ಕಾಶ್ಮೀರದ ಮೇಲಿನ ಕಿಚ್ಚನ ಕನಿಕರ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದಆರ್ಟಿಕಲ್‌ 370ಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಕ್ಕಾಗಿ ಅಲ್ಲಿಯ ಜನರು ಇಂದಿಗೂ ಸಾಮಾನ್ಯ ಸೌಲಭ್ಯಗಳಿಲ್ಲದೆ, ಹೆಜ್ಜೆ ಹೆಜ್ಜೆಗೂ ಪೊಲೀಸರ ಪ್ರಶ್ನೆಗಳನ್ನೂ, ಅವರ ಕಿರುಕುಳಗಳನ್ನೂ ಎದುರಿಸಿ ಬದುಕುತ್ತಿದ್ದಾರೆ. ಅಲ್ಲಿಯ ಇಂಟರ್‌ನೆಟ್‌ ಸೌಲಭ್ಯವನ್ನು ಕಿತ್ತುಕೊಂಡು ತಿಂಗಳುಗಳೇ ಉರುಳಿವೆ. ತಿಂಗಳಾನುಗಟ್ಟಲೆ ಅಘೋಷಿತ ಲಾಕ್‌ಡೌನ್‌ ಎದುರಿಸುತ್ತಿದ್ದಾರೆ. ಅಲ್ಲಿಯ ಪರಿಸ್ಥಿತಿಯನ್ನು ನೆನೆದಿರುವ ಸುದೀಪ್‌ ತಮ್ಮ ಟ್ವೀಟ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಹೆಬ್ಬುಲಿ ಚಿತ್ರದಲ್ಲಿ ಮಿಲಿಟರ್‌ ಕಮಾಂಡ್‌ ಆಗಿ ನಟಿಸಿದ್ದ ಸುದೀಪ್‌, ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದ ಸಂದರ್ಭವನ್ನು ನೆನೆದು ಇಂದಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಕಾಶ್ಮೀರ ನೋಡಿದ್ದ ಸುದೀಪ್‌, ಅಂದು ಬೆಡ್ಡಗುಡ್ಡ, ನದಿ, ತೊರೆ, ಹಿಮ, ಜನಜಂಗುಳಿಯೊಂದಿಗೆ ಕಾಶ್ಮೀರ ಸ್ವರ್ಗದಂತೆ ಕಂಗೊಳಿಸುತ್ತಿತ್ತು. ಆದರೆ, ಇಂದು ಅದು ದುಸ್ವಪ್ನವನ್ನಾಗಿ ಬದಲಾಗಿದೆ. ಆದಷ್ಟು ಬೇಗ ಅದು ಮತ್ತೆ ಸ್ವರ್ಗವಾಗಿ ಬದಲಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights