ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆ ಶಿವಕುಮಾರ್ ಬೆಂಬಲಿಗರಿಂದ ಪ್ರತಿಭಟನೆ!

ಸಿಡಿ ಯುವತಿ ಡಿಕೆ ಶಿವಕುಮಾರ್ ಕೈಗೊಂಬೆಯಾಗಿದ್ದಾಳೆಂದು ಸಿಡಿ ಯುವತಿ ಪೋಷಕರು ಆರೋಪಿಸುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. “ಡಿಕೆ ಶಿವಕುಮಾರ್ ಗಂಡಸೇ ಅಲ್ಲ ನಾನು ಗಂಡಸು. ಅವನು ಗಂ…” ಎಂದು ಅವಾಚ್ಯ ಶಬ್ದಗಳಿಂದ ಡಿಕೆ ಶಿವಕುಮಾರ್ ಅವರನ್ನು ರಮೇಶ್ ಜಾರಕಿಹೊಳಿ ನಿಂದಿಸಿದ್ದಾರೆ.

ಹೌದು… ನಿನ್ನೆ ಸಿಡಿ ಲೇಡಿ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದೆ. ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ಅವರಿಗೆ ಬಳಕೆ ಮಾಡಿದ ಪದಗಳ ವಿರುದ್ಧ ಡಿಕೆ ಶಿವಕುಮಾರ್ ಬೆಂಬಲಿಗರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಮೇಶ್ ಪೋಸ್ಟ್ಗಳಿಗೆ ಬೆಂಕಿ ಹಚ್ಚಿ ಚಪ್ಪಿಲಿಯಿಂದ ಹೊಡೆದಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ‘ಸಿಡಿ ಯುವತಿಯನ್ನುಮೋಸ ಮಾಡಿದವರನ್ನು ಬಂಧಿಸಿ ಆಕೆಗೆ ಜೀವ ಬೆದರಿಕೆ ಹಾಕಿದ ರಮೇಶ್ ಜಾರಕಿಹೊಳಿ ಯನ್ನು ಕೂಡಲೇ ಬಂಧಿಸಿ’ ಎಂದು ಆಗ್ರಹಿಸಿದ್ದಾರೆ.

ಸಿಡಿ ಲೇಡಿ ವೀಡಿಯೋದಲ್ಲಿ ನೇರವಾಗಿ ಹೇಳಿಕೊಂಡಿದ್ದಾಳೆ. ರಮೇಶ್ ಜಾರಕಿಹೊಳಿ ತನಗೆ ಮೋಸ ಮಾಡಿದ್ದಾರೆಂದು. ‘ನನಗೆ ಸಾಯಿಬೇಕೋ ಬದುಕಬೇಕೋ ನನಗೆ ಗೊತ್ತಾಗುತ್ತಿಲ್ಲ. ಸತ್ತರೂ ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ ಎಂದು ಹೇಳಿದ್ದಾಳೆ. ‘ಈ ಹೇಳಿಕೆ ಸಾಕು ರಮೇಶ್ ಅವರನ್ನು ಬಂಧಿಸಲು. ಅವರನ್ನು ಯಾಕೆ ಸುಮ್ಮನೆ ಬಿಟ್ಟಿದ್ದೀರಾ? ಮಾತ್ರವಲ್ಲದೇ ಆಕೆ ವಕೀಲರ ಮೂಲಕ ದೂರು ಕೊಟ್ಟಿದ್ದಾಳೆ. ಆದರೂ ರಮೇಶ್ ಜಾರಕಿಹೊಳಿಯನ್ನು ಯಾಕೆ ಬಂಧಿಸಿಲ್ಲ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights