ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ: ಸೋಮವಾರ 280, ಮಂಗಳವಾರ 272…!
ಕೆಳದ ಕೆಲವಾರು ದಿನಗಳಿಗೆ ಹೋಲಿಸಿದರೇ ಇದೇಮೊದಲ ಬಾರಿಗೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದ ಕಂಡುಬಂದಿದೆ… ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಸೋಮವಾರಕ್ಕೆ ಹೋಲಿಸಿದರೇ ಮಂಗಳವಾರದ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 17 ಮಂದಿ ಗುಣಮುಖರಾಗಿದ್ದರೆ, ಒಟ್ಟು ಹತ್ತು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ..

ಸೋಮವಾರ ಸಂಜೆಯ ಹೊತ್ತಿಗೆ ರಾಜ್ಯದಲ್ಲಿ 280 ಸಕ್ರಿಯ ಸೋಂಕಿತರು ಇರುವುದಾಗಿ ವರದಿಯಾಗಿತ್ತು. ಕಳೆದ 24 ತಾಸಿನಲ್ಲಿ ಈ ಸಂಖ್ಯೆ 272ಕ್ಕೆ ಇಳಿದಿದೆ. ಇದೇ ವೇಳೆ ಕೊರೋನಾ ಮಾರಿಯಿಂದ ಮುಕ್ತಿ ಪಡೆದವರ ಸಂಖ್ಯೆ ಏರಿಕೆ ಕಂಡಿದೆ. ಮಂಗಳವಾರ ಒಂದೇ ದಿನ 17 ಮಂದಿ ಗುಣಮುಖರಾಗಿದ್ದು ಈ ಸಂಖ್ಯೆ 112ರಿಂದ 129ಕ್ಕೆ ಏರಿದೆ. ಮೃತರ ಸಂಖ್ಯೆ 17 ಎಂದಿದೆ.
ಮಂಗಳವಾರ ಒಟ್ಟು ಹತ್ತು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಲಬುರ್ಗಿಯಲ್ಲಿ ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದ ಕೊರೋನಾ ಸೋಂಕಿ 80 ವರ್ಷದ ವೃದ್ಧರು ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳ ಪೈಕಿ ಕಲಬುರ್ಗಿ, ವಿಜಯಪುರದಲ್ಲಿ ತಲಾ ಮೂರು, ನಂಜನಗೂಡಲ್ಲಿ ಎರಡು, ಬೆಳಗಾವಿ ಮತ್ತು ಬಂಟ್ವಾಳದಲ್ಲಿ ತಲಾ ಒಂದು ಪ್ರಕರಣ ದಖಲಾಗಿದೆ.

ಬೆಂಗಳೂರಲ್ಲಿ ಒಂದೂ ಹೊಸ ಪ್ರಕರಣ ಇಲ್ಲ, ಈ ಮಧ್ಯೆ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿರುವ ರಾಜಧಾನಿ ಬೆಂಗಳೂರಲ್ಲಿ ಕಳೆದ ಮೂರು ದಿನಗಳಲ್ಲಿ ಒಂದೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 37ಕ್ಕಿಳಿದರೇ ಗುಣಮುಖರಾದವರ ಸಂಖ್ಯೆ 48ಕ್ಕೇ ಏರಿದ್ದು ನಗರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

