಂದು ಇನ್ನೂ ತಿಳಿದುಬಂದಿಲ್ಲ.” ಎಂದು ಬರೆದುಕೊಂಡಿದ್ದಾರೆ.

X ನಲ್ಲಿ ಒಬ್ಬ ಬಳಕೆದಾರರೊಬ್ಬರು  ಮರದ ಮೇಲೆ ಕಾರು ನಿಂತಿರುವುದನ್ನು ತೋರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬಳಕೆದಾರರು ಈ ವಿಡಿಯೋ ಭಾರತದ್ದು ಎಂದು ಹೇಳಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು  “ಫ್ಲೈಯಿಂಗ್ ಕಾರ್ ಸ್ಪಾಟೆಡ್ ಇನ್ ಇಂಡಿಯಾ” ಎಂದು ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್‌ನ  ಲಿಂಕ್‌ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಹಿಮಾಚಲ ಪ್ರದೇಶದಲ್ಲಿ ಬೀಸಿದ ಬಿರುಗಾಳಿಯ ರಭಸಕ್ಕೆ ಕಾರೊಂದು ಹಾರಿಹೋಗಿ ಮರದ ಮೇಲೆ ಕುಳಿತಿರುವುದು ನಿಜವೇ ಎಂದು ಪರಿಶೀಲಿಸಲು,ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 13 ರಂದು ಚೀನಾದ ವೆಬ್‌ಸೈಟ್ cbsg.scol.com.cn ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.

vishvasnews

ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ವೈರಲ್ ಆಗಿರುವ ಈ ಫೋಟೋವನ್ನು ಸಹ ಅಪ್‌ಲೋಡ್ ಮಾಡಲಾಗಿದೆ. ಇದರ ಪ್ರಕಾರ, ಚಾಂಗ್ನಿಂಗ್ ಕೌಂಟಿಯಲ್ಲಿರುವ ಚಾಲನಾ ಶಾಲೆಯೊಂದು ಕಾರನ್ನು ಮರದ ಮೇಲೆ ಓಡಿಸಿ ವಿಡಿಯೋ ಚಿತ್ರೀಕರಿಸಿ ಜನರನ್ನು ಆಕರ್ಷಿಸಲು ಅದನ್ನು ವೈರಲ್ ಮಾಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಾರನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂಬ ತಪ್ಪು ಮಾಹಿತಿ ಹರಡಿತು. ಇದಾದ ನಂತರ, ಅವರಿಗೆ ಅನೇಕ ಸರ್ಕಾರಿ ಇಲಾಖೆಗಳು ಛೀಮಾರಿ ಹಾಕಿದವು. ನಂತರ ಆ ವಿಡಿಯೋವನ್ನು ಡ್ರೈವಿಂಗ್ ಸ್ಕೂಲ್ ಖಾತೆಯಿಂದ ಅಳಿಸಲಾಗಿದೆ. ಕಾರು ನೆಲದಿಂದ ನಾಲ್ಕು ಅಥವಾ ಐದು ಮೀಟರ್ ಎತ್ತರದಲ್ಲಿರುವ ಮರದ ಮೇಲೆ ‘ನಿಲುಗಡೆ’ ಮಾಡಲಾಗಿತ್ತು.

ಏಪ್ರಿಲ್ 17 ರಂದು ನ್ಯೂಸ್ 18 ಇಂಡಿಯಾದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಸುದ್ದಿಯ ಪ್ರಕಾರ, ನಿನ್ನೆ ರಾತ್ರಿ ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಬಲವಾದ ಗಾಳಿ ಬೀಸಿದೆ. ಬಿರುಗಾಳಿಯಿಂದಾಗಿ ಮರಗಳು ವಾಹನಗಳ ಮೇಲೆ ಬಿದ್ದವು. ಅಲ್ಲಿ ಭಾರೀ ಮಳೆಯೊಂದಿಗೆ ಬಿರುಗಾಳಿ ಬೀಸುವ ಬಗ್ಗೆ ಆರೆಂಜ್ ಅಲರ್ಟ್ ನೀಡಲಾಗಿದೆ.  ಹಾಗಾಗಿಈ ಘಟನೆಗೂ ಹಿಮಾಚಲ ಪ್ರದೇಶಕ್ಕೂ ಸಂಬಂಧವಿಲ್ಲ.

ಈ ನಿಟ್ಟಿನಲ್ಲಿ, ನಮ್ಮ ತಂಡ ಸೋಲನ್‌ನಲ್ಲಿರುವ ದೈನಿಕ್ ಜಾಗರಣ್ ವರದಿಗಾರ ಸುನಿಲ್ ಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಶಲಾಘಾಟ್ ಸೇರಿದಂತೆ ಇಡೀ ಹಿಮಾಚಲ ಪ್ರದೇಶದಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಎದ್ದಿದೆ ಎಂದು ಅವರು ಹೇಳುತ್ತಾರೆ. ಇದರಲ್ಲಿ ವಿದ್ಯುತ್ ಕಂಬಗಳು ಬಿದ್ದು, ಮರಗಳು ಧರೆಗುರುಳಿವೆ. ಕಾರು ಹಾರಿಹೋಗಿ ಮರದ ಮೇಲೆ ಸಿಲುಕಿಕೊಂಡ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವೈರಲ್ ಆಗಿರುವ ಫೋಟೋ ಭಾರತದ್ದಲ್ಲ.

singtao.ca, a Canada-based Chinese language news platform reported on how the car ended up on top of a tree. The car was deliberately planted by a driving school for publicity. This incident had occurred in Sichuan province in China.

ಕೆನಡಾ ಮೂಲದ ಚೀನೀ ಭಾಷಾ ಸುದ್ದಿ ವೇದಿಕೆಯಾದ singtao.ca ನಲ್ಲಿ ಪ್ರಕಟವಾದ ಸುದ್ದಿ ವರದಿಯ ಪ್ರಕಾರ, ಮರದ ಮೇಲೆ ಕಾರನ್ನು ಹೇಗೆ ನುಲುಗಡೆ ಮಾಡಲಾಯಿತು ಎಂದು ವಿವರಿಸಲಾಗಿದ್ದು, ಡ್ರೈವಿಂಗ್ ಶಾಲೆಯೊಂದು ಸಾರ್ವಜನಿಕರ ಗಮನ ಸೆಳೆಯಲು ಪ್ರಚಾರದ ಭಾಗವಾಗಿ ಉದ್ದೇಶಪೂರ್ವಕವಾಗಿ ಕಾರನ್ನು ಮರದ ಮೇಲೆ ನಿಲಿಸಲಾಗಿದೆ.

ಈ ಘಟನೆಯಿಂದಾಗಿ ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಮತ್ತು ಸ್ಥಳೀಯ ಇಂಟರ್ನೆಟ್ ನಿಯಂತ್ರಕ ಕಚೇರಿ ಸೇರಿದಂತೆ ಹಲವಾರು ಅಧಿಕಾರಿಗಳು ಡ್ರೈವಿಂಗ್ ಸ್ಕೂಲ್ ಸಮನ್ಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದಾರೆ. ಡ್ರೈವಿಂಗ್ ಸ್ಕೂಲ್ ತನ್ನ ಸೋಶಿಯಲ್ ಮೀಡಿಯಾದ ಖಾತೆಯಿಂದ ವಿಡಿಯೋವನ್ನು ಡಿಲಿಟ್‌ ಮಾಡಲಾಗಿದೆ.

ಸಿಚುವಾನ್‌ನ ಯಿಬಿನ್‌ನ ಚಾಂಗ್ನಿಂಗ್ ಕೌಂಟಿಯ ಸಾಂಗ್‌ಜಿಯಾಬಾ ಕೈಗಾರಿಕಾ ವಲಯದಲ್ಲಿರುವ ಯಿಬಿನ್ ಬೋಡಾ ಆಟೋಮೋಟಿವ್ ಸರ್ವೀಸಸ್ ಕಂಪನಿಯ ತರಬೇತುದಾರರೊಬ್ಬರು ಈ ಘಟನೆ ಏಪ್ರಿಲ್ 10, 2025 ರಂದು ಸಂಭವಿಸಿದೆ ಎಂದು ಸುದ್ದಿ ವರದಿಯಲ್ಲಿ ದೃಢಪಡಿಸಿದ್ದಾರೆ. ವಿಡಿಯೋ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, ಅಂತಹ ಪ್ರಚಾರದ ಸಾಹಸಗಳನ್ನು ಮಾಡುವುದರಿಂದ ಸುರಕ್ಷತಾ ಅಪಾಯಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ, ಕಾರ್ ಡ್ರೈವಿಂಗ್ ಸ್ಕೂಲ್ ಕಂಪನಿಯು ಪ್ರಚಾರಕ್ಕೆಂದು ಈ ರೀತಿ ಮಾಡಿತ್ತು. ಅನೇಕ ನಿಯಂತ್ರಕ ಅಧಿಕಾರಿಗಳು ಚಾಲನಾ ಶಾಲೆಯ ವಿರುದ್ಧ ಕ್ರಮ ಕೈಗೊಂಡ ನಂತರ, ಶಾಲೆಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ಮರದ ಮೇಲೆ ಕಾರನ್ನು ಒಳಗೊಂಡ ಪೋಸ್ಟ್ ಅನ್ನು ಅಳಿಸಿತು. ಹಾಗಾಗಿ ಇದು ಹಿಮಾಚಲ ಪ್ರದೇಶದಲ್ಲಿ ಬಿರುಗಾಳಿ ಬೀಸಿದಕ್ಕೆ ಸಂಭವಿಸಿದ ಘಟನೆಯಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಧ್ಯಪ್ರದೇಶದ ವಿಡಿಯೋವನ್ನು ಪಶ್ಚಿಮ ಬಂಗಾಳದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights