ಮೋದಿ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ನಾಶಮಾಡಿದ್ದಾರೆ: ರಾಹುಲ್‌ಗಾಂಧಿ

ಕಾಂಗ್ರೆಸ್‌‌ ಪಕ್ಷವು ಹಲವಾರು ದಶಕಗಳಿಂದ ಭಾರತ ಮತ್ತು ನೆರೆ-ಹೊರೆಯ ರಾಷ್ಟ್ರಗಳೊಂದಿಗೆ ಬೆಳೆಸಿದ್ದ ಬಾಂಧವ್ಯ ಮತ್ತು ವ್ಯವಹಾರಿಕ ಸಂಬಂಧವನ್ನು ನರೇಂದ್ರ ಮೋದಿ ನಾಶ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ದುರ್ಬಲಗೊಳ್ಳುತ್ತಿದ್ದು, ಚೀನಾದೊಂದಿಗಿನ ಒಪ್ಪಂದಗಳು ಬಲಗೊಳ್ಳುತ್ತಿವೆ’ ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿದ್ದ ‘ದಿ ಎಕನಾಮಿಸ್ಟ್‌’ ಪತ್ರಿಕೆಯ ಸುದ್ದಿಯ ಸ್ಟ್ರೀನ್‌ ಶಾಟ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್‌ಗಾಂಧಿ, ‘ನೆರೆ-ಹೊರೆಯಲ್ಲಿ ಸ್ನೇಹಿತರಿಲ್ಲದೇ ಬದುಕುವುದು ತುಂಬಾ ಅಪಾಯಕಾರಿ’ ಎಂದು ಪೋಸ್ಟ್‌ ಮಾಡಿದ್ದಾರೆ.

‘ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ತುಂಬಾ ದುರ್ಬಲವಾಗಿದೆ’ ಎಂದು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ಟೀಕಿಸಿದೆ. ಈ ಆರೋಪವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರ, ಭಾರತ ಹಲವು ರಾಷ್ಟ್ರಗಳೊಂದಿಗೆ ಒಪ್ಪಂದಗಳ ಜತೆಗೆ ಗಟ್ಟಿಯಾದ ಸಂಬಂಧವನ್ನು ಹೊಂದಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಬಲಗೊಳ್ಳಲು ಕಾರಣವಾಗಿದೆ ಎಂದು ಪ್ರತಿಕ್ರಿಯಿಸಿದೆ.


ಇದನ್ನೂ ಓದಿ: ನವೆಂಬರ್ 01 ರಿಂದ ಪದವಿ ಕಾಲೇಜುಗಳ ಆರಂಭ: ಕೇಂದ್ರ ಶಿಕ್ಷಣ ಸಚಿವ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights