ಮಹಾರಾಷ್ಟ್ರ: ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಅಶ್ಲೀಲ ವಿಡಿಯೋ ಪ್ರಸಾರ; 105 ಮಂದಿ ಬಂಧನ!

ಮಹಾರಾಷ್ಟ್ರದಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಎಸಗಿ, ಮಕ್ಕಳ ಅಶ್ಲೀಲ ವಿಡಿಯೋಗಳು ಮತ್ತು ಛಾಯಾಚಿತ್ರಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪ್ರಕರಣದಲ್ಲಿ ರಾಜ್ಯಾದ್ಯಂತ 105 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಈ ಸಂಬಂಧ 213 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

2019 ರ ಡಿಸೆಂಬರ್‌ನಿಂದನಿಂದ ‘ಆಪರೇಷನ್ ಬ್ಲ್ಯಾಕ್‌ಫೇಸ್’ ಎಂಬ ಹೆಸರಿನಲ್ಲಿ ರಾಜ್ಯ ಸೈಬರ್ ಇಲಾಖೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳು ಕಾರ್ಯಾಚರಣೆ ನಡೆಸಿದ್ದು, 105 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಫೋಸ್ಕೋ ( Protection of Children from Sexual Offences Act) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ.

ಅಮೆರಿಕಾದ ’ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ವು, ಭಾರತದ ವಿವಿಧ ಭಾಗಗಳಿಂದ ಮಕ್ಕಳ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ (NCRB) ತಿಳಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಎನ್‌ಸಿಆರ್‌ಬಿ ಮಾಹಿತಿಯನ್ನು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ರವಾನಿಸಿದೆ.

ಇದನ್ನೂ ಓದಿ: ಬಾಲಕಿಯರ ಮೇಲೆ ಅತ್ಯಾಚಾರ; ರಾತ್ರಿ ವೇಳೆ ಮಕ್ಕಳನ್ನು ಏಕೆ ಕಳಿಸಬೇಕು ಎಂದ ಗೋವಾ ಸಿಎಂ!

2019 ರಿಂದ ಮಹಾರಾಷ್ಟ್ರದಿಂದ 15,255 ಮಕ್ಕಳ ಕಿರುಕುಳ ವಿಡಿಯೊಗಳು ಮತ್ತು ಫೋಟೋಗಳನ್ನು ವೆಬ್‌ಗಳಿಗೆ ಅಪ್‌ಲೋಡ್ ಮಾಡಲಾಗಿದೆ. 15,255 ರಲ್ಲಿ 11,118 (ಶೇಕಡಾ 73) ಅನ್ನು ರಾಜ್ಯದ ಪ್ರಮುಖ ನಗರಗಳಿಂದ ಅಪ್‌ಲೋಡ್ ಮಾಡಲಾಗಿದೆ.

ಮುಂಬೈನಿಂದ 4,496 ಮತ್ತು ಪುಣೆಯಿಂದ 5,699 ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ. ಉಳಿದವುಗಳನ್ನು ಥಾಣೆ, ನಾಗಪುರ, ಹೊಸ ಮುಂಬೈ, ಪಿಂಪ್ರಿ ಚಿಂಚ್‌ವಾಡ್, ನಾಸಿಕ್, ಔರಂಗಾಬಾದ್ ಮತ್ತು ಸೊಲ್ಲಾಪುರದಿಂದ ಅಪ್‌ಲೋಡ್ ಮಾಡಲಾಗಿದೆ. ಜಿಲ್ಲೆಗಳ ಪೈಕಿ ಲಗಾಂವ್, ಥಾಣೆ ಗ್ರಾಮಾಂತರ, ಪಾಲ್ಘರ್ ಮತ್ತು ಕೊಲ್ಹಾಪುರದಿಂದ ಇಂತಹ 30 ಕ್ಕೂ ಹೆಚ್ಚು ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ.

“ಈ ವರ್ಷ ನಾವು 25 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಮಹಾರಾಷ್ಟ್ರದಾದ್ಯಂತ 50 ಜನರನ್ನು ಬಂಧಿಸಿದ್ದೇವೆ. ಮಕ್ಕಳ ಅಶ್ಲೀಲತೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ನಾವು ಇನ್ನೂ ತನಿಖೆ ಮುಂದುವರಿಸುತ್ತೇವೆ” ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಅಧೀಕ್ಷಕ ಸಂಜಯ್ ಸಿಂತ್ರೆ ಹೇಳಿದ್ದಾರೆ.

ನಾಗ್ಪುರ ನಗರದಲ್ಲೇ 302 ದೂರುಗಳು ದಾಖಲಾಗಿದ್ದು, 38 ಎಫ್ಐಆರ್‌ಗಳನ್ನು ನೋಂದಾಯಿಸಿ, 14 ಜನರನ್ನು ಬಂಧಿಸಿಸಲಾಗಿದೆ. ಮುಂಬೈ ಪೋಲಿಸರು 4,496 ದೂರುಗಳನ್ನು ಸ್ವೀಕರಿಸಿದ್ದಾರೆ . ಆದರೆ, ಕೇವಲ 11 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಮೂವರನ್ನು ಬಂಧಿಸಿಸಲಾಗಿದೆ. ಇತ್ತ ಪುಣೆ ಪೊಲೀಸರು 16 ಎಫ್‌ಐಆರ್ ದಾಖಲಿಸಿದ್ದು, ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಾದಲ್ಲಿ ರದ್ದಾಗಲಿದೆ ಒಪಿಟಿ ಕಾಯ್ದೆ?; 80 ಸಾವಿರ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights