ಭಗತ್ ಸಿಂಗ್ ನೇಣು ಬಿಗಿದ ದೃಶ್ಯದ ನಾಟಕ ಅಭ್ಯಾಸದ ವೇಳೆ ಬಾಲಕ ಸಾವು!

ಭಗತ್ ಸಿಂಗ್ ನೇಣು ಬಿಗಿದ ದೃಶ್ಯದ ನಾಟಕ ಅಭ್ಯಾಸ ಮಾಡುವಾಗ 9 ವರ್ಷದ ಯುಪಿ ಹುಡುಗ ಸಾವನ್ನಪ್ಪಿದ್ದಾನೆ.

ಉತ್ತರ ಪ್ರದೇಶದ ಬುಡೌನ್ ನ ಬಾಬತ್ ಗ್ರಾಮದಲ್ಲಿ ಗುರುವಾರ ಒಂಬತ್ತು ವರ್ಷದ ಶಾಲಾ ವಿದ್ಯಾರ್ಥಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜೀವನ ಆಧಾರಿತ ನಾಟಕವನ್ನು ಅಭ್ಯಾಸ ಮಾಡುವಾಗ ಸಾವನ್ನಪ್ಪಿದ ಘಟನೆ ನಡೆದಿದೆ.

ಶಿವಂ ಸಾವನ್ನಪ್ಪಿದ ಬಾಲಕ. ಶಿವಂ ಮತ್ತು ಸ್ನೇಹಿತರು ಸ್ವಾತಂತ್ರ್ಯ ದಿನಾಚರಣೆಗೆ ನಾಟಕ ಪ್ರದರ್ಶನ ಮಾಡಲು ನಿರ್ಧರಿಸಿದ್ದಾರೆ. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಾಟಕದ ಅಭ್ಯಾಸ ಆರಂಭಿಸಿದ್ದಾರೆ. ಶಿವಂ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸುವುದಾಗಿ ಸ್ನೇಹಿತರಿಗೇಳಿ ಮನೆಯ ಅಂಗಳದಲ್ಲಿ ನಾಟಕದ ಪೂರ್ವಾಭ್ಯಾಸ ಆರಂಭಿಸಿದ್ದಾನೆ.

ನಾಟಕದ ಅಂತಿಮ ದೃಶ್ಯಕ್ಕಾಗಿ, ಶಿವಂ ಒಂದು ಹಗ್ಗವನ್ನು ತೆಗೆದುಕೊಂಡು, ಒಂದು ಕುಣಿಕೆಯನ್ನು ರೂಪಿಸಿ ಅವನ ಕುತ್ತಿಗೆಗೆ ಹಗ್ಗ ಹಾಕಿಕೊಂಡಿದ್ದಾನೆ. ಈ ವೇಳೆ ಅವನ ಪಾದಗಳು ಜಾರಿ ಶಿವಂ ಸಾವನ್ನಪ್ಪಿದ್ದಾನೆ ಎಂದು ಶಿವಂ ಅವರ ಚಿಕ್ಕಪ್ಪ ವಿನೋದ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕುತ್ತಿಗೆಗೆ ಹಗ್ಗ ಬಿದ್ದಾಗ ಶಿವಂಗೆ ಉಸಿರಾಡಲು ಕಷ್ಟವಾಗಿದೆ. ಆದರೆ ದುರಾದೃಷ್ಟ ಅಂದರೆ ಅವನ ಸ್ನೇಹಿತರು ಅವನು ನಟಿಸುತ್ತಿದ್ದಾನೆಂದು ಭಾವಿಸಿ ಅವನ ಸಹಾಯಕ್ಕೆ ಹೋಗಲೇ ಇಲ್ಲ. ಅವನ ದೇಹ ಒದ್ದಾಡುವುದನ್ನು ನಿಲ್ಲಿಸಿದಾಗ ಮಕ್ಕಳು ಭಯಭೀತರಾಗಿದ್ದಾರೆ.

ಮಕ್ಕಳು ಹಳ್ಳಿಯ ಇತರರಿಗೆ ತಿಳಿಸುವ ವೇಳೆಗಾಗಲೇ ಒಂಬತ್ತು ವರ್ಷದ ಬಾಲಕ ಶಿವಂ ಸಾವನ್ನಪ್ಪಿದ್ದಾನೆ. ಆತನ ಪೋಷಕರು ಪೊಲೀಸರಿಗೆ ಮಾಹಿತಿ ನೀಡದೆ ಆತನ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ಅವರ ಚಿಕ್ಕಪ್ಪ ವಿನೋದ್ ಕುಮಾರ್ ದಿನಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ವರ್ಷ ಇದೇ ರೀತಿಯ ಪ್ರಕರಣದಲ್ಲಿ, ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಭಗತ್ ಸಿಂಗ್ ನ ಮರಣದಂಡನೆಯನ್ನು ಪುನಃ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾಗ ಒಬ್ಬ ಹುಡುಗ ಸಾವನ್ನಪ್ಪಿದ್ದನು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights