Bigg Boss : ಶಮಂತ್ ತಲೆಗೆ ಎಣ್ಣೆ ಹಚ್ಚಿದ ಪ್ರಿಯಾಂಕ : ಟಾಸ್ಕ್ ನಲ್ಲಿ ವಿನ್ ಆದ ಶಮಂತ್!
ಬಿಗ್ ಬಾಸ್ ಮನೆಯಲ್ಲಿ ಶಮಂತ್ ಮತ್ತು ಪ್ರಿಯಾಂಕ ಕಡಿಮೆ ಮಾತನಾಡಿದ್ರು ಚಕ್ರವರ್ತಿ ಚಂದ್ರಚೂಡ್ ಕಣ್ಣಿಗೆ ಅದು ಬೇರೆ ರೀತಿ ಕಾಣಿಸಿಕೊಳ್ಳುತ್ತೆ. ಅದ್ಯಾಕೋ ಏನೋ ಚಕ್ರವರ್ತಿ ಅವರಿಬ್ಬರು ಮಾತನಾಡಿದಾಗಲೆಲ್ಲ ಮನೆಯ ಯಾವ ಮೂಲೆಯಲ್ಲೇ ಇದ್ದರೂ ಒಂದು ಕಮೆಂಟ್ ಪಾಸ್ ಮಾಡ್ತಾರೆ. ತಮ್ಮಿಬ್ಬರ ಬಗ್ಗೆ ಚಕ್ರವರ್ತಿ ಹಾಗೆ ಮಾತನಾಡುತ್ತಾರೆಂದು ತಿಳಿದು ನಿನ್ನೆ ಶಮಂತ್ ಪ್ರಿಯಾಂಕ ಕೈಯಲ್ಲಿ ತಲೆಗೆ ಎಣ್ಣೆ ಹಚ್ಚಿಸಿಕೊಂಡಿದ್ದಾರೆ.
ಹೌದು… ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಅಂತ ಬಂದಾಗ ಯಾರೂ ಕೂಡ ಯಾರೇನೇ ಹೇಳಲಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕಾರಣ ಗೆಲ್ಲುವ ಛಲ. ನಿನ್ನೆ ಶಮಂತ್ ಕೂಡ ಮಾಡಿದ್ದು ಇದನ್ನೇ.
ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರಿಗೂ ಒಂದೊಂದು ಟಾಸ್ಕ್ ಕೊಟ್ಟಿದ್ದರು. ಅದ್ರಲ್ಲಿ ಶಮಂತ್ ಗೆ ಮನೆಯ ಒಬ್ಬ ಸದಸ್ಯರಿಗೆ ಕೈ ತೊಳೆಯುವಂತೆ ಮಾಡಬೇಕು. ಈ ಟಾಸ್ಕ್ ಗೆಲ್ಲಲು ಶಮಂತ್ ಪ್ರಿಯಾಂಕ ಕೈಯಿಂದ ತಲೆಗೆ ಎಣ್ಣೆ ಹಚ್ಚಿಕೊಂಡರು. ಎಣ್ಣೆ ಹಚ್ಚಿದ ಬಳಿಕ ಪ್ರಿಯಾಂಕ ಕೈ ತೊಳಿದುಕೊಂಡಿದ್ದಕ್ಕೆ ಶಮಂತ್ ಟಾಸ್ಕ್ ನಲ್ಲಿ ವಿನ್ ಆದರು.
ಈಗಾಗಲೇ ಮನೆಯಲ್ಲಿ ಚಕ್ರವರ್ತಿ ಪ್ರಿಯಾಂಕ ಶಮಂತಗೆ ಊಟ ಮಾಡಿಸಿದರ ಬಗ್ಗೆ ಕಾಮೆಂಟ್ ಮಾಡಿ ದೊಡ್ಡ ಜಗಳವೇ ಆಗಿತ್ತು. ಪ್ರಿಯಾಂಕ ಚಕ್ರವರ್ತಿಗೆ ವಾರ್ಗಿನಿಂಗ್ ಕೂಡ ಕೊಟ್ಟಿದ್ರು. ಆದರೂ ಚಕ್ರವರ್ತಿ ಮಾತ್ರ ತಮ್ಮ ಮಾತುಗಳಿಗೆ ಬೀಗ ಹಾಕಿಲ್ಲ. ಶಮಂತ್ ಹಾಗೂ ಪ್ರಿಯಾಂಕ ಕೊಂಚ ಮಾತನಾಡಿದ್ರೂ ಚಕ್ರವರ್ತಿ ಒಂದು ಕಾಮೆಂಟ್ ಪಾಸ್ ಮಾಡುತ್ತಾರೆ. ಮನೆಯಾ ಎಲ್ಲಾ ಹುಡುಗರು ಎಲ್ಲಾ ಹುಡುಗಿಯರೊಂದಿಗೆ ಶಮಂತ್ ಪ್ರಿಯಾಂಕ ಗಿಂತಲೂ ಸಲುಗೆಯಿಂದ ಇದ್ದಾರೆ. ಆದರೆ ಶಮಂತ ಮತ್ತು ಪ್ರಿಯಾಂಕ ಮಾತನಾಡಿದಾಗ ಚಕ್ರವರ್ತಿಗೆ ಆಗುವ ಬೇಸರ ಮನೆಯ ಇನ್ಯಾವ ಸದಸ್ಯರೂ ಪರಸ್ಪರ ಮಾತನಾಡಿದಾಗ ಆಗುವುದಿಲ್ಲ.
ಇದಕ್ಕೆ ಕಾರಣ ಚಕ್ರವರ್ತಿಯವರೇ ಹೇಳಬೇಕು.