ಕೊರೊನಾ Lockdown ಕುರಿತು 10ರ ಬಾಲಕನ ಬಹಿರಂಗ ಪತ್ರ

ಕೊರೊನಾ ವೈರಸ್ ಹಾವಳಿ ಮುಂದುವರೆದಿದ್ದು, ಇಲ್ಲಿಯವರೆಗೆ 3,96,160 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು ವೈದ್ಯರು ಇಂದಿಗೂ ಕೊರೊನಾಗೆ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಭಾರತದಲ್ಲಿ ಮೋದಿಯವರ ತುರ್ತು ಕಾರ್ಯಾಚರಣೆಯಿಂದಾಗಿ ಅಗತ್ಯ, ಮೂಲಭೂತ ಅವಶ್ಯಕತೆಗಳನ್ನು ಹೊಂದಿಸಿಕೊಳ್ಳಲು ಸಮಯವಿಲ್ಲದಂತಾಗಿದೆ.
ಹಲವಾರು ಜನರು ಚೀನಾದಿಂದ ಇಟಲಿಗೆ ಮತ್ತು ಇಟಲಿಯಿಂದ ಭಾರತವೂ ಸೇರಿದಂತೆ ವಿವಿಧ ದೇಶಗಳಿಗೆ ಪ್ರಯಾಣಿಸಿದ್ದರಿಂದ ಕೊರೊನಾ ಸೋಂಕಿನ ಪ್ರಭಾವ ಮತ್ತು ಪರಿಣಾಮ ಹೆಚ್ಚಾಗಿದೆ ಎಂದು ಜನರು ಭಾವಿಸಿದ್ದಾರೆ. ಈ ಬಗ್ಗೆ 10 ವರ್ಷದ ಶಾಲಾ ಬಾಲಕ ಬರೆದ ಆರ್ಟಿಕಲ್ ಇಲ್ಲಿದೆ..

ನಮಸ್ಕಾರ,
ನಾನು ಕಬೀರ್ ಎಸ್ ಸಿರಸಂಗಿ.

ನಾನು ಇಂದು ಮೋದಿಯವರು ಕೊರೊನಾ ವಿರುದ್ಧ ಕೈಗೊಂಢಿರುವ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಿದ್ದೇನೆ.

 

 

ಮೋದಿಯವರು ಯಾವುದೇ ಆಲೋಚನೆಯೂ ಇಲ್ಲದೆ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಿದ್ದಾರೆ. ಅವರು ಇದೂವರೆಗೂ ಮುಂದಾಲೋಚನೆ ಇಲ್ಲದೆ ಮಾಡಿರುವ ನೋಟು ಅಮಾನ್ಯೀಕರಣ, ಸಿಎಎ, ಎನ್ಆರ್ಸಿ, ಎನ್ಪಿಆರ್ ನಂತಹ ನಿರ್ಧಾರಗಳಲ್ಲಿ ಇದೂ ಒಂದು. ನಾವು ಅವರ ನಿರ್ಧಾರಗಳನ್ನು ನೋಡಿದರೆ ತಿಳಿಯುವುತ್ತದೆ, ಅದರಲ್ಲಿ ಯಾವುದೇ ಆಲೋಚನೆಯೂ ಇಲ್ಲವೆಂದು. ಆದರೆ, ಅವೆಲ್ಲವೂ ಭಾರತೀಯ ಜನರಿಗೆ ತೊಂದರೆಯನ್ನು ಉಂಟುಮಾಡುತ್ತಿವೆ.

21 ದಿನಗಳ ಲಾಕ್ಡೌನ್ ಮಾಡಿರುವುದು ತಪ್ಪಾದುದಲ್ಲ. ಹಾಗಂತ ಇದು ಸರಿಯಾದದ್ದೂ ಅಲ್ಲ. ಇದರ ಒಳ್ಳೆಯ ಭಾಗವೆಂದರೆ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವುದು. ಆದರೆ, ಇದರಲ್ಲಿ ತಪ್ಪಾಗಿದ್ದು, ದೇಶದ ಹಲವಾರು ಜನರು ಬಡವರಿದ್ದಾರೆ. ಈಗ ಮಾರುಕಟ್ಟೆ ಮುಚ್ಚಿದ್ದು, ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಹಲವರು ಮನೆಯಿಲ್ಲದೆ, ಹಣವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಉಳಿಯಲು ಜಾಗವೂ ಇಲ್ಲ – ತಿನ್ನಲು ಆಹಾರವೂ ಇಲ್ಲದಂತಾಗಿದೆ. ಮೋದಿಯವರು ಇಂತಹ ಜನರು ಅವರವರ ಹಳ್ಳಿಗಳನ್ನು ಸೇರಲು ಅಥವಾ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಾಲಾವಕಾಶವನ್ನು ನೀಡಬೇಕಾಗಿತ್ತು. ಹಾಗಾಗದೇ ಅವರೆಲ್ಲರೂ ಪರಿತಪಿಸುತ್ತಿದ್ದಾರೆ.

ಮೋದಿಯವರ ತಪ್ಪು ನಿರ್ಧಾರದಿಂದಾಗಿ ನಾನು ನಮ್ಮ ಪೋಷಕರನ್ನು ಸೇರಲು ಸಾಧ್ಯವಾಗಿಲ್ಲ. 21 ದಿನಗಳ ಕಾಲ ನಾನು ಅವರಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ನನ್ನೊಬ್ಬನ ಸಮಸ್ಯೆಯಷ್ಟೇ ಅಲ್ಲ. ನನ್ನಂತಹ ಹಲವು ಮಕ್ಕಳ ಸ್ಥಿತಿಯೂ ಹೀಗೆ ಆಗಿದೆ. ನಾವೆಲ್ಲರೂ ಇದನ್ನು ನಿಲ್ಲಿಸಬೇಕು ಮತ್ತು ಬದಲಾಯಿಸಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights