ಆರ್ಡರ್ ವಿತರಣೆಯಲ್ಲಿ ವಿಳಂಬ : ರೆಸ್ಟೋರೆಂಟ್ ಮಾಲೀಕನನ್ನೇ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್..!

ಆಹಾರ ವಿತರಣೆಯಲ್ಲಿ ತಡವಾಗಿದ್ದಕ್ಕೆ ರೆಸ್ಟೋರೆಂಟ್‌ನ ಮಾಲೀಕನನ್ನೇ ಸ್ವಿಗ್ಗಿ ಡೆಲಿವರಿ ಬಾಯ್ ಕೊಲೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಮೃತನನ್ನು ಸುನೀಲ್ ಎಂದು ಗುರುತಿಸಲಾಗಿದ್ದು, ಇವರು ಗ್ರೇಟರ್ ನೋಯ್ಡಾದಲ್ಲಿ ಜಾಮ್ ಜಾಮ್ ಆಹಾರ ವಿತರಣಾ ರೆಸ್ಟೋರೆಂಟ್ ನಡೆಸುತ್ತಿದ್ದರು. ಸ್ವಿಗ್ಗಿ ಡೆಲಿವರಿ ಬಾಯ್ ಬುಧವಾರ ಬೆಳಿಗ್ಗೆ 12.15 ಕ್ಕೆ ಚಿಕನ್ ಬಿರಿಯಾನಿ ಮತ್ತು ಪೂರಿ ಸಬ್ಜಿಯ ಆರ್ಡರ್ ಸಂಗ್ರಹಿಸಲು ರೆಸ್ಟೋರೆಂಟ್‌ಗೆ ಬಂದಿದ್ದಾನೆ.

ಈ ವೇಳೆ ಚಿಕನ್ ಬಿರಿಯಾನಿ ಆರ್ಡರ್ ಅನ್ನು ಆತನಿಗೆ ತಕ್ಷಣವೇ ಹಸ್ತಾಂತರಿಸಿಲಾಗಿದೆ. ಆದರೆ ನಾರಾಯಣ್ ಎಂಬ ರೆಸ್ಟೋರೆಂಟ್‌ನ ಕೆಲಸಗಾರ ಡೆಲಿವರಿ ಬಾಯ್‌ಗೆ ಎರಡನೇ ಆರ್ಡರ್ ( ಪೂರಿ ಸಬ್ಜಿ)ಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾನೆ. ಇದರಿಂದ ಡೆಲಿವರಿ ಬಾಯ್ ಕೋಪಗೊಂಡು ಕೆಲಸಗಾರನೊಂದಿಗೆ ಜಗಳವಾಡಲು ಆರಂಭಿಸಿದ್ದಾನೆ.

ಇಬ್ಬರ ನಡುವೆ ಮಾಲೀಕ ಸುನಿಲ್ ಮಧ್ಯಪ್ರವೇಶಿಸಿದ್ದಾರೆ. ಆಗ ಆರೋಪಿ ಸುನೀಲ್ ತಲೆಗೆ ಗುಂಡು ಹಾರಿಸಿದ್ದಾನೆ. ತಕ್ಷಣವೇ ಸುನಿಲ್ ಅವರನ್ನು ಯಥಾರ್ಥ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅವರು ಬದುಕುಳಿಯಲಿಲ್ಲ. ಘಟನೆಯ ವೇಳೆ ಆರೋಪಿ ಮದ್ಯದ ಅಮಲಿನಲ್ಲಿದ್ದ ಎನ್ನಲಾಗುತ್ತಿದೆ.

ಸ್ಥಳದ ಬಳಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯದ ಸಹಾಯದಿಂದ ಪೊಲೀಸರು ಡೆಲಿವರಿ ಬಾಯ್ ಗಾಗಿ ಹುಡುಕುತ್ತಿದ್ದಾರೆ. ಶೀಘ್ರವೇ ತಲೆಮರಿಸಿಕೊಂಡಿರುವ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights