ದೇಶದಲ್ಲಿ ಕೊರೊನಾ ಏರಿಳಿತ : 41,649 ಹೊಸ ಕೊರೊನಾ ಕೇಸ್- 593 ಜನ ಬಲಿ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಲವತ್ತು ಸಾವಿರದ ಗಡಿ ದಾಟಿದ್ದು, ಕಳೆದ 24 ಗಂಟೆಗಳಲ್ಲಿ 41,649 ಹೊಸ ಕೊರೊನಾ ಕೇಸ್ ದಾಖಲಾಗಿವೆ. ಒಂದೇ ದಿನದಲ್ಲಿ 593 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲಾದ 41,649 ಪ್ರಕರಣಗಳಲ್ಲಿ ಕೇರಳದಲ್ಲಿ 20,772 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 6,600 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 2,068 ಪ್ರಕರಣಗಳು, ತಮಿಳುನಾಡಿನಲ್ಲಿ 1,947 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 1,890 ಪ್ರಕರಣಗಳು ದಾಖಲಾಗಿವೆ.

ಈವರೆಗೆ ಕೋವಿಡ್ ಸಾವಿನ ಸಂಖ್ಯೆ 4,23,810ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ನಿಂದ 593 ಸಾವುಗಳು ವರದಿಯಾಗಿದ್ದು ಮಹಾರಾಷ್ಟ್ರದಲ್ಲಿ (231) ಗರಿಷ್ಠ ಸಾವುನೋವುಗಳು ವರದಿಯಾಗಿವೆ, ಕೇರಳದಲ್ಲಿ 116 ದೈನಂದಿನ ಸಾವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 37,291 ರೋಗಿಗಳು ಚೇತರಿಸಿಕೊಂಡಿದ್ದು, ಈವರೆಗೆ ದೇಶಾದ್ಯಂತ ಒಟ್ಟು 3,07,81,263 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 4,08,920 ಕ್ಕೆ ಏರಿಕೆಯಾಗಿದೆ.

ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 46,15,18,479 ಡೋಸ್‌ಗಳನ್ನು ನೀಡಲಾಗಿದ್ದು, ಶುಕ್ರವಾರ ಮಾತ್ರ 52,99,036 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.

Spread the love

Leave a Reply

Your email address will not be published. Required fields are marked *